ಕೇರಳ ಹೈಕೋರ್ಟ್‌ನಿಂದ ನ್ಯಾಯಾಲಯದ ಇಬ್ಬರು ಅಧಿಕಾರಿಗಳ ಅಮಾನತು !
ತಿರುವನಂತಪುರಂ (ಕೇರಳ) – ಕೇರಳದ ಉಚ್ಛನ್ಯಾಯಾಲಯವು ತನ್ನ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಜನವರಿ ೨೬ ರ ಗಣರಾಜ್ಯೋತ್ಸವ ದಿನದಂದು ನ್ಯಾಯಾಲಯದ ಸಭಾಗೃಹದಲ್ಲಿ ಪ್ರದರ್ಶಿಸಿದ ನಾಟಕದಲ್ಲಿ ಈ ಇಬ್ಬರು ಪ್ರಧಾನಿಮೋದಿ ಮತ್ತು ಕೇಂದ್ರ ಸರಕಾರದ ಗೇಲಿ ಮಾಡಿದ್ದರು. ಉಚ್ಛನ್ಯಾಯಾಲಯವು ಇಬ್ಬರನ್ನೂ ಕುಡಲೇ ಅಮಾನತು ಮಾಡಿ ಪ್ರಕರಣದ ವಿಚಾರಣೆ ಆರಂಭಿಸಿದೆ. ಸಹಾಯಕ ಪ್ರಬಂಧಕ ಸುಧೀಶ ಟಿ.ಎ. ಮತ್ತು ‘ಕೋರ್ಟ್ ಕೀಪರ್‘ ಸುಧೀಶ ಪಿ.ಎಂ. ಹೀಗೆ ಇಬ್ಬರ ಹೆಸರಿದೆ. ಈ ನಾಟಕದ ವಿಷಯದ ಬಗ್ಗೆ ‘ಲೀಗಲ್ ಸೆಲ್‘ ಮತ್ತು ‘ಬಾರ್ ಕೌನ್ಸಿಲ್ ಆಫ್ ಇಂಡಿಯಾ‘ ಮುಖ್ಯ ನ್ಯಾಯಮೂರ್ತಿ, ಕೇರಳ ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಾಧೀಶ, ಕೇಂದ್ರೀಯ ಕಾನೂನು ಸಚಿವರು ಮತ್ತು ಪ್ರಧಾನಿಗೆ ದೂರು ನೀಡಿದ್ದರು. ಈ ನಾಟಕದ ಸಂವಾದವನ್ನು ಸಹಾಯಕ ಪ್ರಬಂಧಕ ಸುಧೀಶ ಬರೆದಿದ್ದರು ಎಂದು ಹೇಳಲಾಗುತ್ತಿದೆ.
Kerala High Court suspends two officials on Republic Day over derogatory stage show against Modi govthttps://t.co/PkdGl5wEzG
— OpIndia.com (@OpIndia_com) January 27, 2024
ಹೀಗಿತ್ತು ಅವಮಾನಕರ ಸಂವಾದ !
ಈ ಮಲಯಾಳಂ ನಾಟಕದಲ್ಲಿ ಪ್ರಧಾನಿ ಮೋದಿ ಪಾತ್ರಧಾರಿಯು, ‘ನಾನು ಇದಕ್ಕೆ ಔಷಧಿಯ ಗುಣವಿದೆ ಎಂದು ಹೇಳಿದರೆ, ನನ್ನ ಹಿಂಬಾಲಕರು ಸಗಣಿಯನ್ನೂ ತಿನ್ನುತ್ತಾರೆ, ಇದು ನನ್ನ ಶಕ್ತಿ.‘ ಇನ್ನೊಂದು ವ್ಯಾಕ್ಯದಲ್ಲಿ ,‘ನಾನು ನನ್ನ ಕುಟಂಬವನ್ನು ಬಿಟ್ಟು ಜಗತ್ತನ್ನು ತಿರುಗಾಡಲು ಹೋದೆ, ಆದರೂ ಜನರು ನನ್ನ ವಿಷಯದಲ್ಲಿ ಕೃತಜ್ಞರಾಗಿಲ್ಲ,‘ ಹೀಗೆ ಇದೆ.