ಭೀಕರ ಉಷ್ಣತೆಯಿಂದ ಗ್ರೀಸ್ ನಲ್ಲಿ ಕಾಡಿಗೆ ತಗಲಿದ್ದ ಬೆಂಕಿಯನ್ನು ನಂದಿಸುವಾಗ ವಿಮಾನ ಪತನ !

ಇಬ್ಬರೂ ಪೈಲಟ್ ಗಳ ಸಾವು !

ಎಥೆನ್ಸ (ಗ್ರೀಸ್) – ಅನೇಕ ದಶಕಗಳ ದಾಖಲೆಗಳನ್ನು ಮುರಿಯುತ್ತಿರುವ ಭೀಕರ ಉಷ್ಣತೆಯಿಂದ ಯುರೋಪಿನ ಗ್ರೀಸ್ ದೇಶ ತತ್ತರಿಸಿದೆ. ಇಲ್ಲಿನ ಅರಣ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದೇ ಸಮಯದಲ್ಲಿ ದೇಶದ ಎವ್ಹಿಯಾ ದ್ವೀಪದಲ್ಲಿರುವ ಅರಣ್ಯದ ಕಾಡ್ಗಿಚ್ಚು ನಂದಿಸಲು ಪ್ರಯತ್ನಿಸಿದ ವಿಮಾನ ಪತನಗೊಂಡಿದೆ. ಇದರಲ್ಲಿ ಪೈಲಟ್ ಮತ್ತು ಅವನ ಸಹೋದ್ಯೋಗಿ ಸಾವನ್ನಪ್ಪಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಈ ಅಪಘಾತ ಜುಲೈ 25 ರಂದು ಮಧ್ಯಾಹ್ನ ಸಂಭವಿಸಿದೆ.
ಅರಣ್ಯದ ಒಂದು ಎತ್ತರದ ಮರದ ಕೊಂಬೆಯಲ್ಲಿ ವಿಮಾನದ ಒಂದು ಭಾಗ ಸಿಲುಕಿಕೊಂಡಿದ್ದರಿಂದ ಈ ಅವಘಡ ಸಂಭವಿಸಿದೆಯೆಂದು ಹೇಳಲಾಗುತ್ತಿದೆ. ಎವ್ಹಿಯಾ ದ್ವೀಪದ ಪ್ಲೈಟನಿಸ್ಟೋ ಗ್ರಾಮದ ಬಳಿ ಅಪಘಾತ ಸಂಭವಿಸಿದೆ.

(ಸೌಜನ್ಯ – euronews)