ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಹಾಗೂ ಧರ್ಮಪ್ರೇಮಿಗಳಲ್ಲಿ ಸವಿನಯ ವಿನಂತಿ !
ಬ್ಯಾಂಕ್ ಖಾತೆಯಲ್ಲಿನ ಉಳಿತಾಯ ಖಾತೆ (ಸೇವಿಂಗ್ಸ ಅಕೌಂಟ್) ವಹಿವಾಟುಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಕೆಳಗೆ ನೀಡಲಾಗಿದೆ.
೧. ಒಂದಕ್ಕಿಂತ ಹೆಚ್ಚು ವ್ಯಕ್ತಿಗಳ ಜಂಟಿ ಖಾತೆಯನ್ನು (ಜಾಯಿಂಟ್) ತೆರೆದು ‘ಐದರ್ ಆರ ಸರ್ವೈವರ್ ಈ ಆಯ್ಕೆಯನ್ನು ಆಯ್ಕೆ ಮಾಡಿದರೆ, ಖಾತೆದಾರರಲ್ಲಿ ಒಬ್ಬರು ಲಭ್ಯವಿಲ್ಲದಿದ್ದರೆ, ಇನ್ನೊಬ್ಬರ ಹಸ್ತಾಕ್ಷರದೊಂದಿಗೆ ವ್ಯವಹಾರವನ್ನು ಪೂರ್ಣಗೊಳಿಸಬಹುದು.
೨. ಖಾತೆಯನ್ನು ತೆರೆಯುವಾಗ, ವಾರಸುದಾರ ನೋಂದಣಿಯ ಆಯ್ಕೆಯನ್ನು ಆರಿಸುವುದು !
ಹೆಚ್ಚಿನ ಜನರು ಬ್ಯಾಂಕ್ ಖಾತೆಯಲ್ಲಿ ಹೊಸ ಉಳಿತಾಯ ಖಾತೆಯನ್ನು ತೆರೆಯುವಾಗ ಅರ್ಜಿಯಲ್ಲಿನ ನಾಮಿನಿ ಆಯ್ಕೆ ಯನ್ನು ಆರಿಸುವುದಿಲ್ಲ. ಇದರಿಂದ ಖಾತೆಗೆ ಸಂಬಂಧಿಸಿದ ವ್ಯಕ್ತಿಯ ಆಕಸ್ಮಿಕ ನಿಧನವಾದರೆ, ಖಾತೆಯಿಂದ ಹಣವನ್ನು ಹಿಂಪಡೆಯಲು ಮೃತವ್ಯಕ್ತಿಯ ನಂತರದ ಅಧಿಕಾರಿ ವ್ಯಕ್ತಿಗೆ ಸಾಕಷ್ಟು ಕಾನೂನು ಪ್ರಕ್ರಿಯೆಗಳನ್ನು ಮಾಡಬೇಕಾಗುತ್ತದೆ. ಅದರಲ್ಲಿ ಬಹಳಷ್ಟು ಹಣ ಮತ್ತು ಸಮಯ ವ್ಯರ್ಥವಾಗುತ್ತದೆ ಹಾಗೂ ಆಡಳಿತದ ನಿಧಾನಗತಿಯ ಕಾರ್ಯ ನಿರ್ವಹಣೆಯು ಹತಾಶೆಯನ್ನು ಉಂಟುಮಾಡುತ್ತದೆ. ಖಾತೆಗೆ ಸಂಬಂಧಿಸಿದ ಅರ್ಜಿಯಲ್ಲಿ ನಾಮಿನಿ ಆಯ್ಕೆ ಯನ್ನು ಆರಿಸಿಕೊಳ್ಳದಿದ್ದರೆ, ಬ್ಯಾಂಕಅನ್ನು ಸಂಪರ್ಕಿಸಿ ಅದರ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸ ಬೇಕು. ಹತ್ತಿರದ ಕುಟುಂಬದ ಸದಸ್ಯ, ಪರಿಚಯಸ್ಥ ಅಥವಾ ಸ್ನೇಹಿತನನ್ನು ‘ವಾರಸುದಾರ ಎಂದು ಆಯ್ಕೆ ಮಾಡಬಹುದು.
