ಸನಾತನದ ರಾಮನಾಥಿ (ಗೋವಾ) ಆಶ್ರಮಕ್ಕೆ ವಿದ್ಯುತ್‌ಚಾಲಿತ ದ್ವಿಚಕ್ರ ವಾಹನದ ಆವಶ್ಯಕತೆ !

ದ್ವಿಚಕ್ರ ವಾಹನಗಳನ್ನು ಅರ್ಪಣೆಯೆಂದು ನೀಡಬಲ್ಲ ಅಥವಾ ಅದನ್ನು ಖರೀದಿಸಲು ಧನರೂಪದಲ್ಲಿ ಯಥಾಶಕ್ತಿ ಸಹಾಯ ಮಾಡಲಿಚ್ಛಿಸುವವರು ಓದುಗರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಮುಂದಿನ ಕ್ರಮಾಂಕಕ್ಕೆ ಸಂಪರ್ಕಿಸಬಹುದು.

ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರ ಮಾರ್ಗದರ್ಶನದಂತೆ ರಾಜ್ಯದಲ್ಲಿ ಹಮ್ಮಿಕೊಂಡ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ದ ಸಮಯದಲ್ಲಿ ಸಾಧಕರಿಗೆ ಬಂದ ಅನುಭೂತಿ ಮತ್ತು ಸಮಾಜದಿಂದ ದೊರಕಿದ ಬೆಂಬಲ !

ಸಂತರ ಮಾರ್ಗದರ್ಶನದಿಂದ ಸಾಧಕರಿಗೆ ಸ್ಫೂರ್ತಿ ದೊರಕಿ ಅವರು ಉತ್ಸಾಹದಿಂದ ಪ್ರಯತ್ನವನ್ನು ಆರಂಭಿಸಿದರು. ಈ ಅಭಿಯಾನದಲ್ಲಿ ಸಾಧಕರು ಮಾಡಿದ ಪ್ರಯತ್ನ, ಅವರಿಗೆ ಬಂದ ಅನುಭೂತಿ ಸಮಾಜದಿಂದ ದೊರೆತ ಬೆಂಬಲವನ್ನು ಇಲ್ಲಿ ನೀಡಲಾಗಿದೆ.

ಹಿಂದೂ ಹುಡುಗ-ಹುಡುಗಿಯರನ್ನು ಮೋಸದಿಂದ ಮತಾಂತರಿಸಿ ಅವರನ್ನು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸುವುದು !

ಸದ್ಯ ಭಯೋತ್ಪಾದನಾ ಗುಂಪುಗಳಿಗೆ ಯಾವುದೇ ಪಂಥವು ತ್ಯಾಜ್ಯವಿಲ್ಲ. ಅವರು ತಮ್ಮ ಪರಿಚಯವನ್ನು ಅಡಗಿಸಿಡಲು ಧರ್ಮವನ್ನು ವಸ್ತುವಿನಂತೆ ಬಳಸುತ್ತಾರೆ. ಆದುದರಿಂದ ಧರ್ಮವನ್ನು ಬದಲಾಯಿಸುವುದು ಅವರಿಗೆ ದೊಡ್ಡ ವಿಷಯವಲ್ಲ.

ಸಾಧನೆಯಲ್ಲಿ ತಮ್ಮ ಮಕ್ಕಳಿಂದ ಅದ್ವಿತೀಯ ಪ್ರಗತಿಯನ್ನು ಮಾಡಿಸಿಕೊಂಡ ಏಕಮೇವಾದ್ವಿತೀಯ ಪೂ. ಬಾಳಾಜಿ (ದಾದಾ) ಆಠವಲೆ ! (ಪರಾತ್ಪರ ಗುರು ಡಾ. ಆಠವಲೆಯವರ ತಂದೆ)

ತೀ. ದಾದಾ ಮತ್ತು ಸೌ. ತಾಯಿಯವರಿಂದಾಗಿ ನಮ್ಮ ಮನೆಯ ವಾತಾವರಣವು ಆಧ್ಯಾತ್ಮಿಕವಾಗಿತ್ತು. ಅವರ ದಿನನಿತ್ಯದ ಸಹಜ ನಡೆನುಡಿಗಳಿಂದಲೂ ನಮ್ಮ ಮೇಲೆ ಸಾಧನೆಯ ಸಂಸ್ಕಾರಗಳಾದವು. ಅವರ ಸಂಸ್ಕಾರಗಳಿಂದಾಗಿಯೇ ನನ್ನ ಎಲ್ಲ ಸಹೋದರರ ಸಾಧನೆಯಲ್ಲಿ ಅಪ್ರತಿಮ ಪ್ರಗತಿಯಾಗಿದೆ.

ಸಾಧನೆಯನ್ನು ಮಾಡುವಾಗ ಬರುವ ಅನುಭೂತಿಗಳನ್ನು ಬರೆದುಕೊಡುವ ಮಹತ್ವವನ್ನು ಗಮನದಲ್ಲಿಟ್ಟು, ಅವುಗಳನ್ನು ಆಯಾ ಸಮಯದಲ್ಲಿ ಬರೆದು ಗೋವಾದ ರಾಮನಾಥಿಯ ಸನಾತನದ ಆಶ್ರಮಕ್ಕೆ ಕಳುಹಿಸಿ !

ಒಬ್ಬ ಸಾಧಕನು ಪ್ರಯತ್ನಗಳ ಒಂದು ಹಂತದಲ್ಲಿ ನಿಂತಿದ್ದರೆ, ಮುಂದಿನ ಹಂತದ ಅನುಭೂತಿಯನ್ನು ಓದಿ ಅವನಿಗೆ ಸಾಧನೆಯನ್ನು ಮಾಡಲು ಸ್ಫೂರ್ತಿ ಸಿಗುತ್ತದೆ.

