ನನ್ ಲ್ಯೂಸಿಯನ್ನು ಆರೋಪಿಸಿ ಚರ್ಚ್‍ನಿಂದ ಹೊರದಬ್ಬಿದ ಕ್ಯಾಥೊಲಿಕ್ ಚರ್ಚ್
ಕೊಚ್ಚಿ (ಕೇರಳ) – ಕೇರಳದ ಕ್ಯಾಥೊಲಿಕ್ ನನ್ ಲ್ಯೂಸಿ ಕಲಾಪುರ ಇವರನ್ನು ಚರ್ಚ್‍ನಿಂದ ಉಚ್ಚಾಟನೆ ಮಾಡಿದ ವಿರುದ್ಧದ ಅಂತಿಮ ಮೇಲ್ಮನವಿಯನ್ನು ವ್ಯಾಟಿಕನ್‍ನ ಕ್ರೈಸ್ತ ಉಚ್ಚನ್ಯಾಯಾಲಯವು ತಿರಸ್ಕರಿಸಿದೆ. ನಂತರ ನನ್ ಲ್ಯೂಸಿ ಕಲಾಪುರ ಅವರನ್ನು ಇಲ್ಲಿನ ಕಾನ್ವೆಂಟ್‍ನಲ್ಲಿರುವ ನಿವಾಸವನ್ನು ಖಾಲಿ ಮಾಡಲು ತಿಳಿಸಲಾಗಿದೆ.
Vatican rejects Kerala nun Lucy Kalapura’s final appeal against dismissalhttps://t.co/EIJucD1RnS
— The Indian Express (@IndianExpress) June 14, 2021
೧. ೨೦೧೫ ರಿಂದ, ಲ್ಯೂಸಿಯು ತನ್ನ ಮೇಲಧಿಕಾರಿಗಳೊಂದಿಗೆ ಉದ್ವಿಗ್ನ ಸಂಬಂಧವನ್ನು ಹೊಂದಿದ್ದರು ಕೊಚ್ಚಿಯಲ್ಲಿ ಓರ್ವ ನನ್ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿದ್ದ ಜಲಂಧರ್‍ನ ಬಿಷಪ್ ಫ್ರಾಂಕೊ ಮುಲಕ್ಕಲ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಲ್ಯೂಸಿ ೨೦೧೮ ರ ಸೆಪ್ಟೆಂಬರ್‍ನಲ್ಲಿ ಸಾರ್ವಜನಿಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅಂದಿನಿಂದ, ಚರ್ಚ್ ಅವಳನ್ನು ಹೊರಹಾಕುವ ಹಾದಿಯಲ್ಲಿತ್ತು.
೨. ಮೇ ೨೦೧೯ ರಲ್ಲಿ ನನ್ ಲ್ಯೂಸಿ ಕಲಾಪುರಾ ಅವರನ್ನು ಸುಳ್ಳು ಆರೋಪದ ಮೇಲೆ ಚರ್ಚ್ ತೊರೆಯುವಂತೆ ಆದೇಶಿಸಲಾಯಿತು. ಅದೇ ವರ್ಷದಲ್ಲಿ, ನನ್ ಲ್ಯೂಸಿ ನ್ಯಾಯಮಂಡಳಿಗೆ ಮನವಿ ಮಾಡಿದ್ದರು; ಆದರೆ, ೨೦೧೯ ರ ಸೆಪ್ಟೆಂಬರ್‍ನಲ್ಲಿ ಅದನ್ನು ತಿರಸ್ಕರಿಸಲಾಯಿತು. ನಂತರ ಲ್ಯೂಸಿ ವ್ಯಾಟಿಕನ್‍ನ ಸರ್ವೋಚ್ಚ ನ್ಯಾಯಾಲಯಕ್ಕೆ ಅಂತಿಮ ಮೇಲ್ಮನವಿ ಸಲ್ಲಿಸಿದರು, ಆದರೆ ಅಲ್ಲಿಯೂ ತಿರಸ್ಕರಿಸಲಾಯಿತು.
ನಾನು ಭಾರತೀಯ ನ್ಯಾಯಾಂಗದಿಂದ ನ್ಯಾಯವನ್ನು ಕೇಳುತ್ತೇನೆ ! – ನನ್ ಲ್ಯೂಸಿ ಕಲಾಪುರಾ
ವ್ಯಾಟಿಕನ್ ಈ ಸವಾಲನ್ನು ತಿರಸ್ಕರಿಸಿದ ಬಗ್ಗೆ ಮಾತನಾಡಿದ ನನ್ ಲ್ಯೂಸಿ, ನಾನು ಕಾನ್ವೆಂಟ್‍ನಲ್ಲಿನ ನಿವಾಸವನ್ನು ಖಾಲಿ ಮಾಡುವುದಿಲ್ಲ. ನಾನು ಭಾರತೀಯ ನ್ಯಾಯಾಂಗದ ಮೂಲಕ ನ್ಯಾಯ ಪಡೆಯುತ್ತೇನೆ. ನಾನು ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೆ. ನಿವಾಸವನ್ನು ಖಾಲಿ ಮಾಡುವ ಆದೇಶವನ್ನು ನ್ಯಾಯಾಲಯವು ತಾತ್ಕಾಲಿಕವಾಗಿ ತಡೆಹಿಡಿದಿದೆ. ಅರ್ಜಿಯು ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇದೆ. ಏನೇ ಆದರೂ, ನಾನು ಕಾನ್ವೆಂಟ್ ಅನ್ನು ಖಾಲಿ ಮಾಡುವುದಿಲ್ಲ ಎಂದು ಹೇಳಿದರು.