ಸಾಧಕರಿಗೆ ಸೂಚನೆ !
ಪ್ರಸಾರದ ಸಾಧಕರು ‘ಸನಾತನ ಪ್ರಭಾತದ ವಾಚಕರ ಸಂಖ್ಯೆಯನ್ನು ಹೆಚ್ಚಿಸಲು ಸಮಾಜದ ವ್ಯಕ್ತಿಗಳ ಮನೆಮನೆಗಳಿಗೆ ತೆರಳಿ ನಿಯತಕಾಲಿಕೆಗಳ ಮಹತ್ವವನ್ನು ಹೇಳುತ್ತಾರೆ ಮತ್ತು ವಾಚಕರನ್ನಾಗಿಸಲು ಪ್ರಯತ್ನಿಸುತ್ತಾರೆ. ‘ಗ್ರಂಥಪ್ರದರ್ಶನಗಳು, ಹಿಂದೂ ರಾಷ್ಟ್ರ-ಜಾಗೃತಿ ಸಭೆ ಇತ್ಯಾದಿಗಳ ಮಾಧ್ಯಮದಿಂದ ಸಂಪರ್ಕಕ್ಕೆ ಬರುವ ಜಿಜ್ಞಾಸುಗಳನ್ನು ಭೇಟಿಯಾಗುವುದು, ವಾಚಕರಿಂದ ಅವರ ಪರಿಚಿತ ಮತ್ತು ಸಂಬಂಧಿಕರ ಹೆಸರುಗಳ ಪಟ್ಟಿಯನ್ನು ತೆಗೆದುಕೊಂಡು ಅವರನ್ನು ಸಂಪರ್ಕಿಸುವುದು, ವಾಚಕರನ್ನು ಭೇಟಿಯಾಗಿ ಅವರ ಸಂಚಿಕೆಯ ನವೀಕರಣ ಮಾಡುವುದು ಇತ್ಯಾದಿ ಪ್ರಯತ್ನಗಳನ್ನು ಸಾಧಕರು ಮಾಡುತ್ತಿದ್ದಾರೆ. ಕೆಲವು ಜಿಲ್ಲೆಗಳಲ್ಲಿನ ಸಾಧಕರು ‘ಮೊದಲಿನಿಂದಲೂ ಚಂದಾದಾರರಿರುವ ಈ ವಾಚಕರನ್ನು ನವೀಕರಿಸುವ ಬದಲು ಹೊಸ ವಾಚಕರನ್ನಾಗಿಸಲು ಒತ್ತು ನೀಡುತ್ತಿದ್ದಾರೆ, ಎಂದು ಗಮನಕ್ಕೆ ಬಂದಿದೆ. ‘ಹೆಚ್ಚೆಚ್ಚು ಜಿಜ್ಞಾಸುಗಳನ್ನು ವಾಚಕ ರನ್ನಾಗಿ ಮಾಡುವುದು, ಇದು ನಮ್ಮ ಧ್ಯೇಯವೇ ಆಗಿದೆ; ಆದರೆ ‘ನವೀಕರಿಸದ ವಾಚಕರ ಸಂಚಿಕೆಯ ನವೀಕರಣ ಮಾಡುವುದು, ಇದು ಸಹ ಮಹತ್ವದ್ದಾಗಿದೆ. ಆದುದರಿಂದ ಸಾಧಕರು ನವೀಕರಣದ ಸೇವೆಗೆ ಆದ್ಯತೆ ನೀಡಬೇಕು ಮತ್ತು ಅನಂತರ ವಾಚಕರ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸಬೇಕು. (೪.೭.೨೦೨೩)