‘ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ಕೇವಲ ೧೦ ನಿಮಿಷಗಳಲ್ಲಿ ೨ ಕೋಟಿ ರೂಪಾಯಿಗಳ ಭೂಮಿಯನ್ನು ೧೮ ಕೋಟಿ ೫೦ ಲಕ್ಷ ರೂ.ಗಳಿಗೆ ಖರೀದಿಸಿದೆ ಎಂಬ ಆರೋಪ !
ಅಯೋಧ್ಯೆ – ‘ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ದೇವಾಲಯಕ್ಕಾಗಿ ಕನಿಷ್ಠ ಬೆಲೆಗೆ ಭೂಮಿಯನ್ನು ಖರೀದಿಸಿದೆ. ಕೆಲವು ರಾಜಕೀಯ ಪಕ್ಷಗಳ ನಾಯಕರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಆರೋಪಿಸುವವರು ರಾಜಕೀಯದೊಂದಿಗೆ ನಿಕಟ ಸಂಬಂಧ ಹೊಂದಿದ್ದು ಸಮಾಜವನ್ನು ದಾರಿತಪ್ಪಿಸಲು ರಾಜಕೀಯ ದ್ವೇಷದಿಂದ ಆರೋಪಗಳನ್ನು ಮಾಡುತ್ತಿದೆ ಎಂದು ‘ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸ್ಪಷ್ಟೀಕರಣ ನೀಡಿದರು. ಈ ನಿಟ್ಟಿನಲ್ಲಿ ಅವರು ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ನೀಡಿದ್ದಾರೆ. ೧೦ ನಿಮಿಷಗಳ ಹಿಂದೆ ೨ ಕೋಟಿ ರೂಪಾಯಿಗೆ ಖರೀದಿಸಿದ ಭೂಮಿಯನ್ನು ‘ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ೧೮ ಕೋಟಿ ೫೦ ಲಕ್ಷಕ್ಕೆ ಖರೀದಿಸಿದೆ ಎಂದು ಆಮ ಆದ್ಮಿ ಪಕ್ಷದ ಸಂಸದ ಮತ್ತು ವಕ್ತಾರ ಸಂಜಯ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಈ ವಿಷಯವನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳ ಮೂಲಕ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದರು.
‘Allegations are misleading, motivated by political hatred’: #RamJanmbhoomi Trust’s Champat Rai on corruption charges in land purchase#RamMandir https://t.co/9DAGds2c10
— Zee News English (@ZeeNewsEnglish) June 14, 2021
೧. ಈ ಆರೋಪಕ್ಕೆ, ೨೦೧೯ ರ ನವೆಂಬರ್ ೯ ರಂದು ರಾಮ ಮಂದಿರದ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದನಂತರ, ದೇಶಾದ್ಯಂತ ಜನರು ಅಯೋಧ್ಯೆಯಲ್ಲಿ ಭೂಮಿಯನ್ನು ಖರೀದಿಸಲು ಬರಲಾರಂಭಿಸಿದರು. ಆದ್ದರಿಂದ ಭೂಮಿಯ ಬೆಲೆಗಳು ಏರಿಕೆಯಾಗಿವೆ. ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವ ಭೂಮಿಯು ರೈಲ್ವೆ ನಿಲ್ದಾಣದ ಬಳಿಯಿರುವ ಖಾಲಿ ಭೂಮಿಯಾಗಿದೆ. ‘ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ದೇವಾಲಯಕ್ಕಾಗಿ ಈವರೆಗೆ ಖರೀದಿಸಿದ ಭೂಮಿಯನ್ನು ಕನಿಷ್ಠ ಬೆಲೆಗೆ ಖರೀದಿಸಲಾಗಿದೆ. ಯಾರೊಂದಿಗೆ ವ್ಯವಹಾರ ಆಗುತ್ತದೆಯೋ ಅವರ ಒಪ್ಪಿಗೆಯನ್ನು ಪಡೆದನಂತರ ಸಂಬಂಧಿತ ದಾಖಲೆಗಳ ಮೇಲೆ ಸಹಿಯನ್ನು ತೆಗೆದುಕೊಳ್ಳಲಾಗುತ್ತದೆ. ಎಲ್ಲಾ ರೀತಿಯ ‘ನ್ಯಾಯಾಲಯ ಶುಲ್ಕಗಳು’ ಮತ್ತು ‘ಸ್ಟಾಂಪ್ ಪೇಪರ್’ ಎಲ್ಲವನ್ನೂ ಆನ್‍ಲೈನ್‍ನಲ್ಲಿ ಖರೀದಿಸಲಾಗುತ್ತಿದೆ. ಒಪ್ಪಿಗೆ ಪತ್ರದ ಆಧಾರದ ಮೇಲೆ ಮಾತ್ರ ಭೂ ಖರೀದಿಯನ್ನು ಮಾಡಲಾಗುತ್ತಿದೆ. ವಹಿವಾಟಿನ ಪ್ರಕಾರ ಭೂ ಪರಿಹಾರವನ್ನು ಮಾರಾಟಗಾರರ ಖಾತೆಗೆ ಆನ್‍ಲೈನ್ ಮೂಲಕ ಜಮಾ ಮಾಡಲಾಗುತ್ತದೆ” ಎಂದು ಈ ಆರೋಪದ ಬಗ್ಗೆ ಚಂಪತ್ ರಾಯ್ ಇವರು ಹೇಳಿದರು.
೨. ಸಂಜಯ ಸಿಂಗ್ ಅವರು ತಮ್ಮ ಆರೋಪದಲ್ಲಿ, ಎರಡೂ ವ್ಯವಹಾರಗಳು ಮಾರ್ಚ್ ೧೮, ೨೦೨೧ ರಂದು ೧೦ ನಿಮಿಷಗಳ ಅಂತರದಲ್ಲಿ ನಡೆದಿವೆ. ಭಾರತದಲ್ಲಿ ಅಷ್ಟೇ ಅಲ್ಲ; ಜಗತ್ತಿನ ಯಾವುದೇ ಭೂಮಿಯ ಬೆಲೆ ಅಷ್ಟು ವೇಗವಾಗಿ ಹೆಚ್ಚಾಗುವುದಿಲ್ಲ. ಇದು ಸ್ಪಷ್ಟವಾಗಿ ಭ್ರಷ್ಟಾಚಾರದ ಪ್ರಕರಣವಾಗಿದೆ. ಯಾವುದೇ ಟ್ರಸ್ಟ್ ನಲ್ಲಿ ಭೂಮಿಯನ್ನು ಖರೀದಿಸಲು ಸೂಕ್ತವಾದ ಬೋರ್ಡ್‍ನ ಠರಾವು ಇರುತ್ತದೆ. ಟ್ರಸ್ಟ್ ಕೇವಲ ೫ ನಿಮಿಷಗಳಲ್ಲಿ ಈ ಪ್ರಸ್ತಾಪವನ್ನು ಹೇಗೆ ಅನುಮೋದಿಸಿತು ಮತ್ತು ತಕ್ಷಣ ಭೂಮಿಯನ್ನು ಹೇಗೆ ಖರೀದಿಸಿತು ?” ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಕೆಲವು ದಾಖಲೆಗಳನ್ನು ತೋರಿಸಿದರು.
