ತಮ್ಮ ೮೦ ನೇ ವರ್ಷದಲ್ಲಿ ‘ಭಕ್ತಿಯೋಗದ ಸಾಧನೆ ಪ್ರಾರಂಭವಾಯಿತು, ಎಂಬ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಉದ್ಗಾರ ಮತ್ತು ಅದರ ಬಗ್ಗೆ ಪೂ. ಸಂದೀಪ ಆಳಶಿಯವರು ಹೇಳಿದ ಗೂಢಾರ್ಥ (ಸೂಕ್ಷ್ಮ ಅರ್ಥ) !

ನನ್ನ ಭಕ್ತಿಯೋಗದ ಸಾಧನೆಯು ನಿಜವಾದ ಅರ್ಥದಲ್ಲಿ ೧೩.೪.೨೦೨೩ ರಂದು ಆರಂಭವಾಯಿತು ! – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

೧. ಸಾಧನೆಯ ಆರಂಭದಿಂದಲೇ ಡಾಕ್ಟರರ ಸಾಧನೆ ಜ್ಞಾನಯೋಗ ಮತ್ತು ಕರ್ಮಯೋಗ ಪ್ರಧಾನ ಇರುವುದು

‘ಡಾಕ್ಟರನಾದ ನಂತರ ನಾನು ನನ್ನ ೩೦ ರಿಂದ ೪೦ ನೇ ವಯಸ್ಸಿನವರೆಗೆ ‘ಸಮ್ಮೋಹನ ಉಪಚಾರ ತಜ್ಞನೆಂದು ವ್ಯವಸಾಯ ಮಾಡಿದೆ. ನಂತರ ನನಗೆ ಜಿಜ್ಞಾಸೆಯಿಂದ ಬರುವ ಅನೇಕ ಪ್ರಶ್ನೆಗಳಿಗೆ ಸಮ್ಮೋಹನಶಾಸ್ತ್ರದ ಮಾಧ್ಯಮ ದಿಂದ ಉತ್ತರಗಳು ಸಿಗದ ಕಾರಣ ನಾನು ಆಧ್ಯಾತ್ಮಿಕ ಗ್ರಂಥಗಳನ್ನು ಸ್ವಲ್ಪ ಪ್ರಮಾಣದಲ್ಲಿ ಓದಲು ಆರಂಭಿಸಿದೆನು. ನಂತರ ‘ಅಧ್ಯಾತ್ಮದ ಮೂಲಕ ಉತ್ತರಗಳನ್ನು ಪಡೆಯಲು ಸಾಧನೆಯನ್ನು ಮಾಡುವುದು ಆವಶ್ಯಕವಾಗಿದೆ, ಎಂಬುದು ಗಮನಕ್ಕೆ ಬಂದುದರಿಂದ ನಾನು ಅಲ್ಪಸ್ವಲ್ಪ ಸಾಧನೆಯನ್ನು ಮಾಡತೊಡಗಿದೆ. ಆಗ ನನಗೆ ಅನೇಕ ಸಣ್ಣ ಪ್ರಶ್ನೆಗಳಿಗೆ ಉತ್ತರಗಳು ಸಿಗತೊಡಗಿದವು; ಆದುದರಿಂದ ನಾನು ಸಾಧಕರಿಗೆ ‘ಸಾಧನೆಯನ್ನು ಮಾಡಿ, ಎಂದು ಹೇಳತೊಡಗಿದೆ. ‘ಯಾವ ಯೋಗಮಾರ್ಗದಿಂದ ಸಾಧನೆಯನ್ನು ಮಾಡಿದರೆ ನನಗೆ ಪ್ರಶ್ನೆಗಳಿಗೆ ಉತ್ತರಗಳು ಸಿಗಬಹುದು ?, ಇದರ ವಿಚಾರವನ್ನು ನಾನು ಮಾಡುತ್ತಿದ್ದೆ. ಜ್ಞಾನಯೋಗ ಮತ್ತು ಕರ್ಮಯೋಗ ಇವುಗಳಲ್ಲಿ ನನಗೆ ವಿವಿಧ ಪ್ರಶ್ನೆಗಳಿಗೆ ಬುದ್ಧಿಯ ಸ್ತರದ ಉತ್ತರಗಳು ಸಿಗತೊಡಗಿದಾಗ ನಾನು ಅವುಗಳ ಅಧ್ಯಯನವನ್ನು ಮಾಡತೊಡಗಿದೆ. ನನ್ನ ಭಕ್ತಿಯೋಗಕ್ಕನುಸಾರ ಸಾಧನೆ ಎಂದರೆ ನಾನು ನನ್ನ ಬಳಿ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ದೇವರ ನಾಮಜಪವನ್ನು ಮಾಡಲು ಹೇಳುವುದು ಇಷ್ಟೆ ಆಗಿತ್ತು; ಆದರೆ ಆವಾಗಿನಿಂದ ನನಗೂ ‘ಹೆಚ್ಚೆಚ್ಚು ಸಮಯ ಸಾಧನೆಯನ್ನು ಮಾಡಬೇಕು, ಎಂದು ಅನಿಸತೊಡಗಿತು. ಭಕ್ತಿಯೋಗದಲ್ಲಿ ಬೌದ್ಧಿಕ (ಬುದ್ಧಿಯ ಸ್ತರದಲ್ಲಿನ) ಉತ್ತರಗಳು ಹೆಚ್ಚುಕಡಿಮೆ ಇಲ್ಲದಿರುವುದರಿಂದ ನಾನು ಜೀವನದ ೫೦ ರಿಂದ ೮೦ ನೇ ವರ್ಷದ ವರೆಗಿನ ೩೦ ವರ್ಷಗಳ ಕಾಲ ಜ್ಞಾನಯೋಗ ಮತ್ತು ಕರ್ಮಯೋಗ ಇವುಗಳ ಅಧ್ಯಯನ ಮಾಡಲಿಕ್ಕಾಗಿಯೇ ಉಪಯೋಗಿಸಿದೆ.

೨. ಭಕ್ತಿಯೋಗದ ಕುರಿತಾಗಿ ನನಗಾದ ಸಾಧಾರಣ ಪರಿಚಯ

೨೦೦೩ ರಲ್ಲಿ ಸನಾತನದ ಸಾಧಕರ ಮೇಲೆ ಕೆಟ್ಟ ಶಕ್ತಿಗಳ ಆಕ್ರಮಣಗಳು ಆಗತೊಡಗಿದವು. ಸಾಧಕರನ್ನು ಕೆಟ್ಟ ಶಕ್ತಿಗಳಿಂದ ರಕ್ಷಿಸಲು ನಾನು ವಿವಿಧ ಆಧ್ಯಾತ್ಮಿಕ ಸ್ತರದ ಉಪಾಯಗಳನ್ನು ಶೋಧಿಸತೊಡಗಿದೆನು. ಕೆಟ್ಟ ಶಕ್ತಿಗಳೊಂದಿಗೆ ಹೋರಾಡುವಾಗ ‘ಭಾವ ಈ ಘಟಕವು ತುಂಬಾ ಪರಿಣಾಮಕಾರಿಯಾಗಿದೆ ಎಂದು ನನ್ನ ಗಮನಕ್ಕೆ ಬಂದಿತು. ‘ಭಾವವಿದ್ದರೆ, ಕೆಟ್ಟ ಶಕ್ತಿಗಳು ಸಾಧಕರಿಗೆ ತೊಂದರೆಗಳನ್ನು ಕೊಡುವುದಿಲ್ಲ, ಎಂಬುದು ನನ್ನ ಗಮನಕ್ಕೆ ಬಂದನಂತರ ‘ಸಾಧಕರಲ್ಲಿ ಭಾವಜಾಗೃತಿಯಾಗಬೇಕು, ಎಂಬ ಉದ್ದೇಶದಿಂದ ನಾನು ಅದಕ್ಕೆ ಸಂಬಂಧಪಟ್ಟ ಗ್ರಂಥದ ಸಂಕಲನ ಮಾಡಿದೆ. ಮುಂದೆ ಸಮಾಜಕ್ಕೆ ಧರ್ಮಶಾಸ್ತ್ರದ ಮಹತ್ವವನ್ನು ಹೇಳಲು ‘ಧರ್ಮಶಾಸ್ತ್ರ ಹೀಗೆ ಏಕೆ ಹೇಳುತ್ತದೆ ?, ಈ ಗ್ರಂಥಮಾಲಿಕೆಯ ಅಂತರ್ಗತ ‘ದೇವರಪೂಜೆಯನ್ನು ಹೇಗೆ ಮಾಡಬೇಕು ? ಆರತಿಯನ್ನು ಹೇಗೆ ಮಾಡಬೇಕು ? ಮೊದಲಾದ ಗ್ರಂಥಗಳನ್ನೂ ಸಂಕಲನ ಮಾಡಿದೆ.

