ವಿಶಾಖಪಟ್ಟಣಂ (ಆಂಧ್ರಪ್ರದೇಶ) ದಲ್ಲಿ ಪೋಷಕರು ೩೦ ಸಾವಿರ ರೂಪಾಯಿ ಮೌಲ್ಯದ ನಾಯಿಯನ್ನು ತೆಗೆಸಿಕೊಡದೇ ಇದ್ದರಿಂದ ೧೬ ವರ್ಷದ ಬಾಲಕನ ಆತ್ಮಹತ್ಯೆ

ಮಕ್ಕಳಿಗೆ ಬಾಲ್ಯದಿಂದಲೂ ಸಾಧನೆಯನ್ನು ಕಲಿಸದೇ ಇದ್ದುದರಿಂದ, ಅವರು ಇಂತಹ ಅಶಾಶ್ವತ ವಿಷಯಗಳಲ್ಲಿ ಸಿಲುಕಿ ತಮ್ಮ ಅಮೂಲ್ಯ ಜೀವನವನ್ನು ತ್ಯಜಿಸುತ್ತಿದ್ದಾರೆ. ಹಿಂದೂ ರಾಷ್ಟ್ರದಲ್ಲಿ ಪ್ರತಿಯೊಬ್ಬರಿಗೂ ಧರ್ಮಶಿಕ್ಷಣ ಮೂಲಕ ಮಾನವ ಜನ್ಮದ ಉದ್ದೇಶವನ್ನು ಕಲಿಸಿ ಅವರಿಂದ ಶಾಶ್ವತ ಆನಂದವನ್ನು ನೀಡುವ ಸಾಧನೆಯನ್ನು ಮಾಡಿಸಿಕೊಳ್ಳಲಾಗುವುದು !

ಐ.ಎಂ.ಎ.ನ ಅಧ್ಯಕ್ಷ ಡಾ. ಜಾನ್‍ರೋಜ ಜಯಲಾಲ್ ಅವರ ಮನವಿಯನ್ನು ತಿರಸ್ಕರಿಸಿದ ದೆಹಲಿ ಉಚ್ಚನ್ಯಾಯಾಲಯ

ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (ಐ.ಎಂ.ಎ.ನ) ಅಧ್ಯಕ್ಷ ಡಾ. ಜಾನ್‍ರೋಜ ಆಸ್ಟಿನ್ ಜಯಲಾಲ್ ಅವರಿಗೆ ಯಾವುದೇ ಧರ್ಮದ ಪ್ರಚಾರ ಮಾಡಲು ತಮ್ಮ ಸಂಘಟನೆಯ ವೇದಿಕೆಯನ್ನು ಬಳಸದಂತೆ ಕನಿಷ್ಠ ನ್ಯಾಯಾಲಯವು ಇತ್ತಿಚೆಗೆ ಆದೇಶಿಸಿತ್ತು.

ಆದಾಯ ತೆರಿಗೆ ಇಲಾಖೆಯಿಂದ ಪಿ.ಎಫ್.ಐ.ನ ನೋಂದಣಿ ರದ್ದು !

ಆದಾಯ ತೆರಿಗೆ ಇಲಾಖೆಯು ಜಿಹಾದಿ ಸಂಸ್ಥೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ.)ದ ನೊಂದಣಿಯನ್ನು ರದ್ದು ಪಡಿಸಿದೆ. ಸೆಕ್ಷನ್ ೧೨ ಅ (೩) ರ ಅಡಿಯಲ್ಲಿ ಒಂದು ಸಂಸ್ಥೆ ಅಥವಾ ಟ್ರಸ್ಟ್ ಕಾರ್ಯನಿರ್ವಹಿಸದಿದ್ದರೆ, ಅದರ ನೋಂದಣಿಯನ್ನು ರದ್ದುಗೊಳಿಸಬಹುದು.

ಕೇರಳದ ನನ್ ಲ್ಯೂಸಿ ಕಲಾಪುರಾ ಇವರನ್ನು ಗಡಿಪಾರು ಮಾಡುವುದರ ವಿರುದ್ಧದ ಅಂತಿಮ ಮನವಿಯನ್ನು ತಿರಸ್ಕರಿಸಿದ ವ್ಯಾಟಿಕನ್ !

ಕೇರಳದ ಕ್ಯಾಥೊಲಿಕ್ ನನ್ ಲ್ಯೂಸಿ ಕಲಾಪುರ ಇವರನ್ನು ಚರ್ಚ್‍ನಿಂದ ಉಚ್ಚಾಟನೆ ಮಾಡಿದ ವಿರುದ್ಧದ ಅಂತಿಮ ಮೇಲ್ಮನವಿಯನ್ನು ವ್ಯಾಟಿಕನ್‍ನ ಕ್ರೈಸ್ತ ಉಚ್ಚನ್ಯಾಯಾಲಯವು ತಿರಸ್ಕರಿಸಿದೆ. ನಂತರ ನನ್ ಲ್ಯೂಸಿ ಕಲಾಪುರ ಅವರನ್ನು ಇಲ್ಲಿನ ಕಾನ್ವೆಂಟ್‍ನಲ್ಲಿರುವ ನಿವಾಸವನ್ನು ಖಾಲಿ ಮಾಡಲು ತಿಳಿಸಲಾಗಿದೆ.

ಇಸ್ಲಾಮಿಕ್ ಸ್ಟೇಟ್‍ಗೆ ಭರ್ತಿಯಾಗಿದ್ದ ಮತ್ತು ಈಗ ಅಫಘಾನ್ ಜೈಲಿನಲ್ಲಿರುವ ೪ ಕೇರಳ ಮಹಿಳೆಯರನ್ನು ಭಾರತವು ವಾಪಾಸು ಕರೆ ತರುವುದಿಲ್ಲ !

ಅಫಘಾನಿಸ್ತಾನಕ್ಕೆ ಹೋಗಿ ಇಸ್ಲಾಮಿಕ್ ಸ್ಟೇಟ್ ಈ ಜಿಹಾದಿ ಭಯೋತ್ಪಾದಕ ಸಂಘಟನೆಗೆ ಸಹಭಾಗಿಯಾದ ನಾಲ್ಕು ಭಾರತೀಯ ಮಹಿಳೆಯರಿಗೆ ಭಾರತಕ್ಕೆ ಮರಳಲು ಅವಕಾಶ ನೀಡುವುದಿಲ್ಲ. ಈ ಮಾಹಿತಿಯನ್ನು ಹಿರಿಯ ಅಧಿಕಾರಿಯೊಬ್ಬರು ನೀಡಿದ್ದಾರೆ. ಒಂದು ಆಂಗ್ಲ ದಿನಪತ್ರಿಕೆ ಈ ಬಗ್ಗೆ ವರದಿಯನ್ನು ಪ್ರಕಟಿಸಿದೆ.

ಕಾಶಿ ಹಿಂದೂ ವಿಶ್ವವಿದ್ಯಾಲಯದ ಅಲೋಪತಿಯ ವೈದ್ಯರಿಗೆ ಆಯುರ್ವೇದದ, ಆಯುರ್ವೇದದ ವೈದ್ಯರಿಗೆ ಅಲೋಪತಿ ಶಿಕ್ಷಣವನ್ನು ನೀಡಲಾಗುವುದು !

ಕಾಶಿ ಹಿಂದೂ ವಿಶ್ವವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್. ವೈದ್ಯರು ಇನ್ನು ಆಯುರ್ವೇದ ಹಾಗೂ ಬಿ.ಎ.ಎಂ.ಎಸ್. ವೈದ್ಯರು ಅಲೋಪತಿಯನ್ನು ಕಲಿಯಬಹುದು. ಅದಕ್ಕಾಗಿ ವಿಶ್ವವಿದ್ಯಾಲಯವು ಒಂದು ವರ್ಷದ ‘ಹೋಲಿಸ್ಟಿಕ್ ಮೆಡಿಸಿನ್ ಪಿಜಿ ಡಿಪ್ಲೊಮಾ ಕೋರ್ಸ್’ (ಸಮಗ್ರ ಔಷಧಿ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್) ಅನ್ನು ಪ್ರಾರಂಭಿಸಲಿದೆ.

