ಶ್ರೀ ರಾಮಲಲ್ಲಾ ಆರೂಢ !


ಅಯೋಧ್ಯೆ (ಉತ್ತರ ಪ್ರದೇಶ) – ಯಾವ ಕ್ಷಣಕ್ಕಾಗಿ ರಾಮಭಕ್ತರು ಕಳೆದ 500 ವರ್ಷಗಳಿಂದ ದಾರಿ ಕಾಯುತ್ತಿದ್ದರೋ, ಆ ಕ್ಷಣವನ್ನು ಜನವರಿ 22 ರಂದು ಮಧ್ಯಾಹ್ನ 12 ಗಂಟೆ 29 ನಿಮಿಷಗಳಲ್ಲಿ ದೇಶದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಕೋಟ್ಯಾಂತರ ಜನರು ಅನುಭವಿಸಿದ್ದಾರೆ. ‘ನೋಡಲು ಎರಡು ಕಣ್ಣು ಸಾಲದು’ ಎಂಬುದರ ಅನುಭವವನ್ನು ರಾಮಭಕ್ತರು ಬಾಲರೂಪಿ ಶ್ರೀರಾಮಲಲ್ಲಾನ ಮೋಹಕ ನಗುವಿನಿಂದ ಪಡೆದರು ಮತ್ತು ಭಾವೋದ್ವೇಗದಿಂದ ಅವರ ಕಣ್ಣುಗಳಿಂದ ಭಾವಾಶ್ರು ಹರಿಯಿತು. ಭಾರತದಲ್ಲಷ್ಟೇ ಅಲ್ಲ, ಜಗತ್ತಿನ ಇತಿಹಾಸದಲ್ಲಿಯೇ ಒಂದೇ ಸಮಯದಲ್ಲಿ ಕೋಟ್ಯಾಂತರ ಜನರು ಒಂದೆಡೆ ಸೇರಿ ಒಂದು ದೇವತೆಯ ಸ್ವರೂಪವನ್ನು ನೋಡಿ ಅವರೆಲ್ಲರಿಗೂ ಏಕಕಾಲಕ್ಕೆ ಭಾವಜಾಗೃತಿಯಾಗುವ ಯೋಗವು ಅನೇಕ ಯುಗಗಳಲ್ಲಿ ಬಂದಿರಲಿಕ್ಕಿಲ್ಲ. ಇಂತಹ ಅಪರೂಪದಲ್ಲಿ ಅತೀಅಪರೂಪವಾಗಿರುವ ಯೋಗವು ಕೇವಲ ಮತ್ತು ಕೇವಲ ಅಯೋಧ್ಯೆಯ ಭವ್ಯವಾದ ಶ್ರೀ ರಾಮನ ಮಂದಿರದಲ್ಲಿರುವ ಬಾಲರೂಪದಲ್ಲಿರುವ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಮಾಡುತ್ತಿರುವಾಗ ಕೂಡಿಬಂದಿದೆ. `ಜಗತ್ತಿನ ರಾಮಭಕ್ತರಷ್ಟೇ ಅಲ್ಲ, ಬದಲಾಗಿ ತ್ರೈಲೋಕ್ಯದಿಂದ ದೇವಿ ದೇವತೆಗಳು, ಋಷಿಮುನಿಗಳೂ ಈ ಕ್ಷಣವನ್ನು ಅನುಭವಿಸುತ್ತಾ ತ್ರೈಲೋಕ್ಯಾಧಿಪತಿ ಭಗವಾನ ಶ್ರೀರಾಮನ ಬಾಲಸ್ವರೂಪದ ಮೂರ್ತಿಯ ಮೇಲೆ ಪುಷ್ಪವೃಷ್ಟಿಯನ್ನು ಮಾಡುತ್ತಿದ್ದರು’. ಎನ್ನುವ ಅನುಭೂತಿಯೂ ಅನೇಕ ಜನರಿಗೆ ಬಂದಿರಬಹುದು. ಇದೆಲ್ಲಿ ಸಂದೇಹವಿಲ್ಲ, ಶ್ರೀರಾಮನ ಭವ್ಯ ದೇವಸ್ಥಾನದ ಮೂರ್ತಿಯ ಪ್ರಾಣಪ್ರತಿಷ್ಠಾಪನೆವ ಅನುಷ್ಠಾನ ನೊಡುವಾಗ ‘ಹಿಂದೂ ರಾಷ್ಟ್ರ ಹೇಗಿರಬಹುದು?’, ಎಂದು ಪ್ರಶ್ನಿಸುವವರಿಗೆ ಇದು ಉತ್ತರವಾಗಿತ್ತು. ‘ಹಿಂದೂ ರಾಷ್ಟ್ರ’ ಇದು ಸಂಪೂರ್ಣವಾಗಿ ಮರ್ಯಾದಾ ಪುರುಷೋತ್ತಮ, ಪತಿತಪಾವನ, ಸೀತಾರಾಮ, ಕೋದಂಡಧಾರಿ ರಾಮ, ಬಾಲಕರಾಮ ಈ ನಾಮಗಳಲ್ಲಿರುವ ಭಾವದಂತೆ ಕಾರ್ಯವನ್ನು ಮಾಡುವವನಿದ್ದಾನೆ ಎಂದು ಇದರಿಂದ ಗಮನಕ್ಕೆ ಬಂದಿರಬಹುದು ಎನ್ನುವುದರಲ್ಲಿ ಸಂಶಯವಿಲ್ಲ.

ಪ್ರಾಣಪ್ರತಿಷ್ಠಾಪನೆ ಈ ರೀತಿ ನಡೆಯಿತು !

ಮಧ್ಯಾಹ್ನ 12 ಗಂಟೆ 05 ನಿಮಿಷಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶ್ರೀರಾಮ ಮಂದಿರಕ್ಕೆ ಆಗಮಿಸಿದರು. ಕೈಯಲ್ಲಿ ಕೆಂಪು ಬಟ್ಟೆ ಮತ್ತು ಬೆಳ್ಳಿಯ ಛತ್ರಚಾಮರ ಹಿಡಿದುಕೊಂಡು ಪ್ರಧಾನಮಂತ್ರಿಗಳು ನಡೆದುಕೊಂಡು, ಶ್ರೀರಾಮ ಮಂದಿರವನ್ನು ತಲುಪಿದರು. ಗರ್ಭಗುಡಿಯ ಹೊರಗಿನ ಸ್ಥಾನದಲ್ಲಿ ಕೆಲವು ಸಮಯ ಅರ್ಚಕರ ಸಮ್ಮುಖದಲ್ಲಿ ಪೂಜೆ ಮಾಡಿದರು. ಈ ಸಮಯದಲ್ಲಿ. ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕವನ್ನು ನೆರವೇರಿಸಿದ ಅರ್ಚಕರಾದ ಗಾಗಾ ಭಟ್ಟ ಅವರ ವಂಶಸ್ಥರಾದ ಲಕ್ಷ್ಮೀಕಾಂತ ದೀಕ್ಷಿತ ಅವರು ವಿಧಿಗಳನ್ನು ನೆರವೇರಿಸಿದರು. ಆ ಸಮಯದಲ್ಲಿ ಪ್ರಾಣಪ್ರತಿಷ್ಠಾಪನೆಯ ಮುಹೂರ್ತವನ್ನು ನೀಡಿದ್ದ ಖ್ಯಾತ ಜ್ಯೋತಿಷಿಗಳಾದ ಶ್ರೀ. ಗಣೇಶ್ವರ ಶಾಸ್ತ್ರಿ ದ್ರಾವಿಡ ಇವರೂ ಉಪಸ್ಥಿತರಿದ್ದರು. ತದನಂತರ ಪ್ರಧಾನಮಂತ್ರಿ ಮೋದಿ ಮತ್ತು ಅರ್ಚಕರೊಂದಿಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ ಪಟೇಲ, ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಪ.ಪೂ. ಸರಸಂಘಚಾಲಕರಾದ ಡಾ.ಮೋಹನ ಭಾಗವತ, ‘ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ’ ಕೋಷಾಧ್ಯಕ್ಷರಾದ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜರು ಗರ್ಭಗುಡಿಯನ್ನು ಪ್ರವೇಶಿಸಿದರು. ಗರ್ಭಗುಡಿಯಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ನೃತ್ಯ ಗೋಪಾಲ ದಾಸ ಮಹಾರಾಜ, ಶ್ರೀ ರಾಮಲಲ್ಲಾನ ಪ್ರಧಾನ ಅರ್ಚಕರಾದ ಸತ್ಯೇಂದ್ರ ದಾಸ, ಕಳೆದ 7 ದಿನಗಳಿಂದ ಪ್ರಾಣಪ್ರತಿಷ್ಠಾಪನೆಯ ಪ್ರಧಾನ ಆತಿಥ್ಯ ವಹಿಸಿದ್ದ ಡಾ.ಅನಿಲ್ ಮಿಶ್ರಾ ಅವರು ಅಲ್ಲಿ ಮೊದಲೇ ಉಪಸ್ಥಿತರಿದ್ದರು. ನಂತರದ 15 ನಿಮಿಷಗಳ ಕಾಲ ಮಹಾಮಸ್ತಕಾಭಿಷೇಕಕ್ಕೆ ಸಂಬಂಧಿಸಿದ ನಾನಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. 12 ಗಂಟೆ 29 ನಿಮಿಷಗಳಿಗೆ ಶ್ರೀರಾಮನ ಮೂರ್ತಿಯ ಅಭಿಜಾತ ಮುಹೂರ್ತದಲ್ಲಿ ವಿಧಿವಿಧಾನದ ಪ್ರಾರಂಭದ ನಂತರ ಮೂರ್ತಿಯ ಸಂಪೂರ್ಣ ದರ್ಶನವನ್ನು ಜಗತ್ತಿಗೆ ಮಾಡಿಸಲಾಯಿತು. ತದ ನಂತರ ಮುಂದೆ ಅರ್ಧ ಗಂಟೆಗಳ ಕಾಲ ಇತರ ಧಾರ್ಮಿಕ ವಿಧಿ ವಿಧಾನಗಳನ್ನು ಕೈಕೊಳ್ಳಲಾಯಿತು. ಬಳಿಕ ಆರತಿ ಮಾಡಲಾಯಿತು. ಮೂರ್ತಿ ಪ್ರತಿಷ್ಠಾಪನೆಯ ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ಮತ್ತು ಪ್ರಧಾನಮಂತ್ರಿ ಮೋದಿಯವರ ಭಾಷಣವಾದ ನಂತರ, ಎಲ್ಲಾ ಆಹ್ವಾನಿತರು ದೇವಾಲಯದ ದರ್ಶನಕ್ಕೆ ಬಿಡಲಾಯಿತು.

ವಿಧಿವಿಧಾನಗಳನ್ನು ನೆರವೇರಿಸುವಾಗ ಭಾವುಕರಾದ ಪ್ರಧಾನಮಂತ್ರಿ ಮೋದಿಯವರು!

ಪ್ರಾಣಪ್ರತಿಷ್ಠಾಪನೆಯ ವಿಶೇಷ ಯಜಮಾನಿಕೆಯನ್ನು ವಹಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹಸ್ತದಿಂದ ಪ್ರಾಣಪ್ರತಿಷ್ಠಾಪನೆಯ ವಿಧಿವಿಧಾನಗಳು ಸುಮಾರು ಒಂದು ಗಂಟೆ ಕಾಲ ನಡೆಯಿತು.ಈ ಸಂಪೂರ್ಣ ವಿಧಿಯ ಸಮಯದಲ್ಲಿ ಪ್ರಧಾನಮಂತ್ರಿ ಮೋದಿಯವರು ಭಾವುಕ ಸ್ಥಿತಿಯಲ್ಲಿರುವ ದೃಶ್ಯ ಕಂಡು ಬಂದಿತು. ಪ್ರಧಾನಮಂತ್ರಿ ಮೋದಿಯವರು ರಾಮನಾಮದ ಜಪವನ್ನು ಮಾಡುತ್ತಾ, ಮಂತ್ರಗಳನ್ನು ಹೇಳುತ್ತಾ, ಪ್ರತಿಯೊಂದು ವಿಧಿಯನ್ನು ಅತ್ಯಂತ ಭಾವಪೂರ್ಣ ಪದ್ಧತಿಯಲ್ಲಿ ಮಾಡುವುದನ್ನು ಕೋಟ್ಯಾಂತರ ರಾಮಭಕ್ತರು ನೋಡಿದರು. ಭಾರತದ ಸ್ವಾತಂತ್ರ್ಯದ 75 ವರ್ಷಗಳಲ್ಲಿ ಪ್ರಪ್ರಥಮಬಾರಿಗೆ ಓರ್ವ ಪ್ರಧಾನಮಂತ್ರಿಯಿಂದ ಈ ರೀತಿಯ ಭಾವ ವ್ಯಕ್ತವಾಗುತ್ತಿರುವುದನ್ನು ಜನರು ನೋಡಿದರು. `ದೇವತೆಯ ಮತ್ತು ಅದೂ 500 ವರ್ಷಗಳ ನಂತರ ಪ್ರತಿಷ್ಠಾಪಿತವಾಗಿರುವ ಭಗವಾನ ಶ್ರೀರಾಮನಿಗಾಗಿ ಯಾವ ರೀತಿ ಭಾವವಿರಬೇಕು’, ಎನ್ನುವುದನ್ನು ಪ್ರಧಾನಮಂತ್ರಿ ಮೋದಿಯವರಿಂದ ಪ್ರತಿಯೊಬ್ಬ ಭಕ್ತನಿಗೆ, ಸಾಧಕನಿಗೆ ಮತ್ತು ಶಿಷ್ಯನಿಗೆ ಅನುಭವಿಸಲು ಸಿಕ್ಕಿತು.

