೧. ‘ಕೆಲವು ಹಿಂದುತ್ವನಿಷ್ಠರಿಗೆ ‘ಸಂತರೊಂದಿಗೆ ಹೇಗೆ ವರ್ತಿಸಬೇಕು ?’, ಎಂಬುದೂ ಗೊತ್ತಿರುವುದಿಲ್ಲ, ಉದಾ. ಸಂತರಿಗೆ ‘ಕೃತಜ್ಞತೆಗಳು’ ಎಂದು ಹೇಳದೇ ಅವರು ‘ಥ್ಯಾಂಕ್ಸ್’ ಅಥವಾ ‘ಧನ್ಯವಾದಗಳು’ ಎಂದು ಹೇಳುತ್ತಾರೆ. ಸಂತರ ಬಳಿ ತಮ್ಮ ವಿಚಾರಗಳನ್ನು ಮಂಡಿಸುವಾಗ ‘ನನ್ನ ಮಾತುಗಳು ಹೇಗೆ ಯೋಗ್ಯವಾಗಿವೆ ?’, ಈ ವಿಚಾರದಿಂದ ಅವರು ದೊಡ್ಡ ಧ್ವನಿಯಲ್ಲಿ ಮತ್ತು ಒತ್ತಾಯಪೂರ್ವಕವಾಗಿ ಮಾತನಾಡುತ್ತಾರೆ. ‘ಹಿಂದುತ್ವನಿಷ್ಠರು ಸಂತರೊಂದಿಗೆ ಹೇಗೆ ವರ್ತಿಸಬೇಕು ?’, ಎಂಬುದನ್ನು ಕಲಿತುಕೊಳ್ಳುವುದು ಆವಶ್ಯಕವಾಗಿದೆ.
೨. ಸಂತರ ಬೋಧನೆಯ ಅಂತರಾರ್ಥವನ್ನು ಅರಿತುಕೊಳ್ಳದೇ ಅವರ ಬಗ್ಗೆ ಬುದ್ಧಿಯ ಸ್ತರದಲ್ಲಿ ಊಹಿಸಿ ಅದರ ಕಡೆಗೆ ದುರ್ಲಕ್ಷಿಸಲಾಗುತ್ತದೆ, ಉದಾ. ಸಂತರು ಅವರಿಗೆ ‘ಉತ್ತಮ ಕಾರ್ಯವಾಗಲು ಸಾಧನೆಯನ್ನು ಮಾಡಿ’, ಎಂದು ಹೇಳಿದರೆ, ಆಗ ಅವರು, ‘ಈಗ ಧರ್ಮದ ಮೇಲೆ ಎಷ್ಟೊಂದು ಆಕ್ರಮಣಗಳಾಗುತ್ತಿವೆ, ಆದ್ದರಿಂದ ತುಂಬಾ ಕಾರ್ಯ ಮಾಡುವುದಿದೆ. ಹೀಗಿರುವಾಗ ಸಾಧನೆ ಮಾಡಲು ಸಮಯ ಎಲ್ಲಿದೆ ?’ ಎಂದು ವಿಚಾರ ಮಾಡುತ್ತಾರೆ. ಆದ್ದರಿಂದ ಅವರು ಸಾಧನೆ ಮಾಡುವುದರತ್ತ ಪೂರ್ಣವಾಗಿ ದುರ್ಲಕ್ಷಿಸುತ್ತಿದ್ದಾರೆ. ಸಂತರು ಕಾರ್ಯವನ್ನು ನಿಲ್ಲಿಸಲು ಹೇಳಿಲ್ಲ. ಕಾರ್ಯವನ್ನು ಮಾಡುತ್ತಿರುವಾಗಲೇ ಸಾಧನೆಯನ್ನು ಮಾಡಲು ಹೇಳಿದ್ದಾರೆ’ ಎಂಬುದನ್ನು ಅವರು ಗಮನದಲ್ಲಿಡುವುದಿಲ್ಲ.
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ.