ಕಾಶಿ ಹಿಂದೂ ವಿಶ್ವವಿದ್ಯಾಲಯದ ಅಲೋಪತಿಯ ವೈದ್ಯರಿಗೆ ಆಯುರ್ವೇದದ, ಆಯುರ್ವೇದದ ವೈದ್ಯರಿಗೆ ಅಲೋಪತಿ ಶಿಕ್ಷಣವನ್ನು ನೀಡಲಾಗುವುದು !

ಇಂತಹ ಶಿಕ್ಷಣವನ್ನು ಎಲ್ಲಾ ವಿಶ್ವವಿದ್ಯಾಲಯಗಳು ನೀಡಬೇಕು ಎಂದು ಜನರಿಗೆ ಅನಿಸುತ್ತದೆ !

ವಾರಣಾಸಿ (ಉತ್ತರಪ್ರದೇಶ) – ಕಾಶಿ ಹಿಂದೂ ವಿಶ್ವವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್. ವೈದ್ಯರು ಇನ್ನು ಆಯುರ್ವೇದ ಹಾಗೂ ಬಿ.ಎ.ಎಂ.ಎಸ್. ವೈದ್ಯರು ಅಲೋಪತಿಯನ್ನು ಕಲಿಯಬಹುದು. ಅದಕ್ಕಾಗಿ ವಿಶ್ವವಿದ್ಯಾಲಯವು ಒಂದು ವರ್ಷದ ‘ಹೋಲಿಸ್ಟಿಕ್ ಮೆಡಿಸಿನ್ ಪಿಜಿ ಡಿಪ್ಲೊಮಾ ಕೋರ್ಸ್’ (ಸಮಗ್ರ ಔಷಧಿ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್) ಅನ್ನು ಪ್ರಾರಂಭಿಸಲಿದೆ. ಇದಕ್ಕಾಗಿ ವಿಶ್ವವಿದ್ಯಾಲಯದಿಂದ ಒಂದು ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಕೋರ್ಸ್, ಪ್ರವೇಶ ಮತ್ತು ಪರೀಕ್ಷೆಯ ಪ್ರಕ್ರಿಯೆಯನ್ನು ರೂಪಿಸುತ್ತದೆ.