ಫಲಕ ಪ್ರಸಿದ್ಧಿಗಾಗಿ
೧. ಕರ್ನಾಟಕದ ಹಿಂದೂಗಳ ಸ್ಥಿತಿಯನ್ನು ತಿಳಿಯಿರಿ !
ಮಂಗಳೂರಿನಲ್ಲಿ ಜುಲೈ ೮ ರಂದು ಅಂಗಡಿಯವನಾದ ತೌಸಿಫ ಹುಸೇನ ಎಂಬಾತನು ಕ್ಷುಲ್ಲಕ ಕಾರಣದಿಂದ ಅವನಲ್ಲಿ ಕೆಲಸಕ್ಕಿದ್ದ ಗಜಯಾನ ಅಲಿಯಾಸ್ ಜಗ್ಗು ಇವನ ಮೇಲೆ ಪೆಟ್ರೋಲ್ ಸುರಿದು ಜೀವಂತ ಸುಟ್ಟಿರುವ ಘಟನೆ ನಡೆದಿದೆ.
೨. ಭ್ರಷ್ಟಾಚಾರವನ್ನು ನಾಶ ಮಾಡಲು ಹಿಂದೂ ರಾಷ್ಟ್ರವೇ ಬೇಕು !
ಭ್ರಷ್ಟಾಚಾರ ನಿಗ್ರಹ ಇಲಾಖೆಯು ಮಹಾರಾಷ್ಟ್ರದಲ್ಲಿ ಕಳೆದ ೯ ವರ್ಷಗಳಲ್ಲಿ ಕೈಗೊಂಡ ಕಾರ್ಯಾಚರಣೆಗಳಿಂದಾಗಿ ಶೇ. ೯೪.೧೧ ಪ್ರಕರಣಗಳಲ್ಲಿನ ಅಪರಾಧಿಗಳು ಬಿಡುಗಡೆ ಯಾಗಿದ್ದಾರೆ. ಇದರಲ್ಲಿ ದೋಷ ಸಾಬೀತಾಗುವ ಪ್ರಮಾಣ ಕೇವಲ ಶೇ. ೫.೮೯ ರಷ್ಟು ಮಾತ್ರ ಇದೆ.
೩. ಹಿಂದೂದ್ವೇಷಿ ಕಾನ್ವೆಂಟ್ ಶಾಲೆಗಳನ್ನು ಯಾವಾಗ ನಿಯಂತ್ರಿಸುವಿರಿ ?
ಧನಬಾದ (ಝಾರಖಂಡ) ಇಲ್ಲಿನ ಸೇಂಟ್ ಝೇವಿಯರ್ಸ ಶಾಲೆಯಲ್ಲಿ ಟಿಕಲಿ ಹಚ್ಚಿಕೊಂಡು ಬರುವ ಹಿಂದೂ ವಿದ್ಯಾರ್ಥಿನಿಗೆ ಶಿಕ್ಷಕಿಯು ತರಗತಿಯಲ್ಲಿ ಥಳಿಸಿದ್ದಾರೆ. ಇದರಿಂದ ಅವಮಾನಿತಗೊಂಡಿದ್ದ ವಿದ್ಯಾರ್ಥಿನಿಯು ಮನೆಗೆ ಹೋಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
೪. ಧರ್ಮಶಿಕ್ಷಣದ ಅಭಾವದ ದುಷ್ಪರಿಣಾಮವನ್ನು ತಿಳಿಯಿರಿ !
ರಾಜಸ್ಥಾನದಲ್ಲಿ ಹುಡುಗನೊಬ್ಬ ‘ಫ್ರೀ ಫಾಯರ ನಂತಹ ಆನಲೈನ್ ಆಟಕ್ಕೆ ತುತ್ತಾಗಿದ್ದರಿಂದ ಅವನ ಮಾನಸಿಕ ಸಮತೋಲನ ಹದಗೆಟ್ಟ ಘಟನೆ ಬೆಳಕಿಗೆ ಬಂದಿದೆ. ಅವನು ಥರ ಥರ ನಡುಗುತ್ತಿರುವ ವಿಡಿಯೋವೊಂದು ಹರಿದಾಡುತ್ತಿದೆ.
೫. ವಿದೇಶಿ ಖಲಿಸ್ತಾನಿಗಳಿಗೆ ಭಾರತವು ಯಾವಾಗ ಪಾಠ ಕಲಿಸುವುದು ?
ಸಿಡ್ನಿ (ಆಸ್ಟ್ರೇಲಿಯಾ) ಇಲ್ಲಿಯ ಮೇರಿಲ್ಯಾಂಡ್ಸ್ ಈ ಉಪನಗರದಲ್ಲಿ ಖಲಿಸ್ತಾನ ಬೆಂಬಲಿಗರು ಓರ್ವ ಭಾರತೀಯ ವಿದ್ಯಾರ್ಥಿಯನ್ನು ಕಬ್ಬಿಣದ ಸರಳಿನಿಂದ ಅಮಾನವೀಯ ವಾಗಿ ಥಳಿಸಿದ್ದಾರೆ. ಇದರಲ್ಲಿ ಗಂಭೀರವಾಗಿ ಗಾಯಗೊಂಡಿ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
೬. ಹಿಂದೂಗಳು ಸಮಾನ ನಾಗರಿಕ ಕಾನೂನನ್ನು ಬೆಂಬಲಿಸಲು ಏನು ಮಾಡುತ್ತಿದ್ದಾರೆ ?
ಮುಸಲ್ಮಾನರು ಸಮಾನ ನಾಗರಿಕ ಕಾನೂನನ್ನು ವಿರೋಧಿಸಲು ಕೆಲವಡೆ ಮಸೀದಿಯ ಹೊರಗೆ ಫಲಕದಲ್ಲಿ ವಿಶೇಷ ‘ಬಾರ್ ಕೋಡ್ನ್ನು ಹಾಕಿದ್ದಾರೆ. ಸಂಚಾರಿವಾಣಿಯ ಮೂಲಕ ಅದನ್ನು ಸ್ಕ್ಯಾನ್ ಮಾಡಿ ಆ ಮೂಲಕ ವಿಧಿ ಆಯೋಗಕ್ಕೆ ಸಂದೇಶವನ್ನು ಕಳುಹಿಸಲು ಕರೆ ನೀಡುತ್ತಿದ್ದಾರೆ.
೭. ಸಮಾನ ನಾಗರಿಕ ಕಾನೂನನ್ನು ವಿರೋಧಿಸುವ ಕ್ರೈಸ್ತರನ್ನು ಅರಿತುಕೊಳ್ಳಿ !
‘ಸಮಾನ ನಾಗರಿಕ ಸಂಹಿತೆಯನ್ನು ಮುಸಲ್ಮಾನರ ನಂತರ ಈಗ ಕ್ರೈಸ್ತರೂ ವಿರೋಧಿಸುತ್ತಿದ್ದಾರೆ. ಈಶಾನ್ಯ ಭಾರತದ ಒಂದು ಮುಖ್ಯ ಕ್ಯಾಥೊಲಿಕ್ ಚರ್ಚ ಸಮಾನ ನಾಗರಿಕ ಕಾನೂನನ್ನು ವಿರೋಧಿಸಿ ವಿಧಿ ಆಯೋಗಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.