ಅಯೋಧ್ಯೆಯಿಂದ ‘ಸನಾತನ ಪ್ರಭಾತ’ ದಿನಪತ್ರಿಕೆಯ ವಿಶೇಷ ವರದಿ
ಅಯೋಧ್ಯೆ- ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ದೊಡ್ಡ ಪ್ರಮಾಣದಲ್ಲಿ (ಹಿಂದೂ ಧರ್ಮಕ್ಕೆ ಮರುಪ್ರವೇಶ) ಘರವಾಪಸಿ ಮಾಡುತ್ತಿದ್ದಾರೆ. ಅವರ ಪೂರ್ವಜರು ಸನಾತನ ಹಿಂದೂಗಳಾಗಿದ್ದರೂ, ಅವರನ್ನು ಬಲವಂತವಾಗಿ ಧರ್ಮಾಂತರಗೊಳಿಸಲಾಯಿತು, ಅಂತಹ ದಾರಿ ತಪ್ಪಿರುವ ಜನರು ಈಗ ಹಿಂದೂ ಧರ್ಮಕ್ಕೆ ಮರಳುತ್ತಿದ್ದಾರೆ. ಮಾನವತೆಯ ಭಗವಾ ಎಲ್ಲೆಡೆ ಹಾರಾಡುತ್ತಿದೆ. ಪ್ರಭು ಶ್ರೀರಾಮನು ಬಂದಿದ್ದಾನೆ. ಈಗ ಹಿಂದೂ ರಾಷ್ಟ್ರ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ವಿಶ್ವಾಸವನ್ನು ಅಯೋಧ್ಯೆಯ ತಪಸ್ವಿ ಛಾವಣಿಯ ಪೀಠಾಧೀಶ್ವರ ಜಗದ್ಗುರು ಪರಮಹಂಸಾಚಾರ್ಯರು ‘ಸನಾತನ ಪ್ರಭಾತ’ ದಿನಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ವ್ಯಕ್ತಪಡಿಸಿದರು.
ಆ ಸಮಯದಲ್ಲಿ ಜಗದ್ಗುರು ಪರಮಹಂಸಾಚಾರ್ಯರು ಹೇಳಿದರು.
1. ಪ್ರತಿಯೊಬ್ಬರೂ ‘ಪ್ರಭು ಶ್ರೀರಾಮನು ಎಲ್ಲಿ ಜನಿಸಿದ್ದನು?’ ಈ ವಿಷಯದ ಮಾಹಿತಿಯನ್ನು `ಗೂಗಲ್’ ನಲ್ಲಿ ಹುಡುಕುತ್ತಿದ್ದಾರೆ. ಹಿಂದೂಗಳು ಇತರ ಧರ್ಮದ ಜನರಿಗೂ ಕೂಡ ಶ್ರೀರಾಮನ ಮಹತ್ವವನ್ನು ಹೇಳುತ್ತಿದ್ದಾರೆ. `ಭಗವಾನ ಶ್ರೀರಾಮ ಯಾರು?’ ಎಂದು ತಿಳಿದುಕೊಳ್ಳುವ ಅಪರೂಪದ ಅವಕಾಶ ಈಗ ಒದಗಿ ಬಂದಿದೆ.
2. ಮರ್ಯಾದಾ ಪುರುಷೋತ್ತಮ ಭಗವಾನ ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಸಮಾರಂಭದಿಂದಾಗಿ ಅಯೋಧ್ಯಾ ನಗರ, ಇಡೀ ಭಾರತ ಮತ್ತು ಪ್ರಪಂಚನಲ್ಲಿಯೂ ಸಂತೋಷ ಮತ್ತು ಉಲ್ಲಾಸದ ವಾತಾವರಣವಿದೆ. ಎಲ್ಲಾ ಜಾತಿ ಮತ್ತು ಧರ್ಮದ ಜನರು ಉತ್ಸಾಹ ಮತ್ತು ಆನಂದದಿಂದ ಇದ್ದಾರೆ. ಎಲ್ಲರೂ ಜನವರಿ 22 ರಂದು ನಡೆಯಲಿರುವ ಪ್ರಭು ಶ್ರೀರಾಮನ ಪ್ರಾಣಪ್ರತಿಷ್ಠಾಪನೆಯ ಸಮಾರಂಭಕ್ಕೆ ಕಾಯುತ್ತಿದ್ದಾರೆ.
