ಭಾರತಾದ್ಯಂತ ಸಂಭ್ರಮದಿಂದ ಗಣರಾಜ್ಯೋತ್ಸವ ಆಚರಣೆ !

ದೆಹಲಿಯ ಕರ್ತವ್ಯಪಥದಲ್ಲಿಯ ಸಂಚಲನದಲ್ಲಿ ಉತ್ತರಪ್ರದೇಶದ ಚಿತ್ರರಥದಲ್ಲಿ ಶ್ರೀರಾಮಲಲ್ಲಾನ ದರ್ಶನ !

ನವದೆಹಲಿ – ದೇಶಾದ್ಯಂತ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಇಲ್ಲಿಯ ಕರ್ತವ್ಯ ಪಥದಲ್ಲಿ ಬೆಳಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಇವರ ಹಸ್ತದಿಂದ ಧ್ವಜಾರೋಹಣ ನೆರವೇರಿಸಲಾಯಿತು. ಈ ಸಮಯದಲ್ಲಿ ಉಪರಾಷ್ತ್ರಪತಿ ಜಗದೀಪ ಧನಖಡ್, ಪ್ರಧಾನಿ ನರೇಂದ್ರ ಮೋದಿ ಹಾಗೆಯೇ ಮುಖ್ಯ ಅತಿಥಿ ಫ್ರಾನ್ಸ್ ರಾಷ್ಟ್ರಾಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಉಪಸ್ಥಿತರಿದ್ದರು. ಬಳಿಕ ಪ್ರತಿವರ್ಷದಂತೆ ಭಾರತದ ಮೂರು ಸಶಸ್ತ್ರ ಪಡೆಗಳ ಸಂಚಲನೆ, ಶಸ್ತ್ರಾಸ್ತ್ರಗಳ ಪ್ರದರ್ಶನ ಹಾಗೆಯೇ ಭಾರತದ ಸಾಂಸ್ಕ್ರತಿಕ, ಆಧ್ಯಾತ್ಮಿಕ ಪರಂಪರೆಗಳನ್ನು ವಿವಿಧ ಮಾಧ್ಯಮಗಳ ಮೂಲಕ ಪ್ರದರ್ಶಿಸಲಾಯಿತು.

ಇಂದಿನ ಸಂಚಲನದಲ್ಲಿ ಮಹಾರಾಷ್ಟ್ರದ ಚಿತ್ರರಥವನ್ನು ಈ ವರ್ಷ ಶಿವರಾಯರ ಪಟ್ಟಾಭಿಷೇಕದ ೩೫೦ ನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಮಾಡಲಾಗಿತ್ತು ಹಾಗೇ ಉತ್ತರಪ್ರದೇಶದ ಚಿತ್ರರಥ ‘ಅಯೋಧ್ಯೆ : ಅಭಿವೃದ್ಧಿ ಹೊಂದಿದ ಭಾರತ-ಸಮೃದ್ಧ ವಿರಾಸತ್ (ಪರಂಪರೆ)‘ ಆಧರಿಸಿತ್ತು. ಉತ್ತರ ಪ್ರದೇಶದ ಚಿತ್ರರಥದ ಮುಂಭಾಗದಲ್ಲಿ ಶ್ರೀರಾಮಲಲ್ಲಾನ ರೂಪವನ್ನು ತೋರಿಸಲಾಗಿದೆ. ಬೇರೆಬೇರೆ ರಾಜ್ಯಗಳು ಕೂಡ ವಿವಿಧ ವಿಷಯಗಳ ಪ್ರಕಾರ ಚಿತ್ರರಥಗಳನ್ನು ಪ್ರಸ್ತುತ ಪಡಿಸಿದವು.