1992 ರಲ್ಲಿ ಬಾಬರಿ ಗುಮ್ಮಟವನ್ನು ಧ್ವಂಸಗೊಳಿಸಿದ ನಂತರ ಆ ಸ್ಥಳದಲ್ಲಿ ಒಂದು ಚೌಕಿಯ ಮೇಲೆ ತಂಬೂವಿನಲ್ಲಿ ಶ್ರೀ ರಾಮಲಲ್ಲಾನನ್ನು ಸ್ಥಾಪಿಸಲಾಗಿತ್ತು. ಆ ಸಮಯದಲ್ಲಿ ಪ್ರಧಾನಮಂತ್ರಿ ಮೋದಿಯವರು ತಂಬೂವಿನಲ್ಲಿದ್ದ ಶ್ರೀ ರಾಮಲಲ್ಲಾನನ್ನು ನೋಡಿ ‘ಇಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಿಸಿದ ಮೇಲೆಯೇ ಪುನಃ ಬರುತ್ತೇನೆ’ ಎಂದು ಪ್ರತಿಜ್ಞೆ ಮಾಡಿದ್ದರು. ಆ ಪ್ರತಿಜ್ಞೆ ಇಂದಿನ ದಿನ ಅವರ ಹಸ್ತದಿಂದ ಈ ಮಂದಿರದ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ಮೂಲಕ ಪೂರ್ಣಗೊಳ್ಳುತ್ತಿರುವುದನ್ನು ನೋಡಿ ಪ್ರಧಾನಮಂತ್ರಿ ಮೋದಿಯವರ ಕೃತಜ್ಞತೆಯ ಭಾವ ತುಂಬಿ ಬಂದಿರಬಹುದು’, ಎಂದು ರಾಮಭಕ್ತರಿಗೆ ಅವರನ್ನು ನೋಡಿ ಅರಿವಾಗುತ್ತಿತ್ತು.

ಸಮಾರಂಭಕ್ಕೆ 7 ಸಾವಿರಕ್ಕೂ ಹೆಚ್ಚು ಆಹ್ವಾನಿತರ ಉಪಸ್ಥಿತಿ!

ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕಾಗಿ ಶ್ರೀರಾಮ ಮಂದಿರದ ಆವರಣದಲ್ಲಿ 7 ಸಾವಿರಕ್ಕೂ ಹೆಚ್ಚು ಆಹ್ವಾನಿತರಿಗೆ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಅವರಿಗೆ ವಿಧಿಗಳನ್ನು ವೀಕ್ಷಿಸಲು ಸಾಧ್ಯವಾಗಬೇಕೆಂದು ದೊಡ್ಡ ` ಎಲ್.ಇ.ಡಿ. ಸ್ಕ್ರೀನ್’ ವ್ಯವಸ್ಥೆಯನ್ನು ವಿವಿಧ ಸ್ಥಳಗಳಲ್ಲಿ ಮಾಡಲಾಗಿತ್ತು. ಆಹ್ವಾನಿತರಲ್ಲಿ ಸಾಧುಗಳು, ಸಂತರು, ಮಹಂತರು, ವಾರಕರಿಗಳು, ವಿವಿಧ ಧಾರ್ಮಿಕ ಪಂಥಗಳ ಮುಖಂಡರು, ಮುಖ್ಯಮಂತ್ರಿಗಳು, ಮಂತ್ರಿಗಳು, ನ್ಯಾಯವಾದಿಗಳು, ನಟರು, ಆಟಗಾರರು, ಕೈಗಾರಿಕೋದ್ಯಮಿಗಳು ಮುಂತಾದವರು ಉಪಸ್ಥಿತರಿದ್ದರು. ಸನಾತನ ಸಂಸ್ಥೆಯ ಪರವಾಗಿ ವಿಶೇಷ ಆಹ್ವಾನಿತರಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀ ಸತ್ ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ ಮತ್ತು ಶ್ರೀ ಚಿತ್ ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರೂ ಉಪಸ್ಥಿತರಿದ್ದರು.

