ಫ್ರಾನ್ಸ್‌ನಲ್ಲೂ ಭಾರತೀಯ ‘ಯುಪಿಐ’ (ಆನ್‌ಲೈನ್ ವಹಿವಾಟು) ಆರಂಭ !

ಪ್ಯಾರಿಸ್ (ಫ್ರಾನ್ಸ್) – ಫ್ರಾನ್ಸ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು ಫೆಬ್ರವರಿ 2, 2024 ರಂದು ಪ್ಯಾರಿಸ್‌ನ ಐಫೆಲ್ ಟವರ್‌ನಲ್ಲಿ ‘ಯೂನಿಫೈಡ್ ಪೇಮೆಂಟ್ ಇಂಟರ್‌ಫೇಸ್’ (UPI) ಅನ್ನು ಔಪಚಾರಿಕವಾಗಿ ಉದ್ಘಾಟಿಸಿತು. ಈಗ ಜನರು ಈ ಮೂಲಕ ಐಫೆಲ್ ಟವರ್ ಟಿಕೆಟ್‌ಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಇವರು, ಇದನ್ನು ನೋಡಲು ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ. (UPI) ಅನ್ನು ಜಾಗತಿಕಗೊಳಿಸುವ ನಿಟ್ಟಿನಲ್ಲಿ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ. ಇದರಿಂದಾಗಿ ಡಿಜಿಟಲ್ ಪಾವತಿಗಳನ್ನು (ಆನ್‌ಲೈನ್) ಚಾಲನೆ ಸಿಗುತ್ತದೆ. ಭಾರತೀಯ ರಾಯಭಾರ ಕಚೇರಿ ಇಲ್ಲಿ ಗಣರಾಜ್ಯೋತ್ಸವದ ಸ್ವಾಗತವನ್ನು ಆಯೋಜಿಸಿತ್ತು. ಈ ಅವಧಿಯಲ್ಲಿ ಯುಪಿಐ ಅನ್ನು ಔಪಚಾರಿಕವಾಗಿ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಭಾರತ ಮತ್ತು ಫ್ರಾನ್ಸ್‌ನ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಭಾರತಕ್ಕೆ ಭೇಟಿ ನೀಡಿದ ನಂತರ ಫ್ರಾನ್ಸ್‌ನಲ್ಲಿ ಯುಪಿಐ ಅನ್ನು ಉದ್ಘಾಟಿಸಲಾಗಿದೆ. ಮ್ಯಾಕ್ರನ್ ಜನವರಿ 25 ರಂದು ಜೈಪುರ ತಲುಪಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯುಪಿಐ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಇಬ್ಬರು ನಾಯಕರು ಚಹಾ ಸೇವಿಸಿದ್ದು, ಮ್ಯಾಕ್ರನ್ ಆನ್‌ಲೈನ್‌ನಲ್ಲಿ ಹಣವನ್ನು ಪಾವತಿಸಿದ್ದರು.

ಯುಪಿಐ ಎಂದರೇನು ?

ಯುನೈಟೆಡ್ ಪೇಮೆಂಟ್ ಇಂಟರ್ಫೇಸ್ ಅಂದರೆ ಯುಪಿಐ ಅನ್ನು ಭಾರತವು 2016 ರಲ್ಲಿ ಮೊದಲು ಪ್ರಾರಂಭಿಸಿತು. ಇದನ್ನು ‘ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ’ ಸ್ಥಾಪಿಸಿದೆ. ಇದು ಸುಲಭವಾಗಿ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ವರ್ಗಾಯಿಸುವ ಸೌಲಭ್ಯವನ್ನು ಒದಗಿಸುತ್ತದೆ.