SP Chief Akhilesh Yadav Statement : ‘ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕವನ್ನು ಕಾಲಿನ ಹೆಬ್ಬೆರಳಿನಿಂದ ಮಾಡಲಾಗಿತ್ತು!'(ಅಂತೆ)

  • ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ ಯಾದವ್ ಅವರ ಖೇದಕರ ಹೇಳಿಕೆ!

  • ಅಖಿಲೇಶ ಯಾದವ್ ಅವರನ್ನು ಜೈಲಿಗೆ ಹಾಕಿ! – ಜಯಕುಮಾರ್ ರಾವಲ್, ಮಾರುಕಟ್ಟೆ ಸಚಿವ, ಮಹಾರಾಷ್ಟ್ರ

ಮುಂಬಯಿ – ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕವನ್ನು ಕಾಲಿನ ಹೆಬ್ಬೆರಳಿನಿಂದ ಮಾಡಲಾಗಿತ್ತು, ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷರಾದ ಸಂಸದ ಅಖಿಲೇಶ ಯಾದವ್ ಹೇಳಿಕೆ ನೀಡಿದ್ದರು. ಈ ಕುರಿತು ಮಹಾರಾಷ್ಟ್ರದ ಮಾರುಕಟ್ಟೆ ಸಚಿವ ಜಯಕುಮಾರ್ ರಾವಲ್ ಇವರು, ‘ಸಮಾಜವಾದಿ ಪಕ್ಷದ ನಾಯಕ ಅಖಿಲೇಶ ಯಾದವ್ ಕ್ಷಮೆ ಯಾಚಿಸಬೇಕು. ತಪ್ಪು ಮಾಹಿತಿ ನೀಡಿದ ಪ್ರಕರಣದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕು’ ಎಂದು ಒತ್ತಾಯಿಸಿದ್ದಾರೆ. ಸಮಾರಂಭವೊಂದರಲ್ಲಿ ಅವರು ಮಾತನಾಡುತ್ತಿದ್ದರು.

ರಾವಲ್ ಅವರು, “ಸಮಾಜವಾದಿ ಪಕ್ಷದ ನಾಯಕರು ಇತಿಹಾಸವನ್ನು ತಿರುಚುತ್ತಿದ್ದಾರೆ. ರಾಜಕೀಯದಲ್ಲಿ ಸೋಲು ಗೆಲುವುಗಳು ಸಹಜ. ಆದರೆ, ಇದರರ್ಥ ನಮ್ಮ ಮಹಾಪುರುಷರ ಬಗ್ಗೆ ತಪ್ಪು ಹೇಳಿಕೆಗಳನ್ನು ನೀಡುತ್ತೇವೆ ಎಂದಲ್ಲ. ದೇಶದ ಕೋಟಿಗಟ್ಟಲೆ ಜನರ ಭಾವನೆಗಳಿಗೆ ಧಕ್ಕೆ ತರುವಂತಹ ರಾಜಕೀಯ ಲಾಭಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ದುಃಖಕರ. ಇತಿಹಾಸವನ್ನು ತಿರುಚುವುದನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಭಾಜಪ ಛತ್ರಪತಿ ಶಿವಾಜಿ ಮಹಾರಾಜರನ್ನು ನಂಬುತ್ತದೆ ಮತ್ತು ಗೌರವಿಸುತ್ತದೆ” ಎಂದು ತಿಳಿಸಿದರು.

ಸಂಪಾದಕೀಯ ನಿಲುವು

  • ಕರಸೇವಕರ ಮೇಲೆ ಗುಂಡು ಹಾರಿಸಿ ಅವರನ್ನು ಕೊಂದ ಮುಲಾಯಂ ಸಿಂಗ್ ಯಾದವ್ ಅವರ ಪುತ್ರರಿಂದ ಇದಕ್ಕಿಂತ ಭಿನ್ನವಾದದ್ದನ್ನು ಏನು ನಿರೀಕ್ಷಿಸಲು ಸಾಧ್ಯ?
  • ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ಸಮಾರಂಭವು ಅದ್ವಿತೀಯ ಮತ್ತು ‘ನ ಭೂತೋ ನ ಭವಿಷ್ಯತಿ’ ರೀತಿಯಲ್ಲಿ ನಡೆದಿತ್ತು. ಹೀಗಿರುವಾಗ, ಇತಿಹಾಸವನ್ನು ತಿರುಚುವ ಮತ್ತು ಪಟ್ಟಾಭಿಷೇಕದ ಬಗ್ಗೆ ಆಧಾರರಹಿತ ಹೇಳಿಕೆಗಳನ್ನು ನೀಡುವ ಮೂಲಕ ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸಕ್ಕೆ ಕಪ್ಪು ಮಸಿ ಬಳಿಯಲು ಪ್ರಯತ್ನಿಸುವವರ ವಿರುದ್ಧ ಶಿವಾಜಿ ಪ್ರೇಮಿಗಳು ಪೊಲೀಸರಿಗೆ ದೂರು ನೀಡಬೇಕು! ಹೀಗೆ ಮಾಡಿದರೆ, ಇಂತಹ ಹೇಳಿಕೆಗಳನ್ನು ನೀಡುವ ಧೈರ್ಯ ಅವರಿಗೆ ಮತ್ತೆ ಬರುವುದಿಲ್ಲ!