೩. ಜ್ಞಾನಯೋಗ ಮತ್ತು ಕರ್ಮಯೋಗ ಇವುಗಳಿಗನುಸಾರ ಆಗಿರುವ ಸಾಧನೆಯ ನಂತರವೂ, ಸಾಧನೆಯಲ್ಲಿ ಉಳಿದ ಟೊಳ್ಳು ಭಕ್ತಿಯೋಗದಿಂದ ತುಂಬುವುದು

ಜ್ಞಾನಯೋಗ ಮತ್ತು ಕರ್ಮಯೋಗ ಇವುಗಳಿಂದಲೂ ಎಲ್ಲ ಪ್ರಶ್ನೆಗಳಿಗೆ ಉತ್ತರಗಳು ಸಿಗದಿದ್ದಾಗ ಮುಂದೆ ನಾನು ‘ನನ್ನ ಬಳಿ ಇರುವ ಭಕ್ತಿ ಮಾರ್ಗಕ್ಕೆ ಸಂಬಂಧಿಸಿದ ಪುಸ್ತಕಗಳಲ್ಲಿ ಏನಾದರೂ ಉತ್ತರಗಳು ಸಿಗಬಹುದೇ ?, ಎಂಬುದರ ಅಧ್ಯಯನವನ್ನು ಆರಂಭಿಸಿದೆ. ೧೩.೪.೨೦೨೩ ಈ ದಿನ ನನ್ನ ಗಮನಕ್ಕೆ ಬಂದುದೇನೆಂದರೆ, ನಾನು ಇಲ್ಲಿಯವರೆಗೆ ಜ್ಞಾನಯೋಗ ಮತ್ತು ಕರ್ಮಯೋಗ ಇವುಗಳ ಅಧ್ಯಯನವನ್ನು ಬಹಳ ಮಾಡಿದೆ; ಆದರೆ ನನಗೆ ಭಕ್ತ್ತಿಮಾರ್ಗದ ಬಗ್ಗೆ ಬಹಳ ಕಡಿಮೆ ಮಾಹಿತಿ ಇದೆ; ಆದುದರಿಂದ ನಾನು ‘ಭಕ್ತಿಮಾರ್ಗದಲ್ಲಿ ಏನು ಕಲಿಸುತ್ತಾರೆ ?, ಎಂಬ ಜಿಜ್ಞಾಸೆಯಿಂದ ಅದರ ಅಧ್ಯಯನವನ್ನು ಆರಂಭಿಸಿದೆ. ಆಗ ನನ್ನ ಗಮನಕ್ಕೆ ಬಂದುದೇನೆಂದರೆ, ಭಕ್ತಿಮಾರ್ಗದ ಗ್ರಂಥಗಳನ್ನು ಓದಿ ಜ್ಞಾನಯೋಗದಲ್ಲಿ ಸಿಕ್ಕಂತೆ ಉತ್ತರಗಳು ಸಿಗುವುದಿಲ್ಲ, ಆದರೆ ಮನಸ್ಸಿನ ಸ್ತರದಲ್ಲಿ ಕಲಿಯುವುದಾಗುತ್ತದೆ. ಎಲ್ಲಕ್ಕಿಂತ ಮಹತ್ವದ್ದೆಂದರೆ ಅದರಿಂದ ಭಾವಜಾಗೃತವಾಗಲು ಸಹಾಯವಾಗುತ್ತದೆ. ಸಾಧನೆಯಲ್ಲಿ ಭಾವಜಾಗೃತಿಗೆ ಮಹತ್ವವಿರುವುದಿಂದ ನಾನು ಭಕ್ತಿಮಾರ್ಗದ ಗ್ರಂಥಗಳನ್ನು ಹೆಚ್ಚೆಚ್ಚು ಅಧ್ಯಯನ ಮಾಡಿದಾಗ ನನಗೆ ಕೆಲವು ನಿರುತ್ತರಿತ ಪ್ರಶ್ನೆಗಳಿಗೆ ಉತ್ತರಗಳು ಸಿಗತೊಡಗಿದವು; ಆದರೆ ಜ್ಞಾನದ ಬದಲು ‘ಭಾವಜಾಗೃತವಾಗುವುದು, ಇದನ್ನು ನಾನು ಅನುಭವಿಸತೊಡಗಿದೆ. ನನಗೆ ‘ಭಾವ ಇದ್ದಲ್ಲಿ ದೇವರು ಎಂಬುದು ಗೊತ್ತಿದ್ದುದರಿಂದ ಈಗ ಹೆಚ್ಚೆಚ್ಚು ಭಾವಾವಸ್ಥೆಯಲ್ಲಿರಲು ನಾನು ಜ್ಞಾನಯೋಗ ಮತ್ತು ಕರ್ಮಯೋಗದ ವಿಷಯಗಳ ಗ್ರಂಥಗಳನ್ನು ಹೆಚ್ಚು ಓದದೇ ಕೇವಲ ಭಕ್ತಿಯೋಗದ ಗ್ರಂಥಗಳನ್ನೇ ಓದುತ್ತಿದ್ದೇನೆ.

