ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ
‘ತುಳಸಿಯು ಧಾರ್ಮಿಕ, ಹಾಗೆಯೇ ಆರೋಗ್ಯದ ದೃಷ್ಟಿಯಲ್ಲಿ ತುಂಬಾ ಮಹತ್ವದ್ದಾಗಿರುವುದರಿಂದ ಪ್ರತಿಯೊಬ್ಬರ ಮನೆಯಲ್ಲಿ ತುಳಸಿಗಿಡ ಇರಲೇ ಬೇಕು. ತುಳಸಿಯ ಹೂವುಗಳಲ್ಲಿ ಬೀಜ ಗಳಿರುತ್ತವೆ. ಹೂವನ್ನು ಕೈಯಲ್ಲಿ ಉಜ್ಜಿದಾಗ ಅದರಿಂದ ಸಾಸಿವೆ ಗಿಂತಲೂ ಚಿಕ್ಕ ಆಕಾರದ ತುಳಸಿಯ ಬೀಜಗಳು ಹೊರಗೆ ಬರುತ್ತವೆ. ಈ ಬೀಜಗಳು ಮಣ್ಣಿನಲ್ಲಿ ಹಾಕುವ ಮೂಲಕ ತುಳಸಿಯ ಸಸಿಗಳನ್ನು ತಯಾರಿಸಬಹುದು. ಮುಂಬರುವ ಮಳೆಗಾಲದಲ್ಲಿ ತುಳಸಿಯ ತೋಟವನ್ನು ಮಾಡಲು ಪ್ರತಿಯೊಬ್ಬರೂ ಸ್ವಲ್ಪಮಟ್ಟಿಗಾದರೂ ತುಳಸಿಯ ಒಣಗಿದ ಹೂವುಗಳನ್ನು ಸಂಗ್ರಹಿಸಿಡಬೇಕು. ತುಳಸಿಯ ತೋಟದ ಬಗೆಗಿನ ಮಾಹಿತಿ ಹಾಗೆಯೇ ಅದರ ಔಷಧ ಗುಣಧರ್ಮವನ್ನು ಸನಾತನದ ಗ್ರಂಥ ‘ಜಾಗದ ಲಭ್ಯತೆಗನುಸಾರ ಔಷಧಿ ಸಸ್ಯಗಳನ್ನು ಬೆಳೆಸಿ, ಇದರಲ್ಲಿ ಕೊಡಲಾಗಿದೆ.
ಜೀರ್ಣವಾಗಲು ಜಡ ಮತ್ತು ಹಗುರ ಪದಾರ್ಥಗಳನ್ನು ಹೇಗೆ ಗುರುತಿಸಬೇಕು ?
‘ಯಾವ ಪದಾರ್ಥಗಳನ್ನು ತಿಂದ ನಂತರ ಸುಸ್ತಾಗುತ್ತದೆ ಅಥವಾ ಶರೀರದಲ್ಲಿ ಜಡತ್ವದ ಅರಿವಾಗುತ್ತದೆಯೋ, ಆ ಪದಾರ್ಥಗಳು ಜೀರ್ಣವಾಗಲು ಜಡವಾಗಿರುತ್ತವೆ. ಎಲ್ಲ ರೀತಿಯ ಪಕ್ವಾನ್ನಗಳು, ಸಿಹಿ ಪದಾರ್ಥಗಳು, ಮೈದಾದ ಪದಾರ್ಥಗಳು, ಹಾಲಿನಿಂದ ತಯಾರಿಸಿದ ಪದಾರ್ಥಗಳು (ತುಪ್ಪ ಮತ್ತು ಮಜ್ಜಿಗೆಗಳನ್ನು ಬಿಟ್ಟು), ಹಸಿ (ಬೇಯಿಸದಿರುವ) ಪದಾರ್ಥಗಳು (ಉದಾ. ಹಸಿ ತರಕಾರಿಗಳು, ನೆನೆಸಿದ ಅಥವಾ ಮೊಳಕೆ ಬಂದಿರುವ ಧಾನ್ಯಗಳು), ಇವು ಜಡ ಪದಾರ್ಥಗಳ ಕೆಲವು ಉದಾಹರಣೆಗಳಾಗಿವೆ. ತದ್ವಿರುದ್ಧ ಜಡತ್ವವನ್ನುಂಟು ಮಾಡದಿರುವ ಪದಾರ್ಥಗಳು ಜೀರ್ಣವಾಗಲು ಹಗುರ ಇರುತ್ತವೆ. ರವೆ ಉಪ್ಪಿಟ್ಟು, ತೊವ್ವೆಅನ್ನ, ಹೆಸರುಬೇಳೆಯ ಸಾರು (ಬೇಳೆಯನ್ನು ಬೇಯಿಸಿ ಅದರಲ್ಲಿ ಉಪ್ಪು ಮತ್ತು ಬೆಲ್ಲವನ್ನು ಹಾಕಿ ತಯಾರಿಸಿದ ಪದಾರ್ಥ), ಭತ್ತದ ಅರಳು, ಹುರಿದ ಅವಲಕ್ಕಿ, ಇವು ಜೀರ್ಣವಾಗಲು ಹಗುರ ಪದಾರ್ಥಗಳ ಕೆಲವು ಉದಾಹರಣೆಗಳಾಗಿವೆ.
ಮಳೆಗಾಲದಲ್ಲಿ ಮಾವಿನಹಣ್ಣು ಮತ್ತು ಹಲಸಿನಹಣ್ಣುಗಳನ್ನು ತಿನ್ನಬಾರದು !
ಮಾವಿನಹಣ್ಣು ಮತ್ತು ಹಲಸಿನಹಣ್ಣು ಇವುಗಳು ಜೀರ್ಣ ವಾಗಲು ಜಡವಾಗಿರುತ್ತವೆ. ಮಳೆಗಾಲದಲ್ಲಿ ಶಾರೀರಿಕ ಶ್ರಮ ಮಾಡದೇ ಕೇವಲ ಕುಳಿತಲ್ಲಿ ಕೆಲಸ ಮಾಡುವವರು ಈ ಹಣ್ಣುಗಳನ್ನು ತಿಂದರೆ ಹಸಿವು ಮಂದವಾಗುವುದು, ಅಜೀರ್ಣ ವಾಗುವುದು, ಮೈ ಜಡವಾಗುವುದು, ಜ್ವರ ಬರುವುದು, ಭೇದಿ ಯಾಗುವುದು ಇಂತಹ ತೊಂದರೆಗಳಾಗುವವು. ಆದ್ದರಿಂದ ಮಳೆಗಾಲದಲ್ಲಿ ಈ ಹಣ್ಣುಗಳನ್ನು ತಿನ್ನಬಾರದು. ತಿನ್ನಲಿಕ್ಕಿದ್ದರೆ ಸ್ವಲ್ಪ ಪ್ರಮಾಣದಲ್ಲಿ ತಿನ್ನಬೇಕು ಮತ್ತು ಈ ಹಣ್ಣುಗಳನ್ನು ತಿಂದ ನಂತರ ಚೆನ್ನಾಗಿ ಹಸಿವಾಗುವವರೆಗೂ ಮುಂದಿನ ಆಹಾರವನ್ನು ಸೇವಿಸಬಾರದು.
ಮಳೆಗಾಲದಲ್ಲಿ ಜೀರ್ಣವಾಗಲು ಜಡವಾದ ಪದಾರ್ಥಗಳನ್ನು ತಿನ್ನಬೇಡಿರಿ !
ಒಲೆಯಲ್ಲಿ ಕೇವಲ ಕೆಂಡ ಇದೆ ಮತ್ತು ನಮಗೆ ಬೆಂಕಿ ಹೊತ್ತಿಸಬೇಕಾಗಿದೆ, ಆಗ ನಾವು ಒಲೆಯಲ್ಲಿ ನೇರವಾಗಿ ದೊಡ್ಡ ಕಟ್ಟಿಗೆಗಳನ್ನು ಹಾಕುವುದಿಲ್ಲ. ಹಾಗೆ ಮಾಡಿದರೆ ಬೆಂಕಿ ಹತ್ತದೆ, ಕೇವಲ ಹೊಗೆ ತುಂಬುತ್ತದೆ ಮತ್ತು ಕೆಂಡವೆಲ್ಲ ಆರಿಹೋಗುತ್ತದೆ. ಅಗ್ನಿ ಚೆನ್ನಾಗಿ ಪ್ರಜ್ವಲಿತವಾಗಲು ಮೊದಲು ಕೆಂಡದ ಮೇಲೆ ತಕ್ಷಣ ಉರಿಯುವ ತೆಂಗಿನಹುರಿಯಂತಹ ಇಂಧನ ಹಾಕಿದ ನಂತರ ಸಣ್ಣಪುಟ್ಟ ಕಡ್ಡಿಗಳನ್ನು ಹಾಕಿ ಅಗ್ನಿಯನ್ನು ಸ್ಥಿರ ಮಾಡಬೇಕು.
ಮಳೆಗಾಲದಲ್ಲಿ ಶರೀರದ ಅಗ್ನಿಯೂ (ಜೀರ್ಣಶಕ್ತಿ) ಮೇಲಿನ ಉದಾಹರಣೆಯಲ್ಲಿ ಹೇಳಿದ ಕೆಂಡದಂತೆ ಮಂದವಾಗಿ ರುತ್ತದೆ. ಇಂತಹ ಹೊತ್ತಿನಲ್ಲಿ ಇಡ್ಲಿ, ಪಾವಭಾಜಿ, ವಡಾಪಾವ, ಸಬ್ಬಕ್ಕಿಯ ಖಿಚಡಿ, ಶ್ರೀಖಂಡ, ಹೂರಣದ ಹೋಳಿಗೆ, ಇನ್ನಿತರ ಸಿಹಿ ಪದಾರ್ಥಗಳು ಮುಂತಾದ ಅರಗಲು ಜಡ ಪದಾರ್ಥಗಳನ್ನು ತಿನ್ನುವುದೆಂದರೆ ಅಗ್ನಿಯ ಮೇಲೆ ಅತ್ಯಾಚಾರ ಮಾಡಿದಂತಾಗುತ್ತದೆ. ಅಗ್ನಿ ಮಂದವಾದರೆ, ಶರೀರದ ವಾತ, ಪಿತ್ತ, ಮತ್ತು ಕಫ ಇವುಗಳ ಸಮತೋಲನವು ನಾಶವಾಗಿ ಅನಾರೋಗ್ಯವಾಗುತ್ತದೆ. ಆದುದರಿಂದ ಮಳೆಗಾಲದಲ್ಲಿ ಜೀರ್ಣವಾಗಲು ಜಡವಾದ ಪದಾರ್ಥಗಳನ್ನು ತಿನ್ನಬಾರದು. ತಿನ್ನುವುದೇ ಆದರೆ ಅತ್ಯಂತ ಅಲ್ಪ ಪ್ರಮಾಣದಲ್ಲಿ ತಿನ್ನಬೇಕು. ಊಟದಲ್ಲಿ ಜಡ ಪದಾರ್ಥಗಳಿದ್ದರೆ ನಿತ್ಯದ ಆಹಾರ ಕಡಿಮೆ ತೆಗೆದುಕೊಳ್ಳಬೇಕು.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೩.೬.೨೦೨೩) ಲೇಖನಮಾಲೆಯ ಎಲ್ಲ ಲೇಖನಗಳನ್ನು ಒಟ್ಟಿಗೆ ಓದುವುದಕ್ಕಾಗಿ ಲಿಂಕ್ :