ಉತ್ತರಪ್ರದೇಶದಲ್ಲಿ ಮಹಿಳೆಯನ್ನು ಮತಾಂತರಿಸುತ್ತಿದ್ದ ಮೂರು ಮಂದಿ ಮತಾಂತರ ವಿರೋಧಿ ಕಾನೂನಿನಡಿಯಲ್ಲಿ ಬಂಧನ

ಉತ್ತರಪ್ರದೇಶದಲ್ಲಿರುವ ಮತಾಂತರ ವಿರೋಧಿ ಕಾನೂನಿನಂತೆ ಇಡೀ ದೇಶಕ್ಕೂ ಕೇಂದ್ರ ಸರಕಾರ ಈ ಕಾನೂನನ್ನು ರೂಪಿಸಬೇಕು ಎಂದು ಹಿಂದೂಗಳ ಅಪೇಕ್ಷೆಯಾಗಿದೆ !

ಸಾಂಕೇತಿಕ ಛಾಯಾಚಿತ್ರ

ರಾಮಪುರ (ಉತ್ತರಪ್ರದೇಶ) – ಇಲ್ಲಿ ಓರ್ವ ಮಹಿಳೆಯನ್ನು ಮತಾಂತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂರು ಜನರನ್ನು ಮತಾಂತರ ವಿರೋಧಿ ಕಾಯ್ದೆಯಡಿಯಲ್ಲಿ ಬಂಧಿಸಿದ್ದಾರೆ. ಈ ಮಹಿಳೆ ಉತ್ತರಾಖಂಡ ಮೂಲದವಳಾಗಿದ್ದು ಪತಿಯ ನಿಧನದ ನಂತರ ಆರೋಪಿಯು ಆಮಿಷವೊಡ್ಡಿ ಅವಳನ್ನು ಉತ್ತರ ಪ್ರದೇಶದ ಶಹಾಬಾದ್ ಗ್ರಾಮಕ್ಕೆ ಕರೆತಂದು ಮತಾಂತರಗೊಳಿಸಿದನು. ಆರೋಪಿಯು ರಿಕ್ಷಾ ಚಾಲಕನಾಗಿದ್ದು ಆತ ಮಹಿಳೆಯ ಗಂಡನ ಸ್ನೇಹಿತ ಎಂದು ಅವಳಿಗೆ ಹೇಳುತ್ತಿದ್ದನು. ಅವಳ ಮತಾಂತರವಾದುದರಿಂದ ಆಕೆಯ ಮಗನ ಆರೋಗ್ಯವು ಹದಗೆಟ್ಟಿತು. ಅವನನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಈ ಪ್ರಕರಣವು ಬೆಳಕಿಗೆ ಬಂದಿದೆ. ಕಳೆದ ವರ್ಷ ರಾಜ್ಯದಲ್ಲಿ ಮತಾಂತರ ವಿರೋಧಿ ಕಾನೂನು ಜಾರಿಗೆ ಬಂದಿದ್ದು ಈ ಕಾಯ್ದೆಯಲ್ಲಿ ಅಪರಾಧಿ ವ್ಯಕ್ತಿಗೆ ೧ ರಿಂದ ೫ ವರ್ಷ ಜೈಲು ಶಿಕ್ಷೆ ಮತ್ತು ೧೫ ಸಾವಿರ ರೂಪಾಯಿವರೆಗೆ ದಂಡದ ಏರ್ಪಾಡು ಮಾಡಲಾಗಿದೆ.