ಈ ರೀತಿ ನನ್ನ ಗುರುಗಳ ಕೃಪೆಯಿಂದ ೧೩.೪.೨೦೨೩ ಈ ದಿನ, ಅಂದರೆ ನನ್ನ ೮೦ ನೇ ವಯಸ್ಸಿನಲ್ಲಿ ನನ್ನ ಭಕ್ತಿಯೋಗದ ಸಾಧನೆಯು ಆರಂಭವಾಯಿತು. ಇಲ್ಲಿಯವರೆಗೆ ಮುಂದಿನ ಕಾಲದಲ್ಲಿ ಪ್ರಕಾಶಿಸಬೇಕಾದ ಸುಮಾರು ೫೦೦೦ ಗ್ರಂಥಗಳಿಗಾಗಿ ಸಂಗ್ರಹಗೊಂಡ ಬರವಣಿಗೆಯಲ್ಲಿ ಹೆಚ್ಚಿನ ವುಗಳನ್ನು ಜ್ಞಾನಯೋಗ ಮತ್ತು ಕರ್ಮಯೋಗ ಇವುಗಳ ಆಧಾರದಲ್ಲಿ ಬರೆಯಲಾಗಿದೆ. ಈಗ ನಾನು ಬರೆಯಲಾಗುವ ಈ ಮುಂದಿನ ಅನೇಕ ಲೇಖನಗಳು ಮತ್ತು ಗ್ರಂಥಗಳು ಭಕ್ತಿಯೋಗದ ಬಗ್ಗೆಯೂ ಇರುವವು. ‘ಮಹರ್ಷಿ ವ್ಯಾಸರು ಜ್ಞಾನಯೋಗಕ್ಕನುಸಾರ ಸಾಧನೆ ಯನ್ನು ಮಾಡುವಾಗ ವೇದ ಮತ್ತು ಪುರಾಣಗಳನ್ನು ರಚಿಸಿದರು. ಎಲ್ಲಕ್ಕಿಂತ ಕೊನೆಗೆ ಯಾವಾಗ ಅವರು ಭಾಗವತ ಪುರಾಣವನ್ನು ಬರೆದರೋ, ಆಗ ಅವರಿಗೆ ನಿಜವಾದ ಸಮಾಧಾನದ ಪ್ರಾಪ್ತಿ ಯಾಯಿತು. ಈಗ ನನಗೂ ಅಂತಹ ಅನುಭೂತಿಯ ಅಲ್ಪಸ್ವಲ್ಪ ಅನುಭವ ಬರುತ್ತಿದೆ. ‘ನನ್ನ ಗುರುಗಳು ನನಗೆ ಭಕ್ತಿಯೋಗದ ಮಹತ್ವವನ್ನು ಗಮನಕ್ಕೆ ತಂದು ಕೊಟ್ಟು ಈಗ ನನ್ನ ಸಾಧನೆಗೆ ಪೂರ್ಣತ್ವವನ್ನು ಸಾಧ್ಯ ಮಾಡಿಕೊಟ್ಟರು; ಆದುದರಿಂದ ನಾನು ಗುರುಗಳಿಗೆ ಕೋಟಿ ಕೋಟಿ ಕೃತಜ್ಞನಾಗಿದ್ದೇನೆ.

