‘ಸನಾತನ ಸಂಸ್ಥೆಯ ಗ್ರಂಥಗಳಲ್ಲಿ ಅಧ್ಯಾತ್ಮ, ಧರ್ಮ, ವಿವಿಧ ಸಾಧನಾಮಾರ್ಗಗಳು, ದೇವತೆಗಳು ಇಂತಹ ವಿವಿಧ ವಿಷಯಗಳ ಜ್ಞಾನವು ಒಳಗೊಂಡಿವೆ. ಈ ಜ್ಞಾನವನ್ನು ಸದ್ಯದ ವೈಜ್ಞಾನಿಕ ಪರಿಭಾಷೆಯಲ್ಲಿ ಕೊಟ್ಟಿರುವುದರಿಂದ ಬುದ್ಧಿಯಿಂದ ಅಧ್ಯಾತ್ಮವನ್ನು ತಿಳಿದುಕೊಳ್ಳುವ ಜಿಜ್ಞಾಸುಗಳಿಗೆ ಆವಶ್ಯಕವಾಗಿದೆ. ಇದರೊಂದಿಗೆ ಇದರಲ್ಲಿನ ಕೆಲವೊಂದು ಜ್ಞಾನವು ಈ ಪೃಥ್ವಿಯ ಮೇಲೆ ಇದುವರೆಗೆ ಎಲ್ಲಿಯೂ ದೊರಕದಿರುವ ದೈವೀ ಜ್ಞಾನವಾಗಿದೆ. ಆದುದರಿಂದ ಈ ಜ್ಞಾನವು ಆ ವಿಷಯದಲ್ಲಿನ ತಜ್ಞರಿಗೆ ಉಪಯುಕ್ತವಾಗುತ್ತದೆ. ಈ ರೀತಿ ಸನಾತನದ ಗ್ರಂಥಗಳು ಜಿಜ್ಞಾಸುಗಳಿಂದ ಹಿಡಿದು ತಜ್ಞರವರೆಗೆ ಎಲ್ಲರಿಗೂ ಉಪಯುಕ್ತವಾಗಿವೆ.
– (ಪರಾತ್ಪರ ಗುರು) ಡಾ. ಆಠವಲೆ (೧೭.೮.೨೦೨೧)