PhD Prime Minister Modi : ಬಿ.ಹೆಚ್.ಯು ಅಲ್ಲಿಯ ಓರ್ವ ಮುಸಲ್ಮಾನ ವಿದ್ಯಾರ್ಥಿನಿಯ ಪ್ರಧಾನಮಂತ್ರಿ ಮೋದಿ ಇವರ ಕುರಿತು ಪಿ.ಹೆಚ್.ಡಿ !

ಪ್ರಧಾನಮಂತ್ರಿಗಳನ್ನು ‘ರಾಜಕಾರಣದ ಮಹಾನಾಯಕ’ ಎಂದು ಉಲ್ಲೇಖ !

ವಾರಾಣಸಿ (ಉತ್ತರಪ್ರದೇಶ) – ಭಾರತದಲ್ಲಿ ಪ್ರಸಿದ್ಧ ಬನಾರಸ ಹಿಂದೂ ವಿಶ್ವವಿದ್ಯಾಲಯದಲ್ಲಿನ ನಜಮಾ ಪರ್ವೀನ್ ಈ ಮುಸಲ್ಮಾನ ವಿದ್ಯಾರ್ಥಿನಿಯ ಪ್ರಧಾನಮಂತ್ರಿಯ ನರೇಂದ್ರ ಮೋದಿ ಇವರ ಕುರಿತು ಪಿ.ಎಚ್.ಡಿ ಮಾಡಿದ್ದಾಳೆ. ವಾರಾಣಸಿಯ ಹತ್ತಿರ ಇರುವ ಲಾಲಪುರ ಇಲ್ಲಿಯ ನಿವಾಸಿ ನಜಮಾ ಇವರು ರಾಜ್ಯಶಾಸ್ತ್ರದ ವಿದ್ಯಾರ್ಥಿನಿಗೆ ಅಧ್ಯಯನ ನಡೆಸಲು ೮ ವರ್ಷದ ಸಮಯ ಬೇಕಾಯಿತು. ಅವರು ಅಧ್ಯಯನದಲ್ಲಿ ಪ್ರಧಾನಮಂತ್ರಿ ‘ರಾಜಕಾರಣದ ಮಹಾನಾಯಕ’ ಎಂದು ಹೇಳಿದ್ದಾರೆ. ‘ನರೇಂದ್ರ ಮೋದಿ ಇವರ ರಾಜಕೀಯ ನೇತೃತ್ವ: ಒಂದು ವಿಶ್ಲೇಷಣಾತ್ಮಕ ಅಧ್ಯಯನ (೨೦೧೪ ರ ಲೋಕಸಭಾ ಚುನಾವಣೆಯ ವಿಶೇಷ ಸಂದರ್ಭ) ಹೀಗೆ ಈ ಶೋಧ ಅಧ್ಯಯನದ ಶೀರ್ಷಿಕೆ ಆಗಿದೆ. ಅವರು ಪ್ರಾ. ಸಂಜೆಯ ಶ್ರೀವಾಸ್ತವ ಇವರ ಮಾರ್ಗದರ್ಶನದಲ್ಲಿ ಈ ಸಂಶೋಧನೆ ನಡೆಸಿದ್ದಾರೆ.

ಪರ್ವಿನ್ ಮಾತು ಮುಂದುವರಿಸಿ,

೧. ಪ್ರಧಾನಮಂತ್ರಿ ಮೋದಿ ಇವರು ದೇಶದಲ್ಲಿನ ವಿಶ್ವಾಸಾರ್ಹ ನಾಯಕರಾಗಿದ್ದಾರೆ. ಅವರು ಮುಸಲ್ಮಾನರ ವಿರೋಧಿ ಅಲ್ಲ, ಅವರ ಹಿತೈಷಿಗಳಿದ್ದಾರೆ ಹಾಗೂ ಆಧ್ಯಾತ್ಮಿಕ ಚಿಂತಕ ಮತ್ತು ಸಮಾಜ ಸುಧಾರಕರು ಕೂಡ ಇದ್ದಾರೆ.

೨. ನಾನು ಯಾವಾಗ ಈ ವಿಷಯದ ಕುರಿತು ಶೋಧ ಮಾಡುವುದು ನಿರ್ಧರಿಸಿದೆ, ಆಗ ನನಗೆ ಬಹಳ ವಿರೋಧವಾಗಿತ್ತು.

೩. ಈ ಶೋಧ ಅಧ್ಯಯನಕ್ಕಾಗಿ ೨೦ ಹಿಂದಿ ಹಾಗೂ ೭೯ ಇಂಗ್ಲೀಷ್ ಪುಸ್ತಕದ ಅಭ್ಯಾಸ ಮಾಡಿದ್ದೇನೆ. ಇದರ ಜೊತೆಗೆ ೩೭ ಸಮಾಚಾರ ಪತ್ರದ ಅಧ್ಯಯನ ಮಾಡಿದ್ದೇನೆ. ಪ್ರಧಾನಮಂತ್ರಿಯ ಸಹೋದರ ಪಂಕಜ ಮೋದಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಇಂದ್ರೇಶ್ ಕುಮಾರ್ ಇವರ ಸಂದರ್ಶನ ಕೂಡ ನಡೆಸಿದ್ದೇನೆ.

ಸಂಪಾದಕೀಯ ನಿಲುವು

ಇದರ ಬಗ್ಗೆ ಹಿಂದೂದ್ವೇಷಿಗಳು ರಾಜಕಾರಣ ಮಾಡದೆ ಇದ್ದರೆ ಆಶ್ಚರ್ಯ !