ಕಲಿಯುಗದಲ್ಲಿ ವಿಜ್ಞಾನವನ್ನು ಸಾಧನೆಗಾಗಿ ಉಪಯೋಗಿಸಿದರೆ ಇದೇ ಜನ್ಮದಲ್ಲಿ ಮನುಷ್ಯಜನ್ಮವು ಸಾರ್ಥಕವಾಗಲು ಸಹಾಯವಾಗುತ್ತದೆ !

(ಪರಾತ್ಪರ ಗುರು) ಡಾ. ಆಠವಲೆ

‘ಈ ಹಿಂದಿನ ಯುಗಗಳಲ್ಲಿ ಮನುಷ್ಯನ ಜೀವಿತಾವಧಿ ಹೆಚ್ಚಿತ್ತು ಮತ್ತು ಅವನ ಶಾರೀರಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಹೀಗೆ ಎಲ್ಲ ಸ್ತರಗಳ ಕ್ಷಮತೆಯು ಅತ್ಯಂತ ಉತ್ತಮವಾಗಿತ್ತು. ಆದುದರಿಂದ ಆ ಕಾಲಕ್ಕನುಸಾರ ಧ್ಯಾನ, ಸಮಾಧಿ, ಯಜ್ಞ ಇವುಗಳಂತಹ ಸಾಧನೆಯನ್ನು ಮಾಡಲಾಗುತ್ತಿತ್ತು. ಈಗಿನ ಕಲಿಯುಗದಲ್ಲಿ ಮನುಷ್ಯನ ಜೀವಿತಾವಧಿ ಮತ್ತು ಎಲ್ಲ ಸ್ತರಗಳ ಕ್ಷಮತೆಯು ಕಡಿಮೆಯಾಗಿದೆ. ಈ ಪರಿಸ್ಥಿತಿಯಲ್ಲಿ ಸಾಧನೆಯನ್ನು ಮಾಡಿ ಮನುಷ್ಯ ಜನ್ಮವನ್ನು ಸಾರ್ಥಕಗೊಳಿಸಲು ವಿಜ್ಞಾನದ ಸಹಾಯವನ್ನು ಪಡೆದರೆ ಅದು ಸಹಜವಾಗಿ ಸಾಧ್ಯವಾಗುತ್ತದೆ, ಉದಾ. ಕಾಲಾನುಸಾರ ಏಕಾಗ್ರತೆಯಿಂದ ನಾಮಜಪ ಮಾಡುವುದು ಸಾಧ್ಯವಾಗುವುದಿಲ್ಲ, ಇಂತಹ ಸಮಯದಲ್ಲಿ ಧ್ವನಿಮುದ್ರಿತ ನಾಮಜಪವನ್ನು ಸಂಚಾರವಾಣಿಯಂತಹ ಉಪಕರಣದ ಮಾಧ್ಯಮದಿಂದ ಸತತ ಹಚ್ಚಿಟ್ಟರೆ, ಅದರ ಅರಿವಾಗಿ ನಾಮಜಪದ ಬಗ್ಗೆ ಒಲವು ನಿರ್ಮಾಣವಾಗುತ್ತದೆ. ಗಣಕಯಂತ್ರ ಮತ್ತು ಸಂಚಾರವಾಣಿಯಲ್ಲಿ ನಮ್ಮ ಇಷ್ಟದೇವತೆಯ ಚಿತ್ರವನ್ನು ಇಟ್ಟರೆ, ಭಾವಜಾಗೃತಿಗಾಗಿ ಸಹಾಯವಾಗುತ್ತದೆ. ಜಾಲತಾಣ ಮತ್ತು ಸಂಚಾರವಾಣಿ ಮಾಧ್ಯಮದಿಂದ ಅನೇಕ ಜನರ ವರೆಗೆ ಸಾಧನೆಯ ವಿಷಯವನ್ನು ತಲುಪಿಸಲು ಸಾಧ್ಯವಾಗುತ್ತದೆ.

– (ಪರಾತ್ಪರ ಗುರು) ಡಾ. ಆಠವಲೆ (೧.೯.೨೦೨೧)