ಸಿಬಿಐಯಿಂದ ತನಿಖೆ ನಡೆಸಿ ! – ಸಮಾಜವಾದಿ ಪಕ್ಷದ ಮುಖಂಡ ಪವನ ಪಾಂಡೆ
ಸಮಾಜವಾದಿ ಪಕ್ಷದ ಮುಖಂಡ ಮತ್ತು ಮಾಜಿ ಅಯೋಧ್ಯೆ ಶಾಸಕ ಪವನ ಪಾಂಡೆ ಮಾತನಾಡಿ, ‘ಬಾಬಾ ಹರಿದಾಸ ಇವರು ಈ ಭೂಮಿಯನ್ನು ಸುಲ್ತಾನ ಅನ್ಸಾರಿ ಮತ್ತು ರವಿ ಮೋಹನ ತಿವಾರಿ ಅವರಿಗೆ ಮಾರಿದರು. ನಂತರ ಅವರು ಈ ಭೂಮಿಯನ್ನು ‘ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ಗೆ ಮಾರಿದರು. ಇದರ ಬೆಲೆ ೨ ಕೋಟಿ ರೂಪಾಯಿಗಳಿಂದ ೧೮ ಕೋಟಿ ೫೦ ಲಕ್ಷಕ್ಕೆ ಹೇಗೆ ಹೋಗಬಹುದು ? ಅಯೋಧ್ಯೆಯ ಮೇಯರ್ ಋಷಿಕೇಶ ಉಪಾಧ್ಯಾಯ ಮತ್ತು ಟ್ರಸ್ಟ್ ನ ವಿಶ್ವಸ್ಥರಾದ ಅನಿಲ ಮಿಶ್ರಾ ಅವರ ಸಮ್ಮುಖದಲ್ಲಿ ಈ ವ್ಯವಹಾರ ನಡೆದಿದೆ. ೧೭ ಕೋಟಿ ರೂಪಾಯಿಗಳನ್ನು ತಕ್ಷಣವೇ ಖಾತೆಗೆ ಜಮಾ ಮಾಡಲಾಯಿತು. ಈ ಹಣವನ್ನು ಯಾರು ನೀಡಿದರು ಮತ್ತು ಅದನ್ನು ಯಾರ ಖಾತೆಯಲ್ಲಿ ಜಮಾ ಮಾಡಲಾಗಿದೆ ? ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು.” ಎಂದು ಹೇಳಿದ್ದಾರೆ.
ಮಾನಹಾನಿ ಮೊಕದ್ದಮೆ ಹೂಡುವ ಪ್ರಯತ್ನದಲ್ಲಿ ವಿಶ್ವ ಹಿಂದೂ ಪರಿಷತ್ !
ನವ ದೆಹಲಿ – ಆಮ್ ಆದ್ಮಿ ಪಕ್ಷದ ಸಂಸದ ಸಂಜಯ ಸಿಂಗ್ ಮತ್ತು ಮಾಜಿ ಅಯೋಧ್ಯೆ ಶಾಸಕ ಹಾಗೂ ಸಮಾಜವಾದಿ ಪಕ್ಷದ ನಾಯಕ ಪವನ ಪಾಂಡೆ ಇವರಿಬ್ಬರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ವಿಶ್ವ ಹಿಂದೂ ಪರಿಷತ್ತು ಚಿಂತನೆ ನಡೆಸಿದೆ. ಈ ಮಾಹಿತಿಯನ್ನು ವಿಎಚ್‍ಪಿ ಕಾರ್ಯನಿರ್ವಾಹಕ ಅಧ್ಯಕ್ಷ ಅಲೋಕ ಕುಮಾರ ನೀಡಿದರು.
ಈ ಪ್ರಕರಣದಲ್ಲಿ ಎಲ್ಲಾ ವಹಿವಾಟುಗಳನ್ನು ಬ್ಯಾಂಕುಗಳ ಮೂಲಕ ಮಾಡಲಾಗಿದೆ. ಈ ಭೂಮಿಯ ಪ್ರಸ್ತುತ ಮೌಲ್ಯ ೨೦ ಕೋಟಿ ರೂಪಾಯಿ ಇದೆ. ಆದ್ದರಿಂದ ಟ್ರಸ್ಟ್ ೧೮ ಕೋಟಿ ೫೦ ಲಕ್ಷ ರೂಪಾಯಿಗೆ ಒಪ್ಪಿಕೊಂಡಿದೆ ಎಂದು ಅಲೋಕ ಕುಮಾರ ಹೇಳಿದರು.ರಾಷ್ಟೀಯ