ಪ್ರಧಾನಿ ನರೇಂದ್ರಮೋದಿ ಇವರಿಂದ ಘೋಷಣೆ
ನವ ದೆಹಲಿ – ದೇಶದ ಮಾಜಿ ಉಪಪ್ರಧಾನಿ ಮತ್ತು ಭಾಜಪದ ಹಿರಿಯ ನಾಯಕ ಲಾಲಕೃಷ್ಣ ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯಾಗಿರುವ ‘ಭಾರತರತ್ನ‘ವನ್ನು ಘೋಷಿಸಲಾಗಿದೆ. ಪ್ರಧಾನಿ ನರೇಂದ್ರಮೋದಿಯವರು ತಮ್ಮ ‘ಎಕ್ಸ್‘ ಖಾತೆಯಿಂದ ಈ ಮಾಹಿತಿ ನೀಡಿದ್ದಾರೆ. ಅಡ್ವಾಣಿ ಅವರಿಗೆ ೨೦೧೫ ರಲ್ಲಿ ಎರಡನೇ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ‘ಪದ್ಮವಿಭೂಷಣ‘ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
I am very happy to share that Shri LK Advani Ji will be conferred the Bharat Ratna. I also spoke to him and congratulated him on being conferred this honour. One of the most respected statesmen of our times, his contribution to the development of India is monumental. His is a… pic.twitter.com/Ya78qjJbPK
— Narendra Modi (@narendramodi) February 3, 2024
ಪ್ರಧಾನಿಮೋದಿ ಪೋಸ್ಟ್ ಮೂಲಕ, ನಾನು ಅಡ್ವಾಣಿ ಅವರೊಂದಿಗೆ ಮಾತನಾಡಿದ್ದು ಅವರು ಈ ಪ್ರಶಸ್ತಿಯನ್ನು ಗೌರವಿಸಿರುವುದಕ್ಕೆ ಅಭಿನಂದನೆಗಳು ಎಂದಿದ್ದಾರೆ. ನಮ್ಮ ಕಾಲದ ಅತ್ಯಂತ ಗೌರವಾನ್ವಿತ ನಾಯಕರಲ್ಲಿ ಒಬ್ಬರಾದ ಅಡ್ವಾಣಿ ಅವರು ಭಾರತದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ್ದಾರೆ. ಸಂಸ್ಥೆಯ ತಳಮಟ್ಟದಿಂದ ದುಡಿಯಲು ಆರಂಭಿಸಿದ ಅವರು ಉಪಪ್ರಧಾನಿ ಹುದ್ದೆಯನ್ನು ತಲಪುವ ಮೂಲಕ ದೇಶ ಸೇವೆಗೆ ಶ್ರಮಿಸಿದರು. ಕೇಂದ್ರ ಗೃಹಸಚಿವರಾಗಿ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವರಾಗಿ ಸೇವೆ ಸಲ್ಲಿಸುವಾಗ ಅವರು ತಮ್ಮನ್ನು ತಾವು ಗುರುತಿಸಿಕೊಂಡರು. ಅವರು ಸಂಸತ್ತಿನಲ್ಲಿ ಮಂಡಿಸಿದ ಸೂತ್ರಗಳು ಮತ್ತು ಅವರ ಭಾಷಣಗಳು ನಮಗೆ ಭೋಧಪ್ರದ ಮತ್ತು ಸಮೃದ್ಧ ಅನುಭವವಾಗಿದೆ. ಎಂದು ಹೇಳಿದರು.