ಸನಾತನ ಸಂಸ್ಥೆಯ ಗ್ರಂಥಗಳು ಎಲ್ಲ ಸ್ತರಗಳ ಜಿಜ್ಞಾಸುಗಳಿಗಾಗಿ ಉಪಯುಕ್ತ !

‘ಸನಾತನ ಸಂಸ್ಥೆಯ ಗ್ರಂಥಗಳಲ್ಲಿ ಅಧ್ಯಾತ್ಮ, ಧರ್ಮ, ವಿವಿಧ ಸಾಧನಾಮಾರ್ಗಗಳು, ದೇವತೆಗಳು ಇಂತಹ ವಿವಿಧ ವಿಷಯಗಳ ಜ್ಞಾನವು ಒಳಗೊಂಡಿವೆ.

ಕಲಿಯುಗದಲ್ಲಿ ಸ್ವಭಾವದೋಷಗಳ ನಿರ್ಮೂಲನೆಯು ಎಲ್ಲ ರೀತಿಯ ಸಾಧನೆಗಳಿಗೆ ಬುನಾದಿಯಾಗಿದೆ !

ಕಲಿಯುಗದಲ್ಲಿ ಹೆಚ್ಚಿನ ಜನರು ರಜ-ತಮಪ್ರಧಾನರಾಗಿರುವುದರಿಂದ ಅವರಲ್ಲಿ ಸ್ವಭಾವದೋಷಗಳು ಮತ್ತು ಅಹಂನ ತೀವ್ರತೆಯು ಹೆಚ್ಚಾಗಿರುತ್ತದೆ. ಆದುದರಿಂದ ಅವರಿಗೆ ನಾಮಜಪವನ್ನು ಮಾಡಲು ಕಠಿಣವಾಗುತ್ತದೆ.

ಕಲಿಯುಗದಲ್ಲಿ ವಿಜ್ಞಾನವನ್ನು ಸಾಧನೆಗಾಗಿ ಉಪಯೋಗಿಸಿದರೆ ಇದೇ ಜನ್ಮದಲ್ಲಿ ಮನುಷ್ಯಜನ್ಮವು ಸಾರ್ಥಕವಾಗಲು ಸಹಾಯವಾಗುತ್ತದೆ !

ಕಾಲಾನುಸಾರ ಏಕಾಗ್ರತೆಯಿಂದ ನಾಮಜಪ ಮಾಡುವುದು ಸಾಧ್ಯವಾಗುವುದಿಲ್ಲ, ಇಂತಹ ಸಮಯದಲ್ಲಿ ಧ್ವನಿಮುದ್ರಿತ ನಾಮಜಪವನ್ನು ಸಂಚಾರವಾಣಿಯಂತಹ ಉಪಕರಣದ ಮಾಧ್ಯಮದಿಂದ ಸತತ ಹಚ್ಚಿಟ್ಟರೆ, ಅದರ ಅರಿವಾಗಿ ನಾಮಜಪದ ಬಗ್ಗೆ ಒಲವು ನಿರ್ಮಾಣವಾಗುತ್ತದೆ.

ಇತರರು ಬದಲಾಗಬೇಕು, ಎಂಬ ಆಗ್ರಹವನ್ನು ಬಿಟ್ಟು ತನ್ನನ್ನು ಬದಲಾಯಿಸಿ ಆ ಪರಿಸ್ಥಿತಿಯನ್ನು ಸ್ವೀಕರಿಸುವುದೇ ಅನೇಕ ಅಡಚಣೆಗಳಿಗೆ ಯೋಗ್ಯ ಉಪಾಯ !

ನಮ್ಮಿಂದ ಯಾರನ್ನೂ ಅದೂ ತಮ್ಮ ಪತ್ನಿ ಮತ್ತು ಮಕ್ಕಳನ್ನೂ ಬದಲಾಯಿಸಲು ಆಗುವುದಿಲ್ಲ; ಆದುದರಿಂದ ಪರಿಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸುವುದಕ್ಕಿಂತ ತನ್ನನ್ನು ಬದಲಾಯಿಸಿ ಪರಿಸ್ಥಿತಿಯನ್ನು ಸ್ವೀಕರಿಸಲು ಕಲಿಯಬೇಕು. ಅದರಿಂದ ತೊಂದರೆಗಳು ಬೇಗ ದೂರವಾಗುತ್ತವೆ.’

ಆಧ್ಯಾತ್ಮಿಕ ಪರಿಭಾಷೆಯಲ್ಲಿ ‘ಶಿಷ್ಯ’ನೆಂದರೆ ಶೇ. ೬೦ ರಿಂದ ೬೯ ರಷ್ಟು ಮಟ್ಟದ ಸಾಧಕ !

‘ಸಾಧನೆ ಮಾಡುವಾಗ ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟದ ನಂತರ ಮನೋಲಯದ ಪ್ರಕ್ರಿಯೆಯು ಆರಂಭವಾಗುತ್ತದೆ. ಈ ಹಂತದಲ್ಲಿ ಸಾಧಕನು ನಿಜವಾದ ಅರ್ಥದಲ್ಲಿ ತನ್ನನ್ನು ಮರೆತು ಎಲ್ಲವನ್ನೂ ಗುರುಗಳಿಗಾಗಿ ಮಾಡುವ ಪ್ರಯತ್ನಗಳಲ್ಲಿರುತ್ತಾನೆ.