ಗಣರಾಜ್ಯೋತ್ಸವದ ಪರೇಡ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಫ್ರಾನ್ಸ್‌ನ ರಾಷ್ಟ್ರಾಧ್ಯಕ್ಷ !

ನವ ದೆಹಲಿ – ಫ್ರಾನ್ಸ್‌ನ ರಾಷ್ಟ್ರಾಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರಾನ್ ಇವರು ಭಾರತದಲ್ಲಿ ೨ ದಿನದ ಪ್ರವಾಸಕ್ಕೆ ಬಂದಿದ್ದಾರೆ. ಅವರು ನೇರ ಜೈಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದು ಅಲ್ಲಿಯ ಕಾರ್ಯಕ್ರಮ ನೆರವೇರಿಸಿದ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಸ್ವಾಗತಿಸುವವರು. ಜೈಪುರದಲ್ಲಿ ಎರಡು ನಾಯಕರ ಜೊತೆಗೆ ದ್ವಿಪಕ್ಷಿಯ ಸಭೆ ನಡೆಯುವುದು. ಈ ದ್ವಿಪಕ್ಷಿಯ ಸಭೆಯಲ್ಲಿ ಇಸ್ರೇಲ್-ಹವಾಸ್ ಯುದ್ಧ, ಕೆಂಪು ಸಮುದ್ರದಲ್ಲಿ ಹೂತಿ ಬಂಡುಕೋರರ ದಾಳಿ ಹಾಗೂ ಉಭಯ ದೇಶಗಳಲ್ಲಿನ ರಕ್ಷಣಾ ಪಾಲುದಾರಿಕೆ ಮತ್ತು ‘ಯುರೋಪಿಯನ್ ಯೂನಿಯನ್ ವ್ಯಾಪಾರ ಒಪ್ಪಂದ’ ಇದರ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.

ಜನವರಿ ೨೬ ರಂದು ಗಣರಾಜ್ಯೋತ್ಸವ ದಿನದ ಕಾರ್ಯಕ್ರಮದಲ್ಲಿ ಮ್ಯಾಕ್ರಾನ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಮ್ಯಾಕ್ರಾನ್ ಇವರು ಭಾರತದಲ್ಲಿನ ಗಣರಾಜ್ಯೋತ್ಸವದ ಪರೇಡಿನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವ ಫ್ರಾನ್ಸಿನ ಆರನೇಯ ರಾಷ್ಟ್ರಾಧ್ಯಕ್ಷವಾಗಿದ್ದು, ರಾಷ್ಟ್ರಾಧ್ಯಕ್ಷರಾದಾಗಿನಿಂದ ಅವರು ಇದು ಮೂರನೇ ಸಲ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.

ಜುಲೈ ೨೦೨೩ ರಲ್ಲಿ ಪ್ರಧಾನಮಂತ್ರಿ ಮೋದಿ ಫ್ರಾನ್ಸಿನ ‘ಬ್ಯಾಸ್ಟಿಲ್ ಡೇ ಪರೇಡ್’ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಲ್ಲಿ ಆಗಿನ ಪ್ರಧಾನಮಂತ್ರಿ ಮನಮೋಹನ ಸಿಂಹ ಇವರ ನಂತರ ಇವರು ಎರಡನೆಯ ಪ್ರಧಾನಮಂತ್ರಿ ಆಗಿರುವರು.