ಪಾಕಿಸ್ತಾನದಿಂದ ಸ್ಥಳಾಂತರಗೊಂಡ ಹಿಂದೂಗಳು, ಸಿಖ್ಖರು ಮೊದಲಾದವರಿಗೆ ಲಸಿಕೆ ನೀಡದಿರುವ ರಾಜಸ್ಥಾನದ ಕಾಂಗ್ರೆಸ್ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಉಚ್ಚ ನ್ಯಾಯಾಲಯ !

ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ಹಿಂದೂಗಳು ಮತ್ತು ಸಿಖ್ಖರಂತಹ ಅಲ್ಪಸಂಖ್ಯಾತರಿಗೆ ರಾಜಸ್ಥಾನ ಸರಕಾರವು ಲಸಿಕೆ ನೀಡದಿರುವುದು ಗಮನಕ್ಕೆ ಬಂದನಂತರ ರಾಜಸ್ಥಾನ ಉಚ್ಚ ನ್ಯಾಯಾಲಯದ ಜೋಧಪುರ ನ್ಯಾಯಪೀಠವು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಹಿಂದೂ ಜನಜಾಗೃತಿ ಸಮಿತಿಯ ‘ಹಿಂದೂ ಅಧಿವೇಶನ’, ಅದೇರೀತಿ ‘ಸನಾತನ ಪ್ರಭಾತ’ ಮತ್ತು ‘ಸನಾತನ ಶಾಪ್’ನ ಪುಟಗಳ ಮೇಲೆ ನಿರ್ಬಂಧ !

ಹಿಂದೂ ಜನಜಾಗೃತಿ ಸಮಿತಿಯ ‘ಹಿಂದೂ ಅಧಿವೇಶನ’, ‘ಸನಾತನ ಪ್ರಭಾತ’ ನಿಯತಕಾಲಿಕೆಯ ‘ಸನಾತನ ಪ್ರಭಾತ’ ಮತ್ತು ಸನಾತನ ಸಾತ್ತ್ವಿಕ ಉತ್ಪನ್ನಗಳನ್ನು ಮಾರಾಟ ಮಾಡುವ ‘ಸನಾತನ ಶಾಪ್’ ನ ಫೇಸ್‌ಬುಕ್ ಪುಟಗಳನ್ನು ಬಂದ್ ಮಾಡಲಾಗಿದೆ (ಅನ್‌ಪಬ್ಲಿಶ್). ವಿಶೇಷವೆಂದರೆ ‘ಸನಾತನ ಪ್ರಭಾತ’ ಮತ್ತು ‘ಸನಾತನ ಶಾಪ್’ ಇವುಗಳ ಪುಟಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.

ಪ್ರಯಾಗರಾಜನಲ್ಲಿ ಓರ್ವ ಪೊಲೀಸ್ ಕಾನ್‌ಸ್ಟೆಬಲ್ ಬಳಿ ಕೋಟ್ಯಂತರ ರೂಪಾಯಿ ಆಸ್ತಿ ಇದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತನ ಆರೋಪ

ಪ್ರಯಾಗರಾಜ ಜಿಲ್ಲೆಯ ಓರ್ವ ಪೊಲೀಸ್ ಕಾನ್‌ಸ್ಟೆಬಲ್ ಬಳಿ ಕೋಟಿಗಟ್ಟಲೆ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಆತನ ಬಳಿ ದುಬಾರಿ ಕಾರುಗಳು ಮತ್ತು ಫ್ಲ್ಯಾಟ್‌ಗಳು, ಜೊತೆಗೆ ಭೂಮಿಯೂ ಇದೆ. ಈ ಬಗ್ಗೆ ತನಿಖೆ ನಡೆಸಬೇಕು, ಎಂದು ಆರ್‌ಟಿಐ ಕಾರ್ಯಕರ್ತ ನೂತನ ಠಾಕೂರ ಅವರು ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಕಳುಹಿಸಿ ಒತ್ತಾಯಿಸಿದ್ದಾರೆ.

೯ ಲಕ್ಷ ಪರೀಕ್ಷೆಗಳಲ್ಲಿ ಕೇವಲ ಶೇ. ೦.೨ ರಷ್ಟು ವರದಿಗಳು ಮಾತ್ರ ಪಾಸಿಟಿವ್ ! – ಪೊಲೀಸ್ ಇನ್ಸ್‌ಪೆಕ್ಟರ್‌ರ ಮಾಹಿತಿ

ಇಲ್ಲಿ ಕೊರೊನಾದ ವಿಷಯದಲ್ಲಿ ಜನವರಿ ೧ ರಿಂದ ಏಪ್ರಿಲ್ ೩೦ ರವರೆಗೆ ಒಟ್ಟು ೮ ಲಕ್ಷದ ೯೧ ಸಾವಿರದ ಆರ್.ಟಿ.ಪಿ.ಸಿ.ಆರ್.ಗಳ ಪರೀಕ್ಷಣೆ ಮಾಡಲಾಗಿತ್ತು. ಈ ಪೈಕಿ ೧೯೫೪ ಪರೀಕ್ಷೆಗಳು (ಶೇ ೦.೨) ಪಾಸಿಟಿವ್ ಬಂದಿದೆ. ಕುಂಭಮೇಳಕ್ಕೆ ೧೬೦೦೦ ಪೊಲೀಸರನ್ನು ನಿಯೋಜಿಸಲಾಗಿತ್ತು. ಏಪ್ರಿಲ್ ೩೦ ರ ಹೊತ್ತಿಗೆ, ಅವರಲ್ಲಿ ಕೇವಲ ೮೮ ಅಂದರೆ ಶೇಕಡಾ ೦.೫ ರಷ್ಟು ಮಾತ್ರ ಪೊಲೀಸರಿಗೆ ಕೊರೊನಾದ ಸೋಂಕು ತಗಲಿತ್ತು.

ವಿದ್ಯಾರ್ಥಿವೇತನದಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿಗೆ ಶೇ ೮೦ ರಷ್ಟು ಮತ್ತು ಕ್ರೈಸ್ತ ವಿದ್ಯಾರ್ಥಿಗಳಿಗೆ ಶೇ ೨೦ ರಷ್ಟು ಮೀಸಲಾತಿ ನೀಡುವ ಕೇರಳ ಸರಕಾರದ ಆದೇಶವನ್ನು ತಿರಸ್ಕರಿಸಿದ ಕೇರಳ ಉಚ್ಚ ನ್ಯಾಯಾಲಯ !

ಕಮ್ಯುನಿಸ್ಟರ ಕಮ್ಯುನಿಸಂ ಎಷ್ಟು ಕಪಟತನದ್ದು ಮತ್ತು ಮತಾಂಧವಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ! ಅಂತಹ ಕಮ್ಯುನಿಸ್ಟ್ ಜನರು ಹಿಂದೂಗಳಿಗೆ ಜಾತ್ಯತೀತತೆಯ ಜ್ಞಾನವನ್ನು ನೀಡುತ್ತಿರುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ!