ಆಶ್ರಮದ ಭೂಮಿಯಲ್ಲಿನ ನೀರಿನ ಸ್ಪಂದನಗಳನ್ನು ಹುಡುಕಲು ನಕಾಶೆಯ ಮೇಲಿನಿಂದ ಬೆರಳನ್ನು ತಿರುಗಿಸುತ್ತಿರುವಾಗ ‘ಬಾಯಿಯಲ್ಲಿ ಲಾಲಾರಸ ಬಂದ ಸ್ಥಳದಲ್ಲಿ ಭೂಮಿಯಲ್ಲಿ ನೀರಿದೆ, ಎಂದು ಅರಿವಾಗುವುದು ಹಾಗೂ ಅದೇ ಸ್ಥಳದಲ್ಲಿ ನೀರಿದೆ ಎಂದು ಸಾಬೀತಾಗುವುದು

(ಸದ್ಗುರು) ಡಾ. ಮುಕುಲ ಗಾಡಗೀಳ

‘ವಾರಾಣಸಿಯ ಆಶ್ರಮದ ಭೂಮಿಯಲ್ಲಿ ಬಾವಿಯನ್ನು ತೋಡಲು ‘ಅಲ್ಲಿನ ಭೂಮಿಯಲ್ಲಿ ನೀರು ಎಲ್ಲಿದೆ ?, ಎಂಬುದನ್ನು ಕಂಡು ಹಿಡಿಯಲಿಕ್ಕಿತ್ತು. ಅದಕ್ಕಾಗಿ ನನಗೆ ಆ ಸ್ಥಳದ ನಕಾಶೆಯನ್ನು ಕೊಟ್ಟಿದ್ದರು. ನಾನು ಆ ನಕಾಶೆಯ ಮೇಲಿನಿಂದ ಬೆರಳನ್ನು ತಿರುಗಿಸಿ ಭೂಮಿಯಲ್ಲಿ ನೀರಿರುವ ಜಾಗದ ಸ್ಪಂದನಗಳನ್ನು ನೋಡುತ್ತಿದ್ದೆ. ಅನಿರೀಕ್ಷಿತವಾಗಿ ನನಗೆ ಒಂದು ಸ್ಥಳದ ಮೇಲೆ ಬೆರಳನ್ನು ಇಟ್ಟಾಗ ಬಾಯಿಯಲ್ಲಿ ಲಾಲಾರಸ ಬಂತು. ಆಗ ‘ಆ ಸ್ಥಳದಲ್ಲಿ ಭೂಮಿಯಲ್ಲಿ ನೀರಿದೆ, ಎಂದು ನನ್ನ ಗಮನಕ್ಕೆ ಬಂತು. ನಾನು ಆ ಸ್ಥಳದಿಂದ ಬೇರೆ ಸ್ಥಳದ ಮೇಲೆ ಬೆರಳನ್ನು ಇಟ್ಟಾಗ ಬಾಯಿಯಲ್ಲಿ ಲಾಲಾರಸ ಬರುವುದು ನಿಂತಿತು ಮತ್ತು ಪುನಃ ಆ ಸ್ಥಳದ ಮೇಲೆ ಬೆರಳನ್ನು ಇಟ್ಟಾಗ ಬಾಯಿಯಲ್ಲಿ ಲಾಲಾರಸ ಪುನಃ ಬರಲು ಆರಂಭವಾಯಿತು. ನಾನು ಈ ಪ್ರಯೋಗವನ್ನು ೩-೪ ಬಾರಿ ಮಾಡಿದೆ ಹಾಗೂ ನನಗೆ ಅರಿವಾಗುವುದು ಸರಿಯಿದೆಯೇ ?, ಎಂಬುದನ್ನು ಪರೀಕ್ಷಿಸಿದೆ. ಅನಂತರ ‘ಭೂಮಿಯಲ್ಲಿ ನೀರು ಅರಿವಾದ ಭಾಗದಲ್ಲಿ ಎಷ್ಟು ಪರಿಸರದಲ್ಲಿ ನೀರಿದೆ ಮತ್ತು ಅದರ ಕೇಂದ್ರಬಿಂದು ಎಲ್ಲಿದೆ ?, ಎಂಬುದನ್ನೂ ನಾನು ಹುಡುಕಿದೆ ಮತ್ತು ಅದಕ್ಕನುಸಾರ ನಕಾಶೆಯ ಮೇಲೆ ‘ಪೆನ್ಸಿಲ್ನಿಂದ ಗುರುತು ಮಾಡಿದೆ. ಆ ನಕಾಶೆಯ ಮೇಲೆ ಇನ್ನೂ ಒಂದು ಸ್ಥಳದಲ್ಲಿ ಭೂಮಿಯಲ್ಲಿ ನೀರಿದೆ ಎಂದು ನನಗೆ ಅರಿವಾಯಿತು ಹಾಗೂ ಅಲ್ಲಿಯೂ ನಾನು ಗುರುತು ಮಾಡಿದೆ.
ಶ್ರೀಫಲದ ಸಹಾಯದಿಂದಲೂ ಭೂಮಿಯಲ್ಲಿನ ನೀರನ್ನು ಕಂಡುಹಿಡಿಯಬಹುದು. ಅದಕ್ಕಾಗಿ ನಮ್ಮ ಅಂಗೈಯ ಮೇಲೆ ಶ್ರೀಫಲವನ್ನು ಇಟ್ಟುಕೊಳ್ಳಬೇಕು. ಅದರ ಜುಟ್ಟನ್ನು ನಮ್ಮ ಮುಂದಿನ

ಬದಿಗೆ ಬರುವ ಹಾಗೆ ಇಡಬೇಕು ಹಾಗೂ ಭೂಮಿಯ ಮೇಲಿನಿಂದ ನಿಧಾನವಾಗಿ ನಡೆಯುತ್ತಾ ಹೋಗ ಬೇಕು. ಭೂಮಿಯಲ್ಲಿ ಎಲ್ಲಿ ನೀರು ಇರುತ್ತದೆಯೋ, ಅಲ್ಲಿ ಶ್ರೀಫಲದ ಜುಟ್ಟು ತನ್ನಿಂದತಾನೇ ಆಕಾಶದ ಕಡೆಗೆ ತಿರುಗುತ್ತದೆ, ಅಂದರೆ ಶ್ರೀಫಲ ಅಂಗೈಯ ಮೇಲೆ ನೇರವಾಗಿ (ಎದ್ದು) ನಿಲ್ಲುತ್ತದೆ. ಈ ಪ್ರಯೋಗವನ್ನು ವಾರಾಣಸಿ ಆಶ್ರಮದ ಭೂಮಿಯಲ್ಲಿ ಮಾಡಲಾಯಿತು. ಅಲ್ಲಿನ ಭೂಮಿಯಲ್ಲಿ ಯಾವ ಎರಡು ಸ್ಥಳಗಳಲ್ಲಿ ನೀರಿದೆ ಎಂದು ನನಗೆ ಅರಿವಾಗಿತ್ತೋ, ಆ ೨ ಸ್ಥಳಗಳಿಗೆ ಹೋದಾಗ ಶ್ರೀಫಲ ಅಂಗೈಯ ಮೇಲೆ ನೇರವಾಗಿ (ಎದ್ದು) ನಿಂತಿತು. ಇದರಿಂದ ನನ್ನ ಅಂದಾಜು ಸರಿಯಾಗಿದೆ ಎಂದು ಸಾಬೀತಾಯಿತು.

– (ಸದ್ಗುರು) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೮.೫.೨೦೨೩)