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ (೩.೬.೨೦೨೩)

‘ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಹೇಳಿರುವ ಭಕ್ತಿಯೋಗದ ಮಹತ್ವ ಮತ್ತು ಅದರ ಗೂಢಾರ್ಥ ತಿಳಿದು ಭಕ್ತಿಯೋಗದ ಸಾಧನೆ ಹೆಚ್ಚಿಸಿ ! – ಪೂ. ಸಂದೀಪ ಆಳಶಿ

ಬ್ರಹ್ಮಾನಂದಂ ಪರಮಸುಖದಂ ಕೇವಲಂ ಜ್ಞಾನಮೂರ್ತಿಂ
ದ್ವಂದ್ವಾತೀತಂ ಗಗನಸದೃಶಂ ತತ್ತ್ವಮಸ್ಯಾದಿಲಕ್ಷ್ಯಮ್ |
ಏಕಂ ನಿತ್ಯಂ ವಿಮಲಮಚಲಂ ಸರ್ವಧೀಸಾಕ್ಷಿಭೂತಂ
ಭಾವಾತೀತಂ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ ||
– ಗುರುಗೀತಾ, ಶ್ಲೋಕ ೧೧೧

ಅರ್ಥ : ಬ್ರಹ್ಮರೂಪ, ಆನಂದರೂಪ, ಪರಮೋಚ್ಚ ಸುಖ (ಆನಂದ)ವನ್ನು ನೀಡುವ, ಕೇವಲ ಜ್ಞಾನಸ್ವರೂಪ, ದ್ವಂದ್ವರಹಿತ, ಆಕಾಶದಂತೆ (ನಿರಾಕಾರ), ‘ತತ್ತ್ವಮಸಿ ಈ ಮಹಾವಾಕ್ಯದ ಗುರಿ (‘ಆ (ಬ್ರಹ್ಮ) ನೀನೇ ಆಗಿರುವೆ ಎಂಬ ವೇದವಾಕ್ಯವು ಯಾರನ್ನು ಉದ್ದೇಶಿಸಿ ಹೇಳಲಾಗಿದೆಯೋ ಅವರು), ಏಕೈಕ, ನಿತ್ಯ, ಶುದ್ಧ, ಸ್ಥಿರ, ಸರ್ವಜ್ಞ, ಎಲ್ಲವನ್ನೂ ಸಾಕ್ಷಿಭಾವದಿಂದ ನೋಡುವ, ಭಾವಾತೀತ ಮತ್ತು ಗುಣಾತೀತ ಸದ್ಗುರುಗಳಿಗೆ ನಾನು ನಮಸ್ಕರಿಸುತ್ತೇನೆ.
ಪೂ. ಸಂದೀಪ ಆಳಶಿ

