ಹಿಂದೂ ಹುಡುಗ-ಹುಡುಗಿಯರನ್ನು ಮೋಸದಿಂದ ಮತಾಂತರಿಸಿ ಅವರನ್ನು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸುವುದು !

ಭಯೋತ್ಪಾದಕ ಸಂಘಟನೆಗಳ ಹೊಸ ಪದ್ಧತಿ

ಲವ್ ಜಿಹಾದ್

ಕಳೆದ ವರ್ಷ ಢಾಕಾದಲ್ಲಿ ‘ಜಮಾತ್ ಉಲ್ ಮುಜಾಹಿದಿನ ಬಾಂಗ್ಲಾದೇಶ’ (ಜೆ.ಎಮ್.ಬಿ.) ಈ ಭಯೋತ್ಪಾದನಾ ಸಂಘಟನೆಯ ಸದಸ್ಯೆ ಆಯೇಶಾ ಜನ್ನತ್ ಉರ್ಫ ಪ್ರಜ್ಞಾ ದೇವನಾಥ ಇವಳ ಬಂಧನವಾಯಿತು ಮತ್ತು ಹಿಂದೂ ಮಕ್ಕಳ ತಲೆ ಕೆಡಿಸಿ ಅವರನ್ನು ಮತಾಂತರಿಸಲು ಬಂಗಾಲದಲ್ಲಿ ನಡೆಯುತ್ತಿರುವ ಷಡ್ಯಂತ್ರವು ಬಹಿರಂಗವಾಯಿತು. ಆಯೇಶಾ ಮೊದಲು ಹಿಂದೂವಾಗಿದ್ದಳು. ಅವಳು ೨೦೦೯ ರಲ್ಲಿ ಇಸ್ಲಾಮ್‌ಅನ್ನು ಸ್ವೀಕರಿಸಿದಳು. ಅನಂತರ ಅವಳು ‘ಜಮಾತ್ ಉಲ್ ಮುಜಾಹಿದಿನ ಬಾಂಗ್ಲಾದೇಶ’ ಈ ಭಯೋತ್ಪಾದನಾ ಸಂಘಟನೆಯ ಸಕ್ರಿಯ ಸದಸ್ಯೆಯಾದಳು. ೨೦೨೦ ನೇ ಇಸವಿಯಲ್ಲಿ ಢಾಕಾದಲ್ಲಿ ಅವಳನ್ನು ಬಂಧಿಸಲಾಯಿತು. ಇತ್ತೀಚೆಗೆ ಇದೇ ಸಂಘಟನೆಯ ನಜೀವುರ ರಹಮಾನ ಪಾವೆಲ್, ಮೆಕೆಲ್ ಖಾನ್ ಮತ್ತು ರಬಿವುಲ ಇಸ್ಲಾಮ್‌ರನ್ನು ಬಂಗಾಲದಲ್ಲಿ ಬಂಧಿಸಲಾಯಿತು. ಕೊಲಕಾತಾ ಪೊಲೀಸರ ವಿಶೇಷ ಕೃತಿ ದಳವು ಅವರ ತನಿಖೆ ಮಾಡಿದಾಗ ಅವರು ರಾಷ್ಟ್ರೀಯ ಸುರಕ್ಷೆಯ ದೃಷ್ಟಿಯಿಂದ ಅಪಾಯಕಾರಿಗಳಾಗಿದ್ದಾರೆಂಬುದು ಬೆಳಕಿಗೆ ಬಂದಿತು. ಈ ಮೂವರೂ ಜಮಾತ್ ಉಲ್ ಮುಜಾಹಿದಿನದ ಸಂಚಾಲಕರಾಗಿದ್ದು ಅವಕಾಶ ಸಿಕ್ಕ ತಕ್ಷಣ ಭಾರತದಲ್ಲಿ ನುಸುಳಿದ್ದರು. ಮೂವರೂ ತಮ್ಮ ಪರಿಚಯವನ್ನು ಮುಚ್ಚಿಟ್ಟು ಬಂಗಾಲದಲ್ಲಿ ಕಟ್ಟಡ ಒಂದರಲ್ಲಿ ವಾಸಿಸುತ್ತಿದ್ದರು. ಸಂಶಯ ಬರಬಾರದೆಂದು, ಅವರು ಹಣ್ಣುಗಳನ್ನು ಮಾರುವುದು, ಸೊಳ್ಳೆಪರದೆಗಳನ್ನು ಮಾರುವುದು ಈ ರೀತಿಯ ವ್ಯವಸಾಯ ಮಾಡುತ್ತಿದ್ದರು. ಹಿಂದೂ ಹುಡುಗಿಯರನ್ನು ಜಾಲದಲ್ಲಿ ಸಿಲುಕಿಸುವ ಅವರ ಕೆಲಸವು ನಡೆದಿತ್ತು. ನಜಿವುರನು ತನ್ನ ಹೆಸರನ್ನು ಜಯರಾಮ ಬೆಪಾರಿ ಎಂದಿಟ್ಟುಕೊಂಡಿದ್ದನು. ಇಬ್ಬರು ಹಿಂದೂ ಮಹಿಳೆಯರನ್ನು ಗೆಳೆತನದ ಜಾಲದಲ್ಲಿ ಸಿಲುಕಿಸಿ ಅವರೊಂದಿಗೆ ಮದುವೆ ಮಾಡಿಕೊಳ್ಳುವ ನಿಯೋಜನೆ ನಜೀವುರ ಮತ್ತು ಮೆಕಲ್‌ರದ್ದಾಗಿತ್ತು.

