ಚಂದ್ರಯಾನ-3 ಮಿಷನ್ ಯಶಸ್ವಿಯಾಗಲಿದೆ ! – ಕೋಡಿಮಠದ ಶ್ರೀ

ಕೋಡಿಮಠದ ಶ್ರೀ ಶಿವಾನಂದ ಸ್ವಾಮೀಜಿ ಅವರ ಭವಿಷ್ಯವಾಣಿ

ಧಾರಾಕಾರ ಮಳೆ, ಭೂಕಂಪಗಳು ಮತ್ತು ಸುನಾಮಿಗಳಂತಹ ನೈಸರ್ಗಿಕ ವಿಕೋಪಗಳಿಂದಾಗಿ ಜಗತ್ತಿನಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಲಿದೆ !

ಬೆಳಗಾವಿ – ಶ್ರಾವಣ ಮಾಸದ ಮಧ್ಯದ ಕಾಲಾವಧಿಯಲ್ಲಿ ಜಗತ್ತನ್ನೇ ಕೊಚ್ಚಿಕೊಂಡು ಹೋಗುವಂತಹ ಮಳೆಯಾಗಲಿದೆ. ಭೂಕಂಪದಂತಹ ಘಟನೆಗಳು ನಡೆಯಲಿವೆ. ಸುನಾಮಿ ಬರಲಿದ್ದು, ಸಾವಿನ ಸಂಖ್ಯೆ ಹೆಚ್ಚಾಗಲಿದೆ. ವಿಶ್ವ ಮಟ್ಟದಲ್ಲಿ ಯುದ್ಧದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಕೋಡಿಮಠದ ಸ್ವಾಮಿ ಶಿವಾನಂದ ಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ. 2024ರ ಲೋಕಸಭೆ ಸಾರ್ವತ್ರಿಕ ಚುನಾವಣೆ ಬಗ್ಗೆ ಸ್ವಾಮೀಜಿಗಳು ಏನನ್ನೂ ಹೇಳಿಲ್ಲ.

(ಸೌಜನ್ಯ – Asianet Suvarna News)

ಕೋಡಿಮಠದ ಸ್ವಾಮಿ ಶಿವಾನಂದ ಸ್ವಾಮಿಗಳು ನುಡಿದ ಭವಿಷ್ಯ!

1. ಜಾಗತಿಕ ವಿಷಾನಿಲ ಭಾರತದ ಮೇಲೆಯೂ ದುಷ್ಪರಿಣಾಮ ಬೀರಲಿದೆ. ದೊಡ್ಡ ನಗರಗಳು ಭೂಕಂಪಗಳಿಗೆ ತುತ್ತಾಗಲಿವೆ. ಇದ್ದಕ್ಕಿದ್ದಂತೆ ಜನರು ಸಾಯುತ್ತಾರೆ. ಮಳೆ, ಪ್ರವಾಹ, ಭೂಕಂಪ, ಪ್ರವಾಹದಲ್ಲಿ ತೇಲಿಕೊಂಡು ಹೋಗುವುದು ಇತ್ಯಾದಿಗಳು ಭಾರತ ಮಾತ್ರವಲ್ಲ, ಜಗತ್ತೇ ಸಂಕಷ್ಟಕ್ಕೆ ಸಿಲುಕಲಿದೆ.

2. ಮಳೆಯಿಂದಾಗಿ ಕನಿಷ್ಠ 2 ದೇಶಗಳಿಗೆ ಹೆಚ್ಚಿನ ಅಪಾಯವಿದೆ. ಭಾರತವೂ ಇನ್ನು ಕೆಲವೇ ದಿನಗಳಲ್ಲಿ ಜಲಪ್ರಳಯಕ್ಕೆ ಸಾಕ್ಷಿಯಾಗುವ ಲಕ್ಷಣಗಳಿವೆ.

3. ಭಾರತದ ದಕ್ಷಿಣ ಭಾಗಕ್ಕೆ ಸಮೃದ್ಧಿ ಬರುತ್ತದೆ.

4. ದೇವರನ್ನು ನಂಬಿದವರಿಗೆ ಯಾವುದೇ ತೊಂದರೆ ಆಗುವುದಿಲ್ಲ. ನಂಬಿಕೆಯಿಲ್ಲದವರಿಗೆ ತೊಂದರೆಯಾಗುತ್ತದೆ. ಕೆಲವರಿಗೆ ನಂಬಿಕೆಯಿದ್ದರೂ ಪ್ರಕೃತಿಯ ನಿಯಮಾನುಸಾರ ತೊಂದರೆ ಉಂಟಾಗಬಹುದು.

5. ಹಣದ ಹಿಂದೆ ಬಿದ್ದವನು ದೇವರನ್ನು ಮರೆತಿದ್ದಾನೆ. ದೇವರಲ್ಲಿ ನಂಬಿಕೆ ಇಟ್ಟು ಬದುಕಬೇಕು. ಈ ನಂಬಿಕೆಯನ್ನು ಕಳೆದುಕೊಂಡಿರುವ ಪರಿಣಾಮವನ್ನು ನಾವು ನೋಡುತ್ತಿದ್ದೇವೆ.

6. ಸದ್ಯದ ರಾಜಕೀಯ ಕೊನೆಗೊಂಡರೆ ರಾಜ್ಯದಲ್ಲಿ ಮಹಿಳಾ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ.

(ಸೌಜನ್ಯ – Public TV)

ಚಂದ್ರಯಾನ ಮಿಷನ್ ಯಶಸ್ವಿಯಾಗಲಿದೆ !

ಚಂದ್ರನ ಮೇಲೆ ಕಾಲಿಡುವ ದೇಶ ಎಂದು ಸಿದ್ಧವಾಗಲಿರುವ ಭಾರತದ ‘ಚಂದ್ರಯಾನ-3’ ಮಿಷನ್ ಯಶಸ್ವಿಯಾಗಲಿದೆ ಎಂದು ಶ್ರೀ ಶಿವಾನಂದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಚಂದ್ರನ ದಕ್ಷಿಣ ಭಾಗದಲ್ಲಿ ಇಳಿಯುವ ಮೊದಲ ದೇಶ ಭಾರತವಾಗಲಿದೆ.