‘ಹಿಂದಿನ ಯುಗಗಳಲ್ಲಿ ಸಾಧನೆಯೆಂದು ನಾಮಸ್ಮರಣೆಯನ್ನು ಮಾಡುತ್ತಿದ್ದರು. ಆ ಕಾಲದಲ್ಲಿ ಜನರು ಸಾತ್ತ್ವಿಕರಾಗಿದ್ದುದರಿಂದ ಅವರಿಗೆ ನಾಮಜಪವನ್ನು ಮಾಡುವುದು ಸಾಧ್ಯವಾಗುತ್ತಿತ್ತು. ಈಗ ಕಲಿಯುಗದಲ್ಲಿ ಹೆಚ್ಚಿನ ಜನರು ರಜ-ತಮಪ್ರಧಾನರಾಗಿರುವುದರಿಂದ ಅವರಲ್ಲಿ ಸ್ವಭಾವದೋಷಗಳು ಮತ್ತು ಅಹಂನ ತೀವ್ರತೆಯು ಹೆಚ್ಚಾಗಿರುತ್ತದೆ. ಆದುದರಿಂದ ಅವರಿಗೆ ನಾಮಜಪವನ್ನು ಮಾಡಲು ಕಠಿಣವಾಗುತ್ತದೆ. ಇದಕ್ಕಾಗಿ ಮೊದಲು ಸ್ವಭಾವ ದೋಷಗಳ ನಿರ್ಮೂಲನೆಯನ್ನು ಮಾಡಿದ ನಂತರವೇ ಸಾಧನೆಯ ಬುನಾದಿಯು ನಿರ್ಮಾಣವಾಗುತ್ತದೆ ಮತ್ತು ಅವರಿಗೆ ನಾಮಜಪವನ್ನು ಮಾಡಲು ಸಾಧ್ಯವಾಗುತ್ತದೆ.
– (ಪರಾತ್ಪರ ಗುರು) ಡಾ. ಆಠವಲೆ (೨.೯.೨೦೨೧)