ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಿ ಗುರು-ಶಿಷ್ಯ ಪರಂಪರೆಯ ಕರ್ತವ್ಯವನ್ನು ನಿರ್ವಹಿಸೋಣ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ದಾವಣಗೆರೆಯ ಹಿಂದೂ ರಾಷ್ಟ್ರ ಸೇನೆಯ ರಾಜ್ಯ ವಕ್ತಾರ ಶ್ರೀ. ಸಂದೀಪ ಕೆ.ಎನ್. ಇವರಿಗೆ ಬಂದ ಅನುಭವ

ಫೋಂಡಾದ ರಾಮನಾಥಿಯ ಶ್ರೀ ರಾಮನಾಥ ದೇವಸ್ಥಾನದಲ್ಲಿ ಜೂನ್ ೧೬ ರಿಂದ ೨೨ ರವರೆಗೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ಅಂದರೆ ಹನ್ನೊಂದನೇಯ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ನೆರವೇರಿತು. ಈ ಉತ್ಸವದಲ್ಲಿ ದೇಶ-ವಿದೇಶಗಳಿಂದ ನೂರಾರು ಹಿಂದುತ್ವನಿಷ್ಠರು ಪಾಲ್ಗೊಂಡಿದ್ದರು. ಈ ವೇಳೆ ದಾವಣಗೆರೆಯ ಹಿಂದೂ ರಾಷ್ಟ್ರ ಸೇನೆಯ ಕರ್ನಾಟಕ ರಾಜ್ಯ ವಕ್ತಾರ ಶ್ರೀ. ಸಂದೀಪ ಕೆ.ಎನ್. (ಗುರೂಜಿ) ಇವರೂ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಅವರಿಗೆ ಬಂದ ಅನುಭವ ಅನುಭೂತಿಯನ್ನು ನೋಡೋಣ.

ಶ್ರೀ. ಸಂದೀಪ ಕೆ.ಎನ್

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಅನುಭವ ಅದ್ಭುತ ಹಾಗೂ ಅವಿಸ್ಮರಣೀಯವಾಗಿತ್ತು. ಈ ಕಾರ್ಯಕ್ರಮದಲ್ಲಿ ದೇಶ-ವಿದೇಶಗಳಿಂದ ಹಿಂದೂ ಹೋರಾಟಗಾರರು ಹಾಗೂ ವಿವಿಧ ರಾಜ್ಯಗಳ ಉಚ್ಚ ನ್ಯಾಯಾಲಯದ ವಕೀಲರು, ಸಾಧು-ಸಂತರು ಪಾಲ್ಗೊಂಡಿದ್ದರು. ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ‘ಕಾನೂನು ಹಾಗೂ ಸಂವಿಧಾನಾತ್ಮಕವಾಗಿ ರಾಷ್ಟ್ರ ಸಂಕಲ್ಪನೆಯ ಹೋರಾಟ ಮಾಡೋದು ಹೇಗೆ ? ಎಂಬುದು ಈ ಮಹೋತ್ಸವದಿಂದ ಅರ್ಥವಾಯಿತು. ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ನನ್ನ ಅನುಭವವೆಂದರೆ ‘ಮಾ ಭಾರತಿ (ಭಾರತಮಾತೆ) ನಮ್ಮ ತಾಯಿಯಾಗಿದ್ದು ನಾವೆಲ್ಲಾ ರಾಜ್ಯದವರು ಮಾ ಭಾರತೀಯ ಮಕ್ಕಳು. ನಾವೆಲ್ಲಾ ಹಿಂದೂಗಳು ದೀಪಾವಳಿ, ಗಣಪತಿ, ದಸರಾ ಹಬ್ಬಗಳನ್ನು ಆಚರಿಸುತ್ತೇವೆ. ಅದೇ ರೀತಿಯ ಅನುಭವ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಆಯಿತು

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವಕ್ಕೆ ಬಂದಾಗ ನನ್ನ ಮನಸ್ಸಿನಲ್ಲಿ ಮುಂದಿನ ಸಂದೇಹಗಳಿದ್ದವು –

ಅ. ಹಿಂದೂ ರಾಷ್ಟ್ರ ಸಂಕಲ್ಪ ಹೇಗೆ ಮಾಡುವುದು ?

ಆ., ಗೋಹತ್ಯೆ ಸಂಪೂರ್ಣವಾಗಿ ನಿಷೇಧ ಹೇಗೆ ?

ಇ. ಲವ್ ಜಿಹಾದ್, ಭೂಮಿ (ಲ್ಯಾಂಡ) ಜಿಹಾದ್, ಹಲಾಲ್ ಜಿಜಾದ್ ಇವುಗಳ ವಿರುದ್ಧ ಕಾನೂನುಮಾರ್ಗದಿಂದ ಹೇಗೆ ಹೋರಾಡುವುದು ?

ಈ. ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾನೂನಿಗೆ ಶೇ. ೧೦೦ ರಷ್ಟು ಯಶಸ್ಸು ಏಕೆ ಸಿಗಲಿಲ್ಲ ?

ಇದರ ಬಗ್ಗೆ ಸಂತರು ಮಾಡಿದ ಮಾರ್ಗದರ್ಶನದಿಂದ ನನ್ನ ಸಂದೇಹ ನಿವಾರಣೆಯಾಯಿತು. ಇದರಿಂದ ನನ್ನ ಗಮನಕ್ಕೆ ಬಂದ ಅಂಶವೆಂದರೆ ‘ಆಧ್ಯಾತ್ಮಿಕ ಸಾಧನೆ ಹಾಗೂ ಧರ್ಮಶಿಕ್ಷಣ ಕೊರತೆಯೇ ಇದಕ್ಕೆಲ್ಲ ಕಾರಣವಾಗಿದೆ. ಪ್ರತಿಯೊಬ್ಬ ಹಿಂದೂವಿನ ಆಧ್ಯಾತ್ಮಿಕ ಶುದ್ಧೀಕರಣವಾಗಬೇಕು. ಅಧ್ಯಾತ್ಮದ ಜ್ಞಾನ ಹಾಗೂ ಧರ್ಮಶಿಕ್ಷಣ ನೀಡಿ ಸಾಧಕರನ್ನಾಗಿ ಮಾಡಿದರೆ ಹಿಂದೂ ರಾಷ್ಟ್ರ ಸಾಕಾರವಾಗಲು ಸಾಧ್ಯವಿದೆ. ಜಾತಿಜಾತಿಗಳ ನಡುವಿನ ವೈಮನಸ್ಸನ್ನು ಮೊದಲು ಬಿಟ್ಟು ಬಿಡಬೇಕು. ಜಾತಿ, ಪ್ರಾಂತ್ಯ ಈ ಭೇದವನ್ನು ನಾಶ ಮಾಡಿ ‘ನಾವೆಲ್ಲ ಒಂದು, ನಾವೆಲ್ಲ ಹಿಂದೂ ಎಂದು ಬಿಂಬಿಸಿ ನಾವು ಸಾಧನೆ ಮಾಡಿ ಸಾಧಕರಾದಾಗ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇದರಿಂದ ಯಾರೂ ನಮ್ಮಲ್ಲಿ ಜಾತಿಯ ವಿಷ ಬೀಜ ಬಿತ್ತಲು ಸಾಧ್ಯವಿಲ್ಲ. ‘ಸಂಘಟನೆ ಈ ವಿಷಯದಲ್ಲಿ ಅನೇಕ ಸಂದೇಹಗಳಿದ್ದವು, ಅವೂ ದೂರವಾದವು.

ನನ್ನ ಪುಣ್ಯವೆಂದರೆ ನನಗೆ ಇಬ್ಬರು ಗುರುಗಳಿದ್ದಾರೆ. ಒಬ್ಬರೆಂದರೆ ಹಿಂದೂ ರಾಷ್ಟ್ರ ಸೇನೆಯ ಅಧ್ಯಕ್ಷ ಶ್ರೀ. ಧನಂಜಯ ಭಾಯಿ ದೇಸಾಯಿ ಹಾಗೂ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ! ಇವರ ಮಾರ್ಗದರ್ಶನದಿಂದ ನಾವೂ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡೋಣ ಮತ್ತು ಗುರು-ಶಿಷ್ಯರ ಪರಂಪರೆಯ ಕರ್ತವ್ಯ ನಿಭಾಯಿಸೋಣ.

– ಶ್ರೀ. ಸಂದೀಪ ಕೆ.ಎನ್. (ಗುರೂಜಿ), ಕರ್ನಾಟಕ ರಾಜ್ಯ ವಕ್ತಾರರು, ಹಿಂದೂ ರಾಷ್ಟ್ರ ಸೇನೆ, ದಾವಣಗೆರೆ (೧೨.೭.೨೦೨೩)