ಮುಸಲ್ಮಾನರು ಕೊರೊನಾ ಪ್ರತಿರೋಧಕ ಲಸಿಕೆ ಪಡೆಯುವುದನ್ನು ಮುಂದೂಡುತ್ತಾರೆ ! – ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ

ಋಷಿಕೇಶ (ಉತ್ತಾರಾಖಾಂಡ) – ನಾನು ಪ್ರಜ್ಞಾಪೂರ್ವಕವಾಗಿ ಉಲ್ಲೇಖಿಸುತ್ತಿದ್ದೇನೆಂದರೆ ದೇಶದ ಮುಸಲ್ಮಾನಮರು ಪ್ರಸ್ತುತ ಕೊರೊನಾ ವ್ಯಾಕ್ಸಿನೇಷನ್‍ನಿಂದ ದೂರ ಸರಿಯುತ್ತಿದ್ದಾರೆ. ಅವರ ಮನಸ್ಸಿನಲ್ಲಿ ಇನ್ನೂ ಅನುಮಾನವಿದೆ. ಅವರು ಇನ್ನೂ ಭಯ ಪಟ್ಟುಕೊಳ್ಳುತ್ತಿದ್ದಾರೆ. ಅವರಲ್ಲಿ ವ್ಯಾಕ್ಸಿನೇಷನ್ ಬಗ್ಗೆ ತಪ್ಪು ಕಲ್ಪನೆ ಇದೆ ಎಂದು ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ. ಅವರು ಇಲ್ಲಿ ‘ವಿಶ್ವ ರಕ್ತದಾನ ದಿನಾಚರಣೆ’ಯ ಸಂದರ್ಭದಲ್ಲಿ ನಡೆದ ಸಮಾರಂಭದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ರಾವತ್ ಇವರು ‘ಸಾಮಾಜಿಕ ಸಂಸ್ಥೆ ಹಾಗೂ ಪ್ರಸಾರಮಾಧ್ಯಮಗಳು ಮುಸಲ್ಮಾನರಲ್ಲಿ ಜಾಗೃತಿಯನ್ನು ನಿರ್ಮಿಸಿ ‘ವ್ಯಾಕ್ಸಿನೇಷನ್ ಅಪಾಯಕಾರಿ ಅಲ್ಲ’, ಎಂದು ಸಂದೇಶ ನೀಡಲು ಸಹಾಯ ಮಾಡುವಂತೆ ರಾವತರು ಮನವಿಯನ್ನೂ ಮಾಡಿದರು.

ರಾವತರು ತಮ್ಮ ಮಾತನ್ನು ಮುಂದುವರೆಸುತ್ತಾ, ಪಾಕಿಸ್ತಾನ ಸರಕಾರವು ನಾಗರಿಕರ ದೂರವಾಣಿ ವ್ಯವಸ್ಥೆಯನ್ನು ಸ್ಥಗಿತಗೊಳಿಸುವುದು ಮತ್ತು ಸಂಬಳವನ್ನು ತಡೆಹಿಡಿಯುವಂತಹ ಕಠಿಣ ಕ್ರಮಗಳ ಮೂಲಕ ಲಸಿಕೆ ಪಡೆಯುವಂತೆ ಮಾಡಿದೆ. ಇಂತಹ ನಿರ್ಧಾರಗಳು ವ್ಯಾಕ್ಸಿನೇಷನ್ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬಹುದು ಎಂದು ರಾವತರು ಹೇಳಿದ್ದಾರೆ.