೩. ಚಾಲ್ತಿಯಲ್ಲಿಲ್ಲದ ಉಳಿತಾಯ ಖಾತೆಗಳು, ಹಾಗೆಯೇ ಚಾಲ್ತಿ ಖಾತೆಗಳ ಮುಂದುವರಿಕೆ ಅಥವಾ ಮುಚ್ಚುವಿಕೆಯ ಬಗ್ಗೆ ಸಾಧ್ಯವಾದಷ್ಟು ಬೇಗ ನಿರ್ಧಾರ ತೆಗೆದುಕೊಳ್ಳಬೇಕು !
ಕೆಲವು ಜನರು ಬ್ಯಾಂಕ್ ಖಾತೆಯಲ್ಲಿನ ಉಳಿತಾಯ, ಹಾಗೆಯೇ ಚಾಲ್ತಿ ಖಾತೆಗಳನ್ನು ದೀರ್ಘಕಾಲದ ವರೆಗೆ ಬಳಸುವುದಿಲ್ಲ. ಆ ಕಾರಣದಿಂದಾಗಿ ಖಾತೆಯು ಸ್ವಯಂಚಾಲಿತವಾಗಿ ನಿಷ್ಕ್ರಿಯವಾಗುತ್ತದೆ ಮತ್ತು ಆ ಖಾತೆಗೆ ಸಂಬಂಧಿಸಿದ ಯಾವುದೇ ವಹಿವಾಟನ್ನು ಮಾಡಬೇಕಾದರೆ ಅದು ಬ್ಯಾಂಕ್‌ಗೆ ಅರ್ಜಿ ಸಲ್ಲಿಸುವ ಮೂಲಕ ಅದನ್ನು ಪುನಃ ಸಕ್ರಿಯಗೊಳಿಸಲು ಸಮಯ ಮತ್ತು ಶ್ರಮವು ವ್ಯರ್ಥವಾಗುತ್ತದೆ. ಇನ್ನು ಮುಂದೆ ಖಾತೆದಾರರು ಪ್ರತಿ ೨-೩ ತಿಂಗಳಿಗೊಮ್ಮೆ ತಮ್ಮ ಖಾತೆಯಲ್ಲಿ ಮೊತ್ತವನ್ನು ಜಮಾ ಮಾಡಬೇಕು ಅಥವಾ ಹಿಂಪಡೆಯಬೇಕು; ಇದರಿಂದ ನಿಮ್ಮ ಖಾತೆ ನಿಷ್ಕ್ರಿಯವಾಗುವುದಿಲ್ಲ. ವಹಿವಾಟಿನ ನಂತರ, ನಿಮ್ಮ ಉಳಿತಾಯ ಅಥವಾ ಚಾಲ್ತಿ ಖಾತೆಯ ಪಾಸ್‌ಬುಕ್ ಅನ್ನು ಭರ್ತಿ ಮಾಡಿ ಮತ್ತು ನೋಂದಣಿಗಳು ಸರಿಯಾಗಿವೆಯೇ ಎಂದು ಪರಿಶೀಲಿಸಬೇಕು. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಸಂಬಂಧ ಪಟ್ಟವರು ಆದಷ್ಟು ಬೇಗ ಕಾರ್ಯಾಚರಣೆಯಲಿಲ್ಲದ (ಆಪರೇಟ್ ಮಾಡದ) ಖಾತೆಗಳನ್ನು ಕಾರ್ಯನಿರ್ವಹಿಸುವಂತೆ (ಆಪರೇಟಿವ್) ಮಾಡುವ ಬಗ್ಗೆ ಅಥವಾ ಅವುಗಳನ್ನು ಮುಚ್ಚುವ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಪ್ರತಿಯೊಬ್ಬರೂ ತಮ್ಮ ಹಣಕಾಸಿನ ವಹಿವಾಟಿನ ದಾಖಲೆಗಳ ಪಟ್ಟಿಯನ್ನು ತಯಾರಿಸಬೇಕು ಮತ್ತು ಅವುಗಳನ್ನು ಸುರಕ್ಷಿತ ಸ್ಥಳದಲ್ಲಿಡಬೇಕು. (೪.೭.೨೦೨೩)