ಮುಸಲ್ಮಾನರು ಕೊರೊನಾ ಪ್ರತಿರೋಧಕ ಲಸಿಕೆ ಪಡೆಯುವುದನ್ನು ಮುಂದೂಡುತ್ತಾರೆ ! – ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ

ನಾನು ಪ್ರಜ್ಞಾಪೂರ್ವಕವಾಗಿ ಉಲ್ಲೇಖಿಸುತ್ತಿದ್ದೇನೆಂದರೆ ದೇಶದ ಮುಸಲ್ಮಾನಮರು ಪ್ರಸ್ತುತ ಕೊರೊನಾ ವ್ಯಾಕ್ಸಿನೇಷನ್‍ನಿಂದ ದೂರ ಸರಿಯುತ್ತಿದ್ದಾರೆ. ಅವರ ಮನಸ್ಸಿನಲ್ಲಿ ಇನ್ನೂ ಅನುಮಾನವಿದೆ. ಅವರು ಇನ್ನೂ ಭಯ ಪಟ್ಟುಕೊಳ್ಳುತ್ತಿದ್ದಾರೆ. ಅವರಲ್ಲಿ ವ್ಯಾಕ್ಸಿನೇಷನ್ ಬಗ್ಗೆ ತಪ್ಪು ಕಲ್ಪನೆ ಇದೆ ಎಂದು ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ.

ಸಮಾಜವನ್ನು ದಾರಿ ತಪ್ಪಿಸಲು ರಾಜಕೀಯ ದ್ವೇಷದಿಂದಾದ ಆರೋಪ ! – ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್

‘ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ದೇವಾಲಯಕ್ಕಾಗಿ ಕನಿಷ್ಠ ಬೆಲೆಗೆ ಭೂಮಿಯನ್ನು ಖರೀದಿಸಿದೆ. ಕೆಲವು ರಾಜಕೀಯ ಪಕ್ಷಗಳ ನಾಯಕರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಆರೋಪಿಸುವವರು ರಾಜಕೀಯದೊಂದಿಗೆ ನಿಕಟ ಸಂಬಂಧ ಹೊಂದಿದ್ದು ಸಮಾಜವನ್ನು ದಾರಿತಪ್ಪಿಸಲು ರಾಜಕೀಯ ದ್ವೇಷದಿಂದ ಆರೋಪಗಳನ್ನು ಮಾಡುತ್ತಿದೆ ಎಂದು ‘ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸ್ಪಷ್ಟೀಕರಣ ನೀಡಿದರು.

ಉತ್ತರಪ್ರದೇಶದಲ್ಲಿ ಮಹಿಳೆಯನ್ನು ಮತಾಂತರಿಸುತ್ತಿದ್ದ ಮೂರು ಮಂದಿ ಮತಾಂತರ ವಿರೋಧಿ ಕಾನೂನಿನಡಿಯಲ್ಲಿ ಬಂಧನ

ಓರ್ವ ಮಹಿಳೆಯನ್ನು ಮತಾಂತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂರು ಜನರನ್ನು ಮತಾಂತರ ವಿರೋಧಿ ಕಾಯ್ದೆಯಡಿಯಲ್ಲಿ ಬಂಧಿಸಿದ್ದಾರೆ. ಈ ಮಹಿಳೆ ಉತ್ತರಾಖಂಡ ಮೂಲದವಳಾಗಿದ್ದು ಪತಿಯ ನಿಧನದ ನಂತರ ಆರೋಪಿಯು ಆಮಿಷವೊಡ್ಡಿ ಅವಳನ್ನು ಉತ್ತರ ಪ್ರದೇಶದ ಶಹಾಬಾದ್ ಗ್ರಾಮಕ್ಕೆ ಕರೆತಂದು ಮತಾಂತರಗೊಳಿಸಿದನು.

ಕೈಯಲ್ಲಿ ಖಡ್ಗವನ್ನು ಹಿಡಿದು ಸುತ್ತಾಡುತ್ತಿದ್ದ ಮನೋರೋಗಿ ರಾಯ್ ಡಿಸೋಜ಼ ಪೊಲೀಸರ ಥಳಿತದಿಂದ ಸಾವು !

ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಪೊಲೀಸರ ಥಳಿತದಿಂದ ರಾಯ್ ಡಿಸೋಜ಼ (ವಯಸ್ಸು ೫೦) ಈ ಮನೋರೋಗಿಯು ಮೃತಪಟ್ಟಿದ್ದಾರೆ. ಈ ಪ್ರಕರಣದಲ್ಲಿ ೮ ಪೊಲೀಸರನ್ನು ಕೂಡಲೇ ಅಮಾನತುಗೊಳಿಸುವಂತೆ ದಕ್ಷಿಣ ಪೊಲೀಸ್ ಅಧಿಕಾರಿ ಪ್ರವೀಣ ಮಧುಕರ ಪವಾರರು ಆದೇಶಿಸಿದ್ದಾರೆ.