ಸ್ವಾರ್ಥ ಸಾಧಿಸಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಇವರಿಂದ ಭಾರತದ ಪ್ರಶಂಸೆ !

ಇಮ್ರಾನ್ ಖಾನ್ ಭಾರತವನ್ನು ಮನಃಪೂರ್ವಕವಾಗಿ ಹೊಗಳುತ್ತಿದ್ದಾರೆ ಎಂದು ಯಾರೂ ಭಾವಿಸಬಾರದು. ಪಾಕಿಸ್ತಾನದ ದಿವಾಳಿಯ ಅಂಚಿನಲ್ಲಿದ್ದು, ಅದರಿಂದ ಹೊರಬರಲು ಭಾರತದೊಂದಿಗೆ ವ್ಯಾಪಾರ ಮಾಡಲು ಬಯಸುತ್ತಿದೆ. ಅದಕ್ಕಾಗಿಯೇ ಖಾನ್ ಭಾರತದೊಂದಿಗೆ ಪಿಸುಮಾತನಾಡಲು ಪ್ರಯತ್ನಿಸುತ್ತಿದ್ದಾರೆ !

ಉಕ್ರೇನನಲ್ಲಿರುವ ಯುರೋಪನ ಎಲ್ಲಕ್ಕಿಂತ ದೊಡ್ಡ ಸ್ಟೀಲ್ ಯೋಜನೆಯನ್ನು ರಷ್ಯಾದ ಆಕ್ರಮಣದಿಂದ ಧ್ವಂಸ !

ಉಕ್ರೇನನ ಮಾರಿಯುಪೋಲನಲ್ಲಿರುವ ಯುರೋಪಿನ ಎಲ್ಲಕ್ಕಿಂತ ದೊಡ್ಡ ಸ್ಟೀಲ್ ಯೋಜನೆಯನ್ನು ವಶಪಡಿಸಿಕೊಳ್ಳುವುದಕ್ಕಾಗಿ ರಷ್ಯಾದ ಸೈನ್ಯವು ಪ್ರಯತ್ನಿಸುತ್ತಿದೆ. ರಷ್ಯಾದ ಸೈನ್ಯದ ಆಕ್ರಮಣದಲ್ಲಿ ಈ ಯೋಜನೆ ಸಂಪೂರ್ಣವಾಗಿ ಧ್ವಂಸವಾಗಿದೆ.

ವಿಶ್ವದಲ್ಲಿಯ ೧೪೬ ಎಲ್ಲಕ್ಕಿಂತ ಸಂತೋಷವಾಗಿರುವ ದೇಶಗಳ ಪಟ್ಟಿಯಲ್ಲಿ ಭಾರತ ೧೩೬ ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನವು ೧೨೧ ನೇ ಸ್ಥಾನದಲ್ಲಿದೆ !

ವಿಶ್ವಸಂಸ್ಥೆಯಿಂದ ಪ್ರತಿವರ್ಷ ವಿಶ್ವದ ಅತ್ಯಂತ ಸಮತೋಷವಾಗಿರುವ ದೇಶಗಳನ್ನು ಪಟ್ಟಿ ಘೋಷಿಸುತ್ತದೆ. ಇದರಲ್ಲಿ ಸತತ ಐದನೇ ವರ್ಷವೂ ಫಿನ್‌ಲ್ಯಾಂಡ್ ವಿಶ್ವದ ಅತ್ಯಂತ ಸಂತೋಷವುಳ್ಳ ದೇಶ ಎಂಬ ಗೌರವಕ್ಕೆ ಪಾತ್ರವಾಗಿದೆ.

ಕಾಶ್ಮೀರಿ ಹಿಂದುಗಳಿಗೆ ಕಾಶ್ಮೀರದಲ್ಲಿ ವಾಸಿಸುವ ಪೂರ್ಣ ಅಧಿಕಾರ ಸಿಗಬೇಕು ! – ಲೇಖಕಿ ತಸ್ಲೀಮಾ ನಸ್ರೀನ