Tablighis Deported To Nepal : ಭಾರತ ವಿರೋಧಿ ಚಟುವಟಿಕೆ; ನೇಪಾಳದಿಂದ ಬಂದಿದ್ದ ತಬ್ಲಿಗಿ ಜಮಾತ್ ನ 10 ಮಂದಿ ದೇಶದಿಂದ ಹೊರಗೆ

ದೌಸಾ (ರಾಜಸ್ಥಾನ) – ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ನೇಪಾಳದ 10 ಮುಸಲ್ಮಾನರನ್ನು ಪೊಲೀಸರು ಭಾರತ-ನೇಪಾಳ ಗಡಿಗೆ ಕಳುಹಿಸಿದ್ದು, ಅಲ್ಲಿಂದ ಅವರನ್ನು ನೇಪಾಳಕ್ಕೆ ಕಳುಹಿಸಲಾಗುವುದು. ಆರೋಪಿಗಳಲ್ಲಿ 5 ಪುರುಷರು ಮತ್ತು 5 ಮಹಿಳೆಯರಿದ್ದಾರೆ. ಪೊಲೀಸ್ ಉಪ ಅಧೀಕ್ಷಕರಾದ ರವಿ ಪ್ರಕಾಶ ಶರ್ಮಾ ಅವರು ಮಾತನಾಡಿ, ಈ ಎಲ್ಲ ಆರೋಪಿಗಳು ತಬ್ಲಿಗಿ ಜಮಾತ್ ನವರಾಗಿದ್ದು, ಮಾರ್ಚ್ 4 ರಂದು ಧಾರ್ಮಿಕ ಕಾರ್ಯಕ್ರಮಕ್ಕಾಗಿ ನೇಪಾಳದಿಂದ ಭಾರತಕ್ಕೆ ಬಂದಿದ್ದರು. ಆದರೆ, ಇಲ್ಲಿ ದೇಶವಿರೋಧಿ ಚಟುವಟಿಕೆಗಳನ್ನು ಪ್ರಾರಂಭಿಸಿದರು ಎಂದು ತಿಳಿಸಿದರು.

ಸಂಪಾದಕೀಯ ನಿಲುವು

ಒಂದು ಕಾಲದಲ್ಲಿ ಹಿಂದೂ ರಾಷ್ಟ್ರವಾಗಿದ್ದ ಹಿಂದೂ ಬಹುಸಂಖ್ಯಾತ ನೇಪಾಳದಿಂದ ಮುಸಲ್ಮಾನರು ಭಾರತಕ್ಕೆ ಬಂದು ದೇಶವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವುದು ಉಭಯ ದೇಶಗಳ ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ !