‘ಸಾಧನೆ ಮಾಡುವಾಗ ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟದ ನಂತರ ಮನೋಲಯದ ಪ್ರಕ್ರಿಯೆಯು ಆರಂಭವಾಗುತ್ತದೆ. ಈ ಹಂತದಲ್ಲಿ ಸಾಧಕನು ನಿಜವಾದ ಅರ್ಥದಲ್ಲಿ ತನ್ನನ್ನು ಮರೆತು ಎಲ್ಲವನ್ನೂ ಗುರುಗಳಿಗಾಗಿ ಮಾಡುವ ಪ್ರಯತ್ನಗಳಲ್ಲಿರುತ್ತಾನೆ. ಗುರುಗಳು ಹೇಳಿದ ಸಾಧನೆಯನ್ನು ಮನಃಪೂರ್ವಕ ಮಾಡುವುದು, ಅವರ ಕಾರ್ಯವನ್ನು ಜವಾಬ್ದಾರಿ ವಹಿಸಿಕೊಂಡು ಅದನ್ನು ಮುನ್ನಡೆಸಲು ತಳಮಳದಿಂದ ಪ್ರಯತ್ನಿಸುವುದು, ಇದು ಈ ಹಂತದಲ್ಲಿ ಸಾಧ್ಯವಾಗತೊಡಗುತ್ತದೆ. ಹಾಗಾಗಿ ಶೇ. ೬೦ ರಿಂದ ೬೯ ರಷ್ಟು ಆಧ್ಯಾತ್ಮಿಕ ಮಟ್ಟದ ಸಾಧಕನೇ ನಿಜವಾದ ಅರ್ಥದಲ್ಲಿ ‘ಶಿಷ್ಯ’ನಾಗಿರುತ್ತಾನೆ.’
– (ಪರಾತ್ಪರ ಗುರು) ಡಾ. ಆಠವಲೆ (೨.೯.೨೦೨೧)