ಇಸ್ಲಾಮಿಕ್ ಸ್ಟೇಟ್‍ಗೆ ಭರ್ತಿಯಾಗಿದ್ದ ಮತ್ತು ಈಗ ಅಫಘಾನ್ ಜೈಲಿನಲ್ಲಿರುವ ೪ ಕೇರಳ ಮಹಿಳೆಯರನ್ನು ಭಾರತವು ವಾಪಾಸು ಕರೆ ತರುವುದಿಲ್ಲ !

ನವ ದೆಹಲಿ : ಅಫಘಾನಿಸ್ತಾನಕ್ಕೆ ಹೋಗಿ ಇಸ್ಲಾಮಿಕ್ ಸ್ಟೇಟ್ ಈ ಜಿಹಾದಿ ಭಯೋತ್ಪಾದಕ ಸಂಘಟನೆಗೆ ಸಹಭಾಗಿಯಾದ ನಾಲ್ಕು ಭಾರತೀಯ ಮಹಿಳೆಯರಿಗೆ ಭಾರತಕ್ಕೆ ಮರಳಲು ಅವಕಾಶ ನೀಡುವುದಿಲ್ಲ. ಈ ಮಾಹಿತಿಯನ್ನು ಹಿರಿಯ ಅಧಿಕಾರಿಯೊಬ್ಬರು ನೀಡಿದ್ದಾರೆ. ಒಂದು ಆಂಗ್ಲ ದಿನಪತ್ರಿಕೆ ಈ ಬಗ್ಗೆ ವರದಿಯನ್ನು ಪ್ರಕಟಿಸಿದೆ. ಈ ಮಹಿಳೆಯರು ಪ್ರಸ್ತುತ ಅಫಘಾನಿಸ್ತಾನದ ಕಾರಾಗೃಹದಲ್ಲಿದ್ದಾರೆ. ಇವರ ಗಂಡಂದಿರು ಅಲ್ಲಿ ವಿವಿಧ ದಾಳಿಯಲ್ಲಿ ಹತರಾಗಿದ್ದಾರೆ. ೨೦೧೯ ರ ಡಿಸೆಂಬರ್ ನಲ್ಲಿ ಈ ಮಹಿಳೆಯರು ಶರಣಾಗಿದ್ದರು. ಅವರು ಸೋನಿಯಾ ಸೆಬಾಸ್ಟಿಯನ್ ಅಲಿಯಾಸ್ ಆಯೆಷಾ, ಮೆರಿನ್ ಜೆಕಬ್ ಅಲಿಯಾಸ್ ಮರಿಯಮ್, ನಿಮಿಷಾ ಅಲಿಯಾಸ್ ಫಾತಿಮಾ ಇಸಾ ಮತ್ತು ರಫಾಎಲಾ ಎಂದು ಹೆಸರುಗಳಿವೆ.

ಅಫಘಾನಿಸ್ತಾನದ ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯದ ಮುಖ್ಯಸ್ಥ ಅಹಮದ್ ಜಿಯಾ ಸರಜ ಇವರು ಈ ಹಿಂದೆ, ೧೩ ದೇಶಗಳ ೪೦೮ ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಅಫಘಾನ್ ಕಾರಾಗೃಹಗಳಲ್ಲಿ ಇರಿಸಲಾಗಿದೆ ಅವರಲ್ಲಿ೪ ಭಾರತೀಯರು, ೧೬ ಚೈನೀಸ್, ೨೯೯ ಪಾಕಿಸ್ತಾನಿಗಳು, ೨ ಬಾಂಗ್ಲಾದೇಶಿಗಳು, ೨ ಮಾಲ್ಡೀವ್ ಮತ್ತು ಇತರರು ಸೇರಿದ್ದಾರೆ ಎಂದು ಹೇಳಿದ್ದರು.