 ಆರತಿಯ ಸಮಯದಲ್ಲಿ ಆಹ್ವಾನಿತರಿಂದ ಘಂಟಾನಾದ!

ಶ್ರೀರಾಮಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ನಂತರ ಆರತಿ ಮಾಡಲಾಯಿತು. ಅದಕ್ಕಿಂತ ಮೊದಲು ಮಂದಿರದ ಆವರಣದಲ್ಲಿ ಉಪಸ್ಥಿತರಿದ್ದ ಆಹ್ವಾನಿತರಿಗೆ ಚಿಕ್ಕ ಘಂಟೆಯನ್ನು ವಿತರಿಸಲಾಯಿತು. ಆರತಿಗೆ ಪ್ರಾರಂಭವಾದ ಬಳಿಕ ಈ ಎಲ್ಲ ಆಹ್ವಾನಿತರಿಂದ ಘಂಟಾನಾದ ಮಾಡಲಾಯಿತು.

ಭಾರತೀಯ ಸೇನೆಯ ಹೆಲಿಕಾಪ್ಟರ್ ಮೂಲಕ ದೇವಾಲಯದ ಮೇಲೆ ಪುಷ್ಪವೃಷ್ಟಿ !

ಶ್ರೀರಾಮಮಂದಿರದಲ್ಲಿ 12 ಗಂಟೆ 29ನೇ ನಿಮಿಷದ ಅಭಿಜಿತ ಮುಹೂರ್ತದಲ್ಲಿ ಮೂರ್ತಿಯ ದರ್ಶನವನ್ನು ಎಲ್ಲರಿಗೂ ಮಾಡಿಸಲಾಯಿತು. ಅದೇ ಸಮಯದಲ್ಲಿ ಭಾರತೀಯ ಸೇನೆಯ ಹೆಲಿಕಾಪ್ಟರನಿಂದ ಮಂದಿರದ ಮೇಲೆ ಮತ್ತು ಮಂದಿರದ ಪ್ರದೇಶದಲ್ಲಿ ಆಕಾಶದಿಂದ ಪುಷ್ಪವೃಷ್ಟಿ ಮಾಡಲಾಯಿತು.

ಮಂದಿರದ ನಿರ್ಮಾಣ ಕಾರ್ಯದ ಕಾರ್ಮಿಕರ ಮೇಲೆ ಪ್ರಧಾನಮಂತ್ರಿ ಮೋದಿಯವರಿಂದ ಪುಷ್ಪವೃಷ್ಟಿ!

ಶ್ರೀರಾಮ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ವಿಧಿವಿಧಾನವನ್ನು ಪೂರ್ಣಗೊಳಿಸಿದ ನಂತರ, ಪ್ರಧಾನಮಂತ್ರಿ ಮೋದಿ ಅವರು ಮಂದಿರದ ಆವರಣದಲ್ಲಿ ಉಪಸ್ಥಿತರಿದ್ದ ಆಹ್ವಾನಿತರಿಗೆ ಮಾರ್ಗದರ್ಶನ ಮಾಡಿದರು. ತದನಂತರ ಮಂದಿರದ ನಿರ್ಮಾಣಕ್ಕೆ ಕಳೆದ 4 ವರ್ಷಗಳಿಂದ ಶ್ರಮಿಸಿದ ಕಾರ್ಮಿಕರು ಹಾಗೂ ಅಭಿಯಂತರರನ್ನು ಭೇಟಿ ಮಾಡಿ ಪುಷ್ಪವೃಷ್ಟಿ ಮಾಡಿದರು.

ಕ್ಷಣಚಿತ್ರಗಳು!

