Prayagraj Bomb Blast : ಗೆಳತಿಯನ್ನು ಭೇಟಿಯಾಗುವುದನ್ನು ವಿರೋಧಿಸಿದವರಿಗೆ ಬೆದರಿಸಲು ಸ್ಫೋಟ ನಡೆಸಲಾಗಿದೆ ಎಂದು ಆರೋಪಿಗಳ ಹೇಳಿಕೆ

ಪ್ರಯಾಗರಾಜ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮುಸ್ಲಿಮರು ಸೇರಿದಂತೆ ಮೂವರ ಬಂಧನ: 12 ಬಾಂಬ್ ವಶ

ಪ್ರಯಾಗರಾಜ್‌ (ಉತ್ತರ ಪ್ರದೇಶ) – ಇಲ್ಲಿನ ಹಳೆಯ ಕಟರಾ ಮಾರುಕಟ್ಟೆಯಲ್ಲಿ ಕೆಲ ದಿನಗಳ ಹಿಂದೆ ನಾಡ ಬಾಂಬ್ ಸ್ಫೋಟ ಸಂಭವಿಸಿತ್ತು. ಇದರಿಂದ ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲ. ಈ ಸ್ಫೋಟ ಪ್ರಕರಣದಲ್ಲಿ ಪೊಲೀಸರು ಅಬ್ದುಲ್ಲಾ, ಅದ್ನಾನ್ ಮತ್ತು ಮಂಜಿತ್ ಎಂಬ ಮೂವರನ್ನು ಬಂಧಿಸಿದ್ದಾರೆ. ಪೊಲೀಸರು ಅವರಿಂದ 12 ನಾಡ ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಅದ್ನಾನ್‌ನ ಗೆಳತಿಯ ಪ್ರದೇಶದ ಜನರನ್ನು ಹೆದರಿಸಲು ಇವರೆಲ್ಲಾ ಸೇರಿ ಸ್ಫೋಟ ನಡೆಸಿದ್ದಾರೆ ಎಂದು ವಿಚಾರಣೆಯಲ್ಲಿ ತಿಳಿಸಿದ್ದಾನೆ.

ಅದ್ನಾನ್ ಹೇಳುವ ಪ್ರಕಾರ, ಅವನು ಹಳೆಯ ಕಟರಾ ಮಾರುಕಟ್ಟೆಯಲ್ಲಿ ತನ್ನ ಗೆಳತಿಯನ್ನು ಭೇಟಿಯಾಗಲು ಹೋದಾಗ, ಸುತ್ತಮುತ್ತಲಿನ ಜನರು ವಿರೋಧಿಸಿ ಅವನನ್ನು ಬರದಂತೆ ತಡೆಯುತ್ತಿದ್ದರು. ಹೀಗಾಗಿ ಮಾರ್ಚ್ 19 ರಂದು ಕುಡಿದ ಮತ್ತಿನಲ್ಲಿ ತನ್ನ ಸ್ನೇಹಿತರೊಂದಿಗೆ ಸೇರಿ ಬಾಂಬ್ ಸ್ಫೋಟಿಸಿದ್ದಾನೆ.

ಸಂಪಾದಕೀಯ ನಿಲುವು

ಮತಾಂಧ ಮುಸ್ಲಿಮರ ಬಳಿ ಯಾವುದೇ ಕಾರಣವಿರಲಿ, ಬಾಂಬ್‌ಗಳು ಇದ್ದೇ ಇರುತ್ತವೆ ಮತ್ತು ಅವರು ಅದನ್ನು ಬಹಿರಂಗವಾಗಿ ಬಳಸುತ್ತಾರೆ ಎಂಬುದನ್ನು ಗಮನಿಸಿ! ಇದೇ ಬಾಂಬ್‌ಗಳನ್ನು ಮುಂದೆ ಹಿಂದೂಗಳ ವಿರುದ್ಧ ಬಳಸಿದರೆ ಆಶ್ಚರ್ಯಪಡಬೇಕಾಗಿಲ್ಲ.