ಫ್ರಾನ್ಸ್‌ನಲ್ಲೂ ಭಾರತೀಯ ‘ಯುಪಿಐ’ (ಆನ್‌ಲೈನ್ ವಹಿವಾಟು) ಆರಂಭ !

ಫ್ರಾನ್ಸ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು ಫೆಬ್ರವರಿ 2, 2024 ರಂದು ಪ್ಯಾರಿಸ್‌ನ ಐಫೆಲ್ ಟವರ್‌ನಲ್ಲಿ ‘ಯೂನಿಫೈಡ್ ಪೇಮೆಂಟ್ ಇಂಟರ್‌ಫೇಸ್’ (UPI) ಅನ್ನು ಔಪಚಾರಿಕವಾಗಿ ಉದ್ಘಾಟಿಸಿತು. ಈಗ ಜನರು ಈ ಮೂಲಕ ಐಫೆಲ್ ಟವರ್ ಟಿಕೆಟ್‌ಗಳನ್ನು ಖರೀದಿಸಲು ಸಾಧ್ಯವಾಗುತ್ತದೆ.

ಲಾಲಕೃಷ್ಣ ಅಡ್ವಾಣಿ ಇವರಿಗೆ ‘ಭಾರತರತ್ನ‘ !

ದೇಶದ ಮಾಜಿ ಉಪಪ್ರಧಾನಿ ಮತ್ತು ಭಾಜಪದ ಹಿರಿಯ ನಾಯಕ ಲಾಲಕೃಷ್ಣ ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯಾಗಿರುವ ‘ಭಾರತರತ್ನ‘ವನ್ನು ಘೋಷಿಸಲಾಗಿದೆ.

ನಾಟಕದಿಂದ ಪ್ರಧಾನಿಮೋದಿ ಅವರಿಗೆ ಅವಮಾನ !

ಕೇರಳದ ಉಚ್ಛನ್ಯಾಯಾಲಯವು ತನ್ನ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಜನವರಿ ೨೬ ರ ಗಣರಾಜ್ಯೋತ್ಸವ ದಿನದಂದು ನ್ಯಾಯಾಲಯದ ಸಭಾಗೃಹದಲ್ಲಿ ಪ್ರದರ್ಶಿಸಿದ ನಾಟಕದಲ್ಲಿ ಈ ಇಬ್ಬರು ಪ್ರಧಾನಿಮೋದಿ ಮತ್ತು ಕೇಂದ್ರ ಸರಕಾರದ ಗೇಲಿ ಮಾಡಿದ್ದರು. ಉಚ್ಛನ್ಯಾಯಾಲಯವು ಇಬ್ಬರನ್ನೂ ಕುಡಲೇ ಅಮಾನತು ಮಾಡಿ ಪ್ರಕರಣದ ವಿಚಾರಣೆ ಆರಂಭಿಸಿದೆ.

ಭಾರತಾದ್ಯಂತ ಸಂಭ್ರಮದಿಂದ ಗಣರಾಜ್ಯೋತ್ಸವ ಆಚರಣೆ !

ದೇಶಾದ್ಯಂತ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಇಲ್ಲಿಯ ಕರ್ತವ್ಯ ಪಥದಲ್ಲಿ ಬೆಳಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಇವರ ಹಸ್ತದಿಂದ ಧ್ವಜಾರೋಹಣ ನೆರವೇರಿಸಲಾಯಿತು.

ಗಣರಾಜ್ಯೋತ್ಸವದ ಪರೇಡ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಫ್ರಾನ್ಸ್‌ನ ರಾಷ್ಟ್ರಾಧ್ಯಕ್ಷ !

ಫ್ರಾನ್ಸ್‌ನ ರಾಷ್ಟ್ರಾಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರಾನ್ ಇವರು ಭಾರತದಲ್ಲಿ ೨ ದಿನದ ಪ್ರವಾಸಕ್ಕೆ ಬಂದಿದ್ದಾರೆ. ಅವರು ನೇರ ಜೈಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದು ಅಲ್ಲಿಯ ಕಾರ್ಯಕ್ರಮ ನೆರವೇರಿಸಿದ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಸ್ವಾಗತಿಸುವವರು.

ಶ್ರೀ ರಾಮಲಲ್ಲಾ ಆರೂಢ !

ಯಾವ ಕ್ಷಣಕ್ಕಾಗಿ ರಾಮಭಕ್ತರು ಕಳೆದ 500 ವರ್ಷಗಳಿಂದ ದಾರಿ ಕಾಯುತ್ತಿದ್ದರೋ, ಆ ಕ್ಷಣವನ್ನು ಜನವರಿ 22 ರಂದು ಮಧ್ಯಾಹ್ನ 12 ಗಂಟೆ 29 ನಿಮಿಷಗಳಲ್ಲಿ ದೇಶದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಕೋಟ್ಯಾಂತರ ಜನರು ಅನುಭವಿಸಿದ್ದಾರೆ.

Ram Mandir Ayodhya : ನಾವು ಮುಂದಿನ 1 ಸಾವಿರ ವರ್ಷಗಳ ಅಡಿಪಾಯವನ್ನು ಈ ಪ್ರಾಣಪ್ರತಿಷ್ಠಾಪನೆಯ ನಂತರ ನಿರ್ಮಾಣ ಮಾಡಬೇಕಿದೆ !

ಈಶ್ವರನ ಚೈತನ್ಯ ಅನುಭವಿಸಿದೆವು. ಹೇಳಲು ತುಂಬಾ ಇದೆ, ಆದರೆ ನನ್ನ ಗಂಟಲು ಅದನ್ನು ಹೇಳಲು ಬಿಡುತ್ತಿಲ್ಲ. ನನ್ನ ದೇಹ ಇನ್ನೂ ಕಂಪನಗಳಿಂದ ತುಂಬಿದೆ. ಆ ಕ್ಷಣದಲ್ಲಿ ಮನಸ್ಸು ಇನ್ನೂ ಲೀನವಾಗಿದೆ.

ಹಿಂದೂ ರಾಷ್ಟ್ರ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ! – ಜಗದ್ಗುರು ಪರಮಹಂಸಾಚಾರ್ಯ, ತಪಸ್ವಿ ಛಾವಣಿ, ಅಯೋಧ್ಯೆ, ಉತ್ತರ ಪ್ರದೇಶ

ಜಗದ್ಗುರು ಪರಮಹಂಸಾಚಾರ್ಯರು ಸನಾತನ ಪ್ರಭಾತದ ಕಾರ್ಯವನ್ನು ಶ್ಲಾಘಿಸಿದರು ಮತ್ತು ` ಸನಾತನ ಪ್ರಭಾತ’ಕ್ಕೆ ಶುಭ ಹಾರೈಸಿದರು. ಸನಾತನ ಪ್ರಭಾತವನ್ನು ಹೆಚ್ಚು ಹೆಚ್ಚು ಹಿಂದೂಗಳು ಓದಬೇಕು ಮತ್ತು ಅದಕ್ಕಾಗಿ ಇತರರನ್ನು ಓದುವಂತೆ ಪ್ರೇರೇಪಿಸಬೇಕು ಎಂದು ಹೇಳಿದರು.

ತಮಿಳುನಾಡಿನಲ್ಲಿನ ಶ್ರೀರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಮಂತ್ರಿ ಮೋದಿ !

ಶ್ರೀರಾಮ ಮಂದಿರದ ವಿಶೇಷ ಯಜಮಾನ ಇರುವ ಪ್ರಧಾನಮಂತ್ರಿ ನರೇಂದ್ರ ಮೋದಿ ೧೧ ದಿನದ ಅನುಷ್ಠಾನ ಮಾಡುತ್ತಿದ್ದಾರೆ. ಇದರ ಹಿನ್ನೆಲೆಯಲ್ಲಿ ಅವರು ದಕ್ಷಿಣ ಭಾರತದಲ್ಲಿನ ವಿವಿಧ ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡುತ್ತಿದ್ದಾರೆ.

PhD Prime Minister Modi : ಬಿ.ಹೆಚ್.ಯು ಅಲ್ಲಿಯ ಓರ್ವ ಮುಸಲ್ಮಾನ ವಿದ್ಯಾರ್ಥಿನಿಯ ಪ್ರಧಾನಮಂತ್ರಿ ಮೋದಿ ಇವರ ಕುರಿತು ಪಿ.ಹೆಚ್.ಡಿ !

ಪ್ರಧಾನಮಂತ್ರಿ ಮೋದಿ ಇವರು ದೇಶದಲ್ಲಿನ ವಿಶ್ವಾಸಾರ್ಹ ನಾಯಕರಾಗಿದ್ದಾರೆ. ಅವರು ಮುಸಲ್ಮಾನರ ವಿರೋಧಿ ಅಲ್ಲ, ಅವರ ಹಿತೈಷಿಗಳಿದ್ದಾರೆ ಹಾಗೂ ಆಧ್ಯಾತ್ಮಿಕ ಚಿಂತಕ ಮತ್ತು ಸಮಾಜ ಸುಧಾರಕರು ಕೂಡ ಇದ್ದಾರೆ.