ಶ್ರೀ ಗುರುಗಳಿಗೆ ‘ಭಾವಾತೀತಂ, ಅಂದರೆ ‘ಭಾವದ ಆಚೆಗೆ ಹೋಗಿರುವ, ಎಂದು ಹೇಳಲಾಗಿದೆ. ಅಖಿಲ ಮನುಕುಲದ ಉದ್ಧಾರಕ್ಕಾಗಿ ಕಾರ್ಯನಿರತರಾಗಿರುವ ಜಗದ್ಗುರು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರೂ ಭಾವದ ಆಚೆಗಿರುವ ಬ್ರಹ್ಮಲೀನ ಅವಸ್ಥೆಯಲ್ಲಿದ್ದಾರೆ. ೫.೫.೨೦೧೮ ಈ ದಿನ ನಾಡಿಪಟ್ಟಿವಾಚನದ ಮಾಧ್ಯಮ ದಿಂದ ಮಹರ್ಷಿ ಮಯನರು, ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಭಗವಾನ ಶ್ರೀಕೃಷ್ಣನ ಅಂಶಾತ್ಮಕ ರೂಪವಾಗಿದ್ದು ಧರ್ಮಸಂಸ್ಥಾಪನೆಯ ಕಾರ್ಯಕ್ಕಾಗಿಯೇ ಭೂತಲದ ಮೇಲೆ ಅವತರಿಸಿದ್ದಾರೆ ! ಎಂದು ಹೇಳಿದ್ದಾರೆ.

ಭಗವಾನ ಶ್ರೀಕೃಷ್ಣನು ಸ್ಪಷ್ಟವಾಗಿ ಹೇಳಿದ್ದಾನೆ –
ನ ಮೇ ಪಾರ್ಥಾಸ್ತಿ ಕರ್ತವ್ಯಂ ತ್ರಿಷು ಲೋಕೆಷು ಕಿಂಚನ |
ನಾನವಾಪ್ತಮವಾಪ್ತವ್ಯಂ ವರ್ತ ಏವ ಚ ಕರ್ಮಣಿ ||
– ಶ್ರೀಮದ್ಭಗವದ್ಗೀತೆ, ಅಧ್ಯಾಯ ೩, ಶ್ಲೋಕ ೨೨

ಅರ್ಥ : ಹೇ ಪಾರ್ಥಾ ! ನನಗೆ ಈ ಮೂರೂ ಲೋಕಗಳಲ್ಲಿ ಯಾವುದೇ ಕರ್ತವ್ಯವಿಲ್ಲ ಮತ್ತು ‘ನಾನು ಪಡೆಯಬೇಕಾದಂತಹ ಯಾವುದೇ ವಸ್ತು ಪ್ರಾಪ್ತವಾಗಲಿಲ್ಲ ಎಂದಿಲ್ಲ, ಆದರೂ ನಾನು ಕರ್ತವ್ಯಕರ್ಮಗಳನ್ನು ಮಾಡುತ್ತಲೇ ಇರುತ್ತೇನೆ.

ನಿಜವಾಗಿ ನೋಡಿದರೆ ಸಾಕ್ಷಾತ್ ಶ್ರೀಕೃಷ್ಣನಂತಿರುವ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗೆ ಯಾವುದೇ ಕರ್ಮವನ್ನು ಮಾಡುವ ಆವಶ್ಯಕತೆ ಇಲ್ಲ, ಆದರೂ ಕೇವಲ ಸಾಧಕರ ಕಲ್ಯಾಣಕ್ಕಾಗಿ ಮತ್ತು ಸಾಧಕರಿಗೆ ‘ಹಿಂದೂ ರಾಷ್ಟ್ರವನ್ನು ಅನುಭವಿಸಲು ಸಾಧ್ಯವಾಗಬೇಕೆಂದು ಅವರು ಇಂದು ತಮ್ಮ ೮೧ ನೇ ವಯಸ್ಸಿನಲ್ಲಿಯೂ ನಿರಂತರವಾಗಿ ಕಾರ್ಯನಿರತರಾಗಿದ್ದಾರೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ನಿರ್ಗುಣ ಸ್ತರದ ಉಚ್ಚ ಆಧ್ಯಾತ್ಮಿಕ ಅವಸ್ಥೆಯಲ್ಲಿ ಸ್ಥಿರವಾಗಿರುವುದರಿಂದ ಅವರಿಗೆ ಸಗುಣ ಸ್ತರದ ಭಾವಜಾಗೃತಿಯ ಅವಸ್ಥೆಯನ್ನು ಅನುಭವಿಸುವ ಆವಶ್ಯಕತೆಯೂ ಇಲ್ಲ. ಹೀಗಿರುವಾಗಲೂ ಅವರು ಅದನ್ನು ಅನುಭವಿಸಿ ತಮ್ಮ ಅನುಭವದಿಂದ ಭಕ್ತಿಯೋಗದ ಮಹತ್ವವನ್ನು ಹೇಳುತ್ತಿದ್ದಾರೆ. ‘ಸಾಧಕರು ಕರ್ಮಯೋಗಿ ಮತ್ತು ಜ್ಞಾನಯೋಗಿ ಆಗಿದ್ದರೂ ಭಕ್ತಿಯೋಗದ ಹೊರತು ಅವರ ಸಾಧನೆಯ ಪ್ರವಾಸ ಪೂರ್ಣಗೊಳ್ಳುವುದಿಲ್ಲ, ಇದನ್ನೇ ಅವರು ಸಾಧಕರ ಮನಸ್ಸಿನಲ್ಲಿ ಬಿಂಬಿಸುತ್ತಿದ್ದಾರೆ. ಮುಂಬರುವ ಮಹಾಭೀಕರ ಆಪತ್ಕಾಲದಲ್ಲಿ ‘ನಾವು ಜೀವಂತ ಇರಬಹುದೋ ಅಥವಾ ಇಲ್ಲವೋ, ಎಂಬುದರ ಭರವಸೆಯನ್ನು ನೀಡಲು ಬರುವುದಿಲ್ಲ. ಆದರೆ ಭಗವಂತನು ಭರವಸೆಯನ್ನು ನೀಡಿದ್ದಾನೆ –

ನ ಮೇ ಭಕ್ತಃ ಪ್ರಣಶ್ಯತಿ |
– ಶ್ರೀಮದ್ಭಗವದ್ಗೀತೆ, ಅಧ್ಯಾಯ ೯, ಶ್ಲೋಕ ೩೧

ಅರ್ಥ : ನನ್ನ ಭಕ್ತನು ನಾಶ ಆಗುವುದಿಲ್ಲ.

ಭಗವಂತನ ಭಕ್ತನಾಗಬೇಕಿದ್ದರೆ, ಈಗಿನಿಂದಲೇ ಭಕ್ತಿಯನ್ನು ಹೆಚ್ಚಿಸಲು ತಳಮಳದಿಂದ ಪ್ರಯತ್ನಿಸಬೇಕು. ‘ಇದು ಸಾಧಕರ ಮನಸ್ಸಿನಲ್ಲಿ ಬಿಂಬಿತವಾಗಬೇಕು, ಎಂಬುದಕ್ಕಾಗಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಮೇಲಿನ ಲೇಖನದಿಂದ ಭಕ್ತಿಯ ಮಹತ್ವವನ್ನು ಸ್ಪಷ್ಟಪಡಿಸಿದ್ದಾರೆ. ‘ವಿಷ್ಣುಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಪೂರ್ಣತ್ವಕ್ಕೆ ತಲುಪಿದ್ದರೂ ಜೀವನದಲ್ಲಿ ಪ್ರತಿಯೊಂದು ಹಂತದಲ್ಲಿ ಅವರು ಹೇಗೆ ಕಲಿಯುತ್ತಿರುತ್ತಾರೆ, ಇದೂ ಸಹ ಅವರು ಬರೆದ ಲೇಖನದಿಂದ ತಿಳಿಯುತ್ತದೆ. ಇದರಿಂದ ಸಾಧಕರೂ ‘ಸಾಧನೆಯನ್ನು ಮಾಡುವಾಗ ಸತತವಾಗಿ ಜಿಜ್ಞಾಸೆ ಮತ್ತು ಕಲಿಯುವ ವೃತ್ತಿಯನ್ನು ಹೇಗೆ ಜಾಗೃತವಾಗಿಡಬೇಕು, ಎಂಬುದು ಗಮನಕ್ಕೆ ಬರುತ್ತದೆ. ಭಕ್ತಿಮಾರ್ಗದ ಪ್ರಕೃತಿ ಇಲ್ಲದಿರುವ ಸಾಧಕರಿಗೆ ಭಕ್ತಿಯನ್ನು ಹೆಚ್ಚಿಸುವ ಪ್ರಯತ್ನಿಸುವಾಗ ಕಠಿಣ ಅನಿಸುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಸ್ವತಃ ಭಕ್ತಿಯೋಗದ ಪ್ರಚಾರ ಮಾಡಲು ಪ್ರಯತ್ನಶೀಲ ಆಗಿರುವುದರಿಂದ ಮತ್ತು ಅವರಿಗೆ ಯಾವಾಗಲೂ ಸಾಧಕರ ಆಧ್ಯಾತ್ಮಿಕ ಪ್ರಗತಿಯದ್ದೇ ಧ್ಯಾಸವಿರುವುದರಿಂದ ಒಂದು ರೀತಿಯಲ್ಲಿ ‘ಸಾಧಕರ ಭಕ್ತಿ ಹೆಚ್ಚಾಗಬೇಕು, ಎಂಬ ಅವರ ಅವ್ಯಕ್ತ ಸಂಕಲ್ಪವೇ ಕಾರ್ಯನಿರತವಾಗಿದೆ. ಆದುದ ರಿಂದ ಸಾಧಕರೂ ಮನಃಪೂರ್ವಕ ಭಕ್ತಿಯನ್ನು ಹೆಚ್ಚಿಸಲು ಪ್ರಯತ್ನಿಸಿದರೆ ಆ ಸಂಕಲ್ಪದ ಫಲಸ್ವರೂಪವಾಗಿ ಸಾಧಕರ ಭಕ್ತಿ ನಿಶ್ಚಿತವಾಗಿಯೂ ಹೆಚ್ಚಾಗುವುದು. ‘ನಮ್ಮೆಲ್ಲ ಸಾಧಕರಿಗೆ ಈಶ್ವರಪ್ರಾಪ್ತಿ ಯಾಗಬೇಕು, ಎಂಬ ತಳಮಳ ನಮಗಿಂತ ಹೆಚ್ಚು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಲ್ಲಿದೆ. ಇಂತಹ ಭಗವಂತ ಸ್ವರೂಪ ಗುರುದೇವರ ಚರಣಗಳಲ್ಲಿ ಎಷ್ಟು ಕೃತಜ್ಞತೆಗಳನ್ನು ವ್ಯಕ್ತಪಡಿಸಿದರೂ, ಅದು ಕಡಿಮೆಯೇ ಆಗಿದೆ !

– ಪೂ. ಸಂದೀಪ ಆಳಶಿ (೭.೬.೨೦೨೩)