1. ಅಯೋಧ್ಯಾ ನಗರಕ್ಕೆ ಹೋಗುವ ರಸ್ತೆಯ ಎರಡೂ ಬದಿಗಳಲ್ಲಿ ನಾಗರಿಕರ ಬಹಳ ದೊಡ್ಡ ಗದ್ದಲ ಇತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ವಾಹನದಲ್ಲಿ ಆಗಮಿಸಿದಾಗ ಎಲ್ಲರೂ ‘ಜೈ ಶ್ರೀರಾಮ್’ ಎಂದು ಜಯಘೋಷ ಮಾಡಿದರು.

2. ಶ್ರೀರಾಮ ಮಂದಿರದಲ್ಲಿ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ಸಮಾರಂಭ ಎಲ್ಲರಿಗೂ ನೋಡಲು ಸಾಧ್ಯವಾಗಬೇಕು ಎಂದು ಅಯೋಧ್ಯೆ ನಗರದ ವಿವಿಧ ಸ್ಥಳಗಳಲ್ಲಿ ದೊಡ್ಡ ಪರದೆಗಳನ್ನು ಹಾಕುವ ಮೂಲಕ ನೇರ ಪ್ರಸಾರವನ್ನು ತೋರಿಸಲಾಯಿತು.

3. ಭಗವಾನ್ ಶ್ರೀರಾಮನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯಾಗುತ್ತಲೇ ಅಯೋಧ್ಯೆ ನಗರದ ಎಲ್ಲೆಡೆ ಪ್ರಭು ಶ್ರೀರಾಮನ ಜಯಘೋಷವನ್ನು ಮಾಡಲಾಯಿತು.

4. ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ನಂತರ ಅಯೋಧ್ಯೆ ನಗರದ ವಿವಿಧ ಸ್ಥಳಗಳಲ್ಲಿ ಪಟಾಕಿಗಳನ್ನು ಸಿಡಿಸಲಾಯಿತು.

5. ರಸ್ತೆಯ ಮೇಲೆ ವಿವಿಧ ಸ್ಥಳಗಳಲ್ಲಿ ಸಣ್ಣ ವೇದಿಕೆಗಳನ್ನು ನಿರ್ಮಿಸಿ ಉತ್ತರ ಪ್ರದೇಶದ ವಿವಿಧ ಸಾಂಸ್ಕೃತಿಕ ನೃತ್ಯಗಳನ್ನು ಪ್ರಸ್ತುತಪಡಿಸಲಾಯಿತು.

ಅಯೋಧ್ಯಾನಗರದ ಮೇಲೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿಯ ಸುರಿಮಳೆ!

ಪ್ರಭು ಶ್ರೀರಾಮನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯಾದ ನಂತರ, ಶ್ರೀರಾಮ ಮಂದಿರದ ಬಳಿಕ ಅಯೋಧ್ಯೆ ನಗರದ ಮೇಲೆಯೂ ಹೆಲಿಕಾಪ್ಟರ್ ಮೂಲಕ ಹೂಗಳ ಸುರಿಮಳೆಯಾಯಿತು. ಆ ಸಮಯದಲ್ಲಿ ಎಲ್ಲಾ ಭಕ್ತರು ಕೈಗಳನ್ನು ಮೇಲೆತ್ತಿ ಶ್ರೀರಾಮನಾಮದ ಜಯಘೋಷವನ್ನು ಮಾಡಿದರು.

ವೈಶಿಷ್ಟ್ಯಪೂರ್ಣ!

ಅನೇಕ ದಿನಗಳ ಬಳಿಕ ಸೂರ್ಯನಾರಾಯಣನ ದರ್ಶನ!

ಕಳೆದ ಅನೇಕ ದಿನಗಳಿಂದ ಮಧ್ಯಾಹ್ನನದ ಬಳಿಕವೂ ಅಯೋಧ್ಯಾ ನಗರದಲ್ಲಿ ಮಂಜು ಮುಸುಕಿರುತ್ತಿತ್ತು. ಜನವರಿ 22 ರಂದು ಪ್ರಭು ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ದಿನದಂದು ಬೆಳಗ್ಗಿನಿಂದಲೇ ಆಕಾಶದಲ್ಲಿ ಸೂರ್ಯನಾರಾಯಣನ ದರ್ಶನವಾಯಿತು. ಇದರಿಂದ ಚಳಿಯ ಪ್ರಮಾಣ ಕಡಿಮೆಯಾಯಿತು.