ಪರಿಚಯವನ್ನು ಅಡಗಿಸಿಡಲು ಭಯೋತ್ಪಾದಕರು ಧರ್ಮವನ್ನು ವಸ್ತುವಿನಂತೆ ಬಳಕೆ ಮಾಡುವುದು

‘ನವಭಾರತ ಟೈಮ್ಸ್’ನ ಮಾಹಿತಿಗನುಸಾರ ಕೋಲಕಾತಾದ ವಿಶೇಷ ಕೃತಿ ದಳದ ಆಧಿಕಾರಿಯು, ಸದ್ಯ ಭಯೋತ್ಪಾದನಾ ಗುಂಪುಗಳಿಗೆ ಯಾವುದೇ ಪಂಥವು ತ್ಯಾಜ್ಯವಿಲ್ಲ. ಅವರು ತಮ್ಮ ಪರಿಚಯವನ್ನು ಅಡಗಿಸಿಡಲು ಧರ್ಮವನ್ನು ವಸ್ತುವಿನಂತೆ ಬಳಸುತ್ತಾರೆ. ಆದುದರಿಂದ ಧರ್ಮವನ್ನು ಬದಲಾಯಿಸುವುದು ಅವರಿಗೆ ದೊಡ್ಡ ವಿಷಯವಲ್ಲ. ಅವರು ಗುಪ್ತಚರ ವಿಭಾಗವನ್ನು ಮೋಸಗೊಳಿಸಲು ಧರ್ಮವನ್ನು ಬಳಸುತ್ತಿರುತ್ತಾರೆ’, ಎಂದು ಹೇಳಿದರು. ಭಾರತೀಯ ಮಹಿಳೆಯರೊಂದಿಗೆ ಮದುವೆ ಮಾಡಿಕೊಂಡರೆ ಭಾರತೀಯ ಪರಿಚಯವನ್ನು ಪಡೆಯಲು ಸುಲಭವಾಗಿ ಈ ಪರಿಚಯವು ಸುರಕ್ಷಾಕವಚದಂತೆ ಕೆಲಸ ಮಾಡುತ್ತದೆ. ಆದುದರಿಂದ ಪೊಲೀಸರಿಂದ ಸುರಕ್ಷಿತರಾಗಿರಲು ಸಹಾಯವಾಗುತ್ತದೆ’, ಎಂದು ಅಧಿಕಾರಿಗಳು ಹೇಳಿದರು.

ಸಂಚಾರಸಾರಿಗೆ ನಿಷೇಧದ ಕಾಲಾವಧಿಯಲ್ಲಿ ಭಯೋತ್ಪಾದನಾ ಸಂಘಟನೆಗಳು ನಿರುದ್ಯೋಗಿ ಯುವಕರನ್ನು ಜಾಲದಲ್ಲಿ ಸಿಲುಕಿಸಲು ಪ್ರಯತ್ನಿಸುವುದು