3. ಹೌದು, ರಾಮರಾಜ್ಯ ಆರಂಭವಾಗಿದೆ. ತ್ರೇತಾಯುಗದಲ್ಲಿ ರಾಮರಾಜ್ಯದ ಚರ್ಚೆ ಕಲಿಯುಗದಲ್ಲೂ ಮುಂದುವರಿದಿದೆ.
ಜನವರಿ 22 ರ ಶುಭ ಮುಹೂರ್ತದ ಮಹತ್ವ!
ಜನವರಿ 22 ಶ್ರೀ ರಾಮಲಲ್ಲಾ ಮೂರ್ತಿಯ ಅಭಿಷೇಕಕ್ಕೆ 84 ಸೆಕೆಂಡುಗಳ ಶುಭ ಮುಹೂರ್ತವಿದೆ. ಇದರಲ್ಲಿ ಪ್ರಭು ಶ್ರೀರಾಮನ ಮೂರ್ತಿಯ ಅಭಿಷೇಕವನ್ನು ಮಾಡಲಿದ್ದಾರೆ. ಈ ಶುಭಮುಹೂರ್ತ ಮಧ್ಯಾಹ್ನ 12.30ರಿಂದ ಆರಂಭವಾಗಲಿದೆ. 84 ಸೆಕೆಂಡುಗಳಲ್ಲಿಯೂ, 4 ಸೆಕೆಂಡುಗಳು ಬಹಳ ಮಹತ್ವದ್ದಾಗಿದೆ. ಆ ಸಮಯದಲ್ಲಿ, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶ್ರೀ ರಾಮಲಲ್ಲಾನಿಗೆ ಕಾಡಿಗೆಯನ್ನು ಹಚ್ಚುವರು. ಅಲ್ಲಿಂದ ಪ್ರಭು ಶ್ರೀರಾಮನು ಆಶೀರ್ವಾದ ನೀಡಲು ಪ್ರಾರಂಭಿಸುವನು. ಆ ಸಮಯದಲ್ಲಿ ಪ್ರಭು ಶ್ರೀರಾಮನ ಪ್ರಾಣಪ್ರತಿಷ್ಟಾಪನೆಯಾಗಲಿದೆ. ಅದಕ್ಕಿಂತ ಮೊದಲು ಸಂಪೂರ್ಣ ಸಿದ್ಧತೆಯನ್ನು ಮಾಡಲಾಗುವುದು. ಇದು ಅತ್ಯಂತ ಅದ್ಭುತವಾಗಿದೆ. ಈ ಕ್ಷಣಕ್ಕಾಗಿ, ಈ ಶುಭ ಸಮಯಕ್ಕಾಗಿ ಜನರು 500 ವರ್ಷಗಳಿಂದ ಹೋರಾಡಿ, ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು ಎಂದು ಜಗದ್ಗುರು ಪರಮಹಂಸಾಚಾರ್ಯರು ಹೇಳಿದರು.
‘ಸನಾತನ ಪ್ರಭಾತ’ ಕಾರ್ಯದ ಶ್ಲಾಘನೆ !
ಜಗದ್ಗುರು ಪರಮಹಂಸಾಚಾರ್ಯರು ಸನಾತನ ಪ್ರಭಾತದ ಕಾರ್ಯವನ್ನು ಶ್ಲಾಘಿಸಿದರು ಮತ್ತು ` ಸನಾತನ ಪ್ರಭಾತ’ಕ್ಕೆ ಶುಭ ಹಾರೈಸಿದರು. ಸನಾತನ ಪ್ರಭಾತವನ್ನು ಹೆಚ್ಚು ಹೆಚ್ಚು ಹಿಂದೂಗಳು ಓದಬೇಕು ಮತ್ತು ಅದಕ್ಕಾಗಿ ಇತರರನ್ನು ಓದುವಂತೆ ಪ್ರೇರೇಪಿಸಬೇಕು ಎಂದು ಹೇಳಿದರು.
Swami Peethadheeshwar Jagadguru Paramhansacharyaji gave Ashirwaad to Sanatan Prabhat!
Sanatan Prabhat is spreading the significance of Sanatan Dharma across the globe, Jagadguru said.#JaiShreeRam #AyodhyaRamMandir शोभा यात्रा | राम सेतु#SanatanPrabhatInAyodhya #AyodhyaDham pic.twitter.com/SIV1wP7DUo
— Sanatan Prabhat (@SanatanPrabhat) January 21, 2024