ದೇಶದ ೧೫ ರಾಜ್ಯಗಳಲ್ಲಿ ನೆರೆಯನ್ನು ದರ್ಶಿಸುವ ಸ್ಥಿತಿ

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡ, ಗುಜರಾತ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ಮುಂಬರುವ ೩ ದಿನಗಳಲ್ಲಿ ಧಾರಾಕಾರ ಮಳೆ ಸುರಿಯುವುದಾಗಿ ಎಚ್ಚರಿಸಲಾಗಿದೆ.

4 ದಿನಗಳಿಂದ ಅಪಾಯದ ಮಟ್ಟ ಏರಿದ ದೆಹಲಿಯಲ್ಲಿನ ಯಮುನಾ ನದಿ !

ಹರಿಯಾಣದ ಹಥಿನಿಕುಂಡ್ ಅಣೆಕಟ್ಟಿನಿಂದ ನಿರಂತರವಾಗಿ ನೀರು ಬಿಡುತ್ತಿರುವುದರಿಂದ ಯಮುನಾ ನದಿಯಲ್ಲಿ ಪ್ರವಾಹ ಬಂದಿದೆ. ಜುಲೈ 13 ರಂದು ನೀರು 208.66 ಮೀಟರ್‌ ಎತ್ತರಕ್ಕೆ ತಲುಪಿತ್ತು. ಇದರಿಂದಾಗಿ ಸರ್ವೋಚ್ಚ ನ್ಯಾಯಾಲಯದ ಹೊರಭಾಗದ ರಸ್ತೆ ಜಲಾವೃತವಾಯಿತು.

ಧಾರಾಕಾರ ಮಳೆಯಿಂದಾಗಿ ಹಿಮಾಚಲ ಪ್ರದೇಶಕ್ಕೆ 4 ಸಾವಿರ ಕೋಟಿ ರೂಪಾಯಿಗಳ ಹಾನಿ !

ಧಾರಾಕಾರ ಮಳೆಯ ರಭಸಕ್ಕೆ ಉತ್ತರ ಭಾರತವು ತತ್ತರಿಸಿದ್ದು ಹಿಮಾಚಲ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದಾಗಿ ಇಲ್ಲಿಯ ವರೆಗೆ ಅನೇಕ ಕಡೆಗಳಲ್ಲಿ ಭೂಕುಸಿತ ಸಂಭವಿಸಿದ್ದು ಜನರು ನೀರಿನ ಪ್ರವಾಹವನ್ನು ಎದುರಿಸಬೇಕಾಗುವುದು. ಇಲ್ಲಿಯ ವರೆಗೆ 17 ಜನರು ಸಾವನ್ನಪ್ಪಿದ್ದಾರೆ.

ದೇಶದ ೭ ರಾಜ್ಯಗಳಲ್ಲಿ ನೆರೆಯ ಪರಿಸ್ಥಿತಿ !

ದೇಶದಲ್ಲಿನ ೭ ರಾಜ್ಯಗಳಲ್ಲಿ ಧಾರಾಕಾರ ಮಳೆಯಿಂದಾಗಿ ನೆರೆಯ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಲ್ಲಿ ಉತ್ತರಾಖಂಡ, ಅಸ್ಸಾಂ, ಹಿಮಾಚಲ ಪ್ರದೇಶ, ಗೋವಾ, ಕರ್ನಾಟಕ, ಕೇರಳ ಮತ್ತು ನಾಗಾಲ್ಯಾಂಡ್ ಈ ರಾಜ್ಯಗಳು ಒಳಗೊಂಡಿವೆ.

ಅಮರನಾಥ ಯಾತ್ರೆ ಸತತ ಎರಡನೇ ದಿನವೂ ಸ್ಥಗಿತ !

ದಕ್ಷಿಣ ಕಾಶ್ಮೀರದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಅಮರನಾಥ ಯಾತ್ರೆಯನ್ನು ಸತತ ೨ನೇ ದಿನವೂ ಸ್ಥಗಿತಗೊಳಿಸಲಾಗಿದೆ. ಧಾರಾಕಾರ ಮಳೆಯ ನಂತರವೂ ಇಲ್ಲಿಯವರೆಗೆ ೮೪ ಸಾವಿರದ ೭೬೮ ಯಾತ್ರಿಕರು ಅಮರನಾಥನ ದರ್ಶನ ಮಾಡಿದ್ದಾರೆ. ಮಳೆಯಿಂದಾಗಿ ಕೆಲವುಕಡೆಗೆ ಭೂ ಕುಸಿತ ಉಂಟಾಗಿ ರಸ್ತೆಗಳನ್ನು ಬಂದ್ ಮಾಡಲಾಯಿತು.

ಮಾನುಷ್ಯನಿಂದ ಭೂಗರ್ಭದ ನೀರಿನ ಬೃಹತ್ ನೀರಾವರಿಯಿಂದಾಗಿ ಭೂಮಿಯ ಅಕ್ಷ (ಎಕ್ಸಿಸ್) ಬದಲಾಗುತ್ತಿದೆ ! – ಸಂಶೋಧನೆ

ಅತಿಯಾದ ನೀರಾವರಿಯಿಂದಾಗಿ ವಿಶ್ವಮಟ್ಟದಲ್ಲಿ ಸಮುದ್ರದ ಮಟ್ಟ ಏರಿಕೆ !

ಮೆಕ್ಸಿಕೋ ದೇಶದಲ್ಲಿ ಅತಿಯಾದ ಉಷ್ಣತೆಯಿಂದ 100 ಜನರ ಸಾವು

ದೇಶದಲ್ಲಿ ತೀವ್ರ ಉಷ್ಣತೆಯ ಗಾಳಿಯಿಂದ ಕಳೆದ 2 ವಾರಗಳಲ್ಲಿ 100 ಜನರು ಸಾವನ್ನಪ್ಪಿದ್ದಾರೆ. ಈ ಜನರು ಅತಿಸಾರದಿಂದ ಸಾವನ್ನಪ್ಪಿದ್ದಾರೆ ಎಂದು ಬೆಳಕಿಗೆ ಬಂದಿದೆ. ಉಷ್ಣತೆಯ ಗಾಳಿಯಿಂದಾಗಿ ದೇಶದ ಕೆಲವು ಸ್ಥಳಗಳಳ್ಲಿ ತಾಪಮಾನ 50 ಡಿಗ್ರಿ ಸೆಲ್ಷಿಯಸ್ ಗಿಂತ ಹೆಚ್ಚಾಗಿದೆ.

ಮುಂದಿನ 15 ದಿನಗಳಲ್ಲಿ ದೇಶದ 16 ರಾಜ್ಯಗಳಲ್ಲಿ ಮಳೆ ಬರಲಿದೆ! – ಹವಾಮಾನ ಇಲಾಖೆ

ದೆಹಲಿ, ಮಧ್ಯಪ್ರದೇಶ, ಝಾರಖಂಡ, ಛತ್ತೀಸಗಡ, ಗಂಗಾಕ್ಷೇತ್ರ ಇರುವ ಬಂಗಾಳ ಮತ್ತು ಈಶಾನ್ಯದ 8 ರಾಜ್ಯಗಳಿಗೆ ಮುಂದಿನ 15 ದಿನಗಳಲ್ಲಿ ಧಾರಾಕಾರ ಮತ್ತು ಸತತ ಮಳೆ ಬೀಳುವ ಸಾಧ್ಯತೆಯಿದೆ.

ದಕ್ಷಿಣ ಪೂರ್ವ ಏಷ್ಯಾದಲ್ಲಿ ಭೂಕಂಪ !

ಜೂನ್ ೨೦ ರಂದು ನಡೆದಿರುವ ಈ ಭೂಕಂಪ ೫.೫ ರಿಕ್ಟರ್ ತೀವ್ರತೆಯ ಇರುವುದಾಗಿ ಯುರೋಪಿಯನ್ ಮೆಡಿಟರೇನಿಯನ್ ಸೇಸ್ಮಾಲಾಜಿಕಲ್ ಸೆಂಟರ್ ಇದು ಮಾಹಿತಿ ನೀಡಿದೆ.

‘ಗುಜರಾತಗೆ ಅಪ್ಪಳಿಸಿ ರಾಜಸ್ಥಾನದತ್ತ ಸಾಗಿದ ಬಿಪರ್‌ಜಾಯ್’ ಚಂಡಮಾರುತ !

‘ಬಿಪರ್‌ಜಾಯ್’ ಚಂಡಮಾರುತವು ಜೂನ್ ೧೫ ರ ರಾತ್ರಿ ಗುಜರಾತ‌ನ ಜಖಾವು ಕರಾವಳಿಗೆ ಅಪ್ಪಳಿಸಿದ್ದು, ೨ ಜನರು ಸಾವನ್ನಪ್ಪಿದ್ದಾರೆ ಮತ್ತು ೨೨ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.