ಕೊರೊನಾ ಕಾಲದಲ್ಲಿ ಸಂಚಾರಸಾರಿಗೆ ನಿಷೇಧದಿಂದ ಯುವಕರು ನಿರುದ್ಯೋಗಿಗಳಾದರು. ಭಯೋತ್ಪಾದನಾ ಸಂಘಟನೆಗಳು ಅದರ ಲಾಭ ಪಡೆಯುವುದು. ಕೇವಲ ‘ಜಮಾತ್ ಉಲ್ ಮುಜಾಹಿದಿನ ಬಾಂಗ್ಲಾದೇಶ’ (ಜೆ.ಎಮ್.ಬಿ.) ಈ ಭಯೋತ್ಪಾದನಾ ಸಂಘಟನೆಯಷ್ಟೇ ಅಲ್ಲ, ಆದರೆ ಐಸಿಸ್‌ನಂತಹ ಅಂತರರಾಷ್ಟ್ರೀಯ ಭಯೋತ್ಪಾದನಾ ಸಂಘಟನೆಗಳೂ ಯುವಕರನ್ನು ಗುರಿಯಾಗಿಸಿಟ್ಟುಕೊಂಡರು. ಅವರನ್ನು ಜಾಲದಲ್ಲಿ ಸಿಲುಕಿಸಲು ಪ್ರಯತ್ನಿಸಿದರು. ಭಯೋತ್ಪಾದಕರ ತನಿಖೆಯ ನಂತರ ಪೊಲೀಸರು, ಈ ಜನರು ಕೆಲವೊಮ್ಮೆ ಎದುರುಬದುರಾಗಿ ಕುಳಿತುಕೊಂಡು ಮತ್ತು ಕೆಲವೊಮ್ಮೆ ‘ಆನ್‌ಲೈನ್’ ಮೂಲಕ ನಿರುದ್ಯೋಗಿ ಹುಡುಗರನ್ನು ಜಾಲದಲ್ಲಿ ಕೆಡವಲು ಪ್ರಯತ್ನಿಸಿದರು’, ಎಂದು ಹೇಳಿದರು.

ಬಂಗಾಲದ ಚಿಕ್ಕ ಗ್ರಾಮದಲ್ಲಿ ವಾಸಿಸುವ ಪ್ರಜ್ಞಾ ಇವಳು ‘ಜಮಾತ್ ಉಲ್ ಮುಜಾಹಿದಿನ್’ನ ಆಯೇಶಾ ಜನ್ನತ್ ಹೇಗಾದಳು ?

‘ಜಮಾತ್ ಉಲ್ ಮುಜಾಹಿದಿನ್ ಬಾಂಗ್ಲಾದೇಶ’ದ (‘ಮೆ.ಎಮ್.ಬಿ.’ನ) ಆಯೇಶಾ ಕೋಲಕಾತಾದ ಧನಿಯಾಕಾಲಿ ಪೊಲೀಸ್ ಠಾಣೆಯ ಕ್ಷೇತ್ರದಲ್ಲಿ ಬರುವ ಪಶ್ಚಿಮ ಕೆಶಾಬಪುರದಲ್ಲಿ ವಾಸಿಸುತ್ತಿದ್ದಳು. ವಿದ್ಯಾಭ್ಯಾಸ ಪಡೆಯುತ್ತಿರುವಾಗ ಅವಳಿಗೊಬ್ಬಳು ಮುಸಲ್ಮಾನ ಸ್ನೇಹಿತೆಯಿದ್ದಳು. ೨೦೦೯ ರಲ್ಲಿ ಪ್ರಜ್ಞಾ ಅವಳ ಪ್ರಭಾವಕ್ಕೆ ಒಳಗಾದಳು. ಅನಂತರ ಅವಳನ್ನು ರಹಸ್ಯವಾಗಿ ಮತಾಂತರಿಸಿ ‘ಆಯೇಶಾ ಜನ್ನತ್ ಮೊಹೊನಾ’ ಎಂದು ಹೆಸರಿಡಲಾಯಿತು. ಅವಳಿಗೆ ಮತಾಂಧತೆಯ ವಿಷವನ್ನು ಉಣಿಸಿ ಅವಳನ್ನು ‘ಜೆ.ಎಮ್.ಬಿ.’ಯ ಸದಸ್ಯಳನ್ನಾಗಿ ಮಾಡಲಾಯಿತು. ಅವರು ಆಯೇಶಾಳಿಗೆ ಹಿಂದೂ ಹುಡುಗಿಯರನ್ನು ಇಸ್ಲಾಮ್‌ಅನ್ನು ಸ್ವೀಕರಿಸುವಂತೆ ಮರಳು ಮಾಡುವ ಕೆಲಸವನ್ನು ಒಪ್ಪಿಸಿದರು. ಅವಳು ಹಿಂದೂ ಹುಡುಗಿಯರನ್ನು ಕಟ್ಟರವಾದಿ ಮೌಲ್ವಿಗೆ ಪರಿಚಯ ಮಾಡಿಸಿಕೊಟ್ಟು ಮತಾಂತರಕ್ಕಾಗಿ ಪ್ರಯತ್ನಿಸಿದಳು. ಆಯೇಶಾಳಿಗೆ ಸಂಘಟನೆಯಿಂದ ಫಂಡ್ ಸಂಗ್ರಹಿಸುವ ಜವಾಬ್ದಾರಿ ಸಿಕ್ಕಿತ್ತು. ಅದರ ಅಂತರ್ಗತ ಹಿಂದೂ ಹುಡುಗರನ್ನು ಆಯ್ಕೆ ಮಾಡಿ ಅವರನ್ನು ಸಹಜವಾಗಿ ‘ಜೆ.ಎಮ್.ಬಿ.’ಯ ಸದಸ್ಯರನ್ನಾಗಿ ಮಾಡುವುದು, ಇದೇ ಅವಳ ಮುಖ್ಯ ಕೆಲಸವಾಗಿತ್ತು.

ಬಂಗಾಲದಲ್ಲಿ ‘ಜಮಾತ್ ಉಲ್ ಮುಜಾಹಿದಿನ ಬಾಂಗ್ಲಾದೇಶ’ದ ಹಿರಿಯ ಕಮಾಂಡರ್‌ನ ಬಂಧನ !

೨೦೨೦ ನೇ ಇಸವಿಯಲ್ಲಿ ಬಂಗಾಲದ ಮುರ್ಶಿದಾಬಾದನಲ್ಲಿ ಪೊಲೀಸರು ಇಸ್ಲಾಮಿಕ್ ಭಯೋತ್ಪಾದಕ ಮತ್ತು ‘ಜಮಾತ್ ಉಲ್ ಮುಜಾಹಿದಿನ ಬಾಂಗ್ಲಾದೇಶ’ದ ಹಿರಿಯ ಕಮಾಂಡರ್ ಅಬ್ದುಲ್ ಕರಿಮ್ ಉರ್ಫ ಬೊರೊ ಅಬ್ದುಲ್ ಕರೀಮ್ ಇವನನ್ನು ಬಂಧಿಸಿದರು. ಅವನು ಬೋಧಗಯಾ (ಬಿಹಾರ)ನ ಸ್ಫೋಟದಲ್ಲಿ ಪಾಲ್ಗೊಂಡ ‘ಧುಲಿಯನ್ ಮಾಡ್ಯೂಲ್’ನ ಮುಖ್ಯ ಮುಖಂಡನಾಗಿದ್ದನು. ಅವನು ಸಹ ಹುಡುಗರನ್ನು ತನ್ನ ಸಂಘಟನೆಯೊಂದಿಗೆ ಜೋಡಿಸುವ ಕೆಲಸವನ್ನು ಮಾಡುತ್ತಿದ್ದನು.

ಬೆಂಗಳೂರಿನಲ್ಲಿ ಐಸಿಸ್‌ನ ಸಂಚಾಲಕ ಅಬೂ ಇಬ್ರಾಹಿಮ್‌ನ ಬಂಧನ

೨೦೨೦ ನೇ ಇಸವಿಯಲ್ಲಿ ಬೆಂಗಳೂರಿನಲ್ಲಿ ಐಸಿಸ್‌ನ ಸಂಚಾಲಕ ಅಬೂ ಇಬ್ರಾಹಿಮ್‌ನನ್ನು ಬಂಧಿಸಲಾಯಿತು. ಅವನು ತನ್ನ ಪರಿಚಯವನ್ನು ಅಡಗಿಸಿಡಲು ಸುಜಿತಚಂದ್ರ ದೇವನಾಥ ಎಂಬ ಹೆಸರಿನಲ್ಲಿ ರಾಜ ಎಂಬ ವ್ಯಕ್ತಿಯ ಕೈಕೆಳಗೆ ಕೆಲಸ ಮಾಡುತ್ತಿದ್ದನು. (ಆಧಾರ : ‘ಓಪಿಇಂಡಿಯಾ’ದ ಜಾಲತಾಣ)