Dattatreya Hosabale Aurangzeb Tomb: ‘ಗಂಗಾ-ಜಮುನಿ ತಹಜೀಬ್’ ಬಗ್ಗೆ ಮಾತನಾಡುವವರು ಔರಂಗಜೇಬನನ್ನು ನಾಯಕನನ್ನಾಗಿ ಮಾಡಿದ್ದಾರೆ ! – ದತ್ತಾತ್ರೇಯ ಹೊಸಬಾಳೆ

ಆರ್‌ಎಸ್‌ಎಸ್‌ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ಸ್ಪಷ್ಟೋಕ್ತಿ!

(ಗಂಗಾ-ಜಮುನಿ ತಹಜೀಬ್ ಎಂದರೆ ಗಂಗಾ ಮತ್ತು ಯಮುನಾ ನದಿಗಳ ದಡದಲ್ಲಿ ವಾಸಿಸುವ ಹಿಂದೂ ಮತ್ತು ಮುಸ್ಲಿಮರ ನಡುವಿನ ಕಲ್ಪಿತ ಏಕತೆಯನ್ನು ತೋರಿಸುವ ಸಂಸ್ಕೃತಿ. ಅದನ್ನು ಅನುಸರಿಸಲು ಹಿಂದೂಗಳ ಮೇಲೆ ಮಾತ್ರ ಒತ್ತಡ ಹೇರಲಾಗುತ್ತದೆ.)

ಬೆಂಗಳೂರು – ‘ಗಂಗಾ-ಜಮುನಿ ತಹಜೀಬ್’ ಬಗ್ಗೆ ಮಾತನಾಡುವವರು ಔರಂಗಜೇಬನನ್ನು ನಾಯಕನನ್ನಾಗಿ ಮಾಡಿದ್ದಾರೆ ಮತ್ತು ಅವನ ಸಹೋದರ ದಾರಾ ಶಿಕೋಹ್ ಬಗ್ಗೆ ಏನನ್ನೂ ಮಾತನಾಡುವುದಿಲ್ಲ. ದೆಹಲಿಯ ‘ಔರಂಗಜೇಬ್ ಮಾರ್ಗ’ದ ಹೆಸರನ್ನು ಎ.ಪಿ.ಜೆ. ಅಬ್ದುಲ್ ಕಲಾಂ ಮಾರ್ಗ ಎಂದು ಬದಲಾಯಿಸಲಾಗಿದೆ. ಹೊರಗಿನಿಂದ ಬರುವ ಯಾರನ್ನಾದರೂ ನಾವು ಆದರ್ಶಪ್ರಾಯರನ್ನಾಗಿ ಮಾಡಬೇಕೇ ಅಥವಾ ಇಲ್ಲಿನ ಜನರನ್ನು ಗೌರವಿಸಬೇಕೇ? ಇದು ಸೂತ್ರವಾಗಿದೆ. ಸ್ಥಳೀಯ ಆಕ್ರಮಣಕಾರರೊಂದಿಗೆ ಬದುಕುವ ಮನಸ್ಥಿತಿಯ ಬಗ್ಗೆ ನಾವು ಯೋಚಿಸಬೇಕಾಗಿದೆ ಎಂದು ಆರ್‌ಎಸ್‌ಎಸ್‌ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸ್ಪಷ್ಟಪಡಿಸಿದರು. ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.

ಹೊಸಬಾಳೆ ಅವರು ಮಾತು ಮುಂದುವರೆಸಿ, ಜಾತ್ಯತೀತತೆಯ ಹೆಸರಿನಲ್ಲಿ ಹಿಂದೆ ಇತಿಹಾಸವನ್ನು ತಿರುಚಲಾಗಿದೆ. ಈಗ ಹಿಂದೂ ಸಮಾಜವು ಆತ್ಮವಿಶ್ವಾಸದಿಂದ ಹೊರಹೊಮ್ಮುತ್ತಿದೆ.

ಮೀಸಲಾತಿಯ ಬಗ್ಗೆ ಹೊಸಬಾಳೆ ಅವರು ಮಾತನಾಡಿ, ಎಲ್ಲಾ ರಾಜ್ಯ ಸರಕಾರಗಳು ಜಾತಿ ಆಧಾರಿತ ಮೀಸಲಾತಿ ನೀಡುತ್ತವೆ; ಆದರೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಧರ್ಮ ಆಧಾರಿತ ಮೀಸಲಾತಿಯ ಪರವಾಗಿರಲಿಲ್ಲ, ಎಂದು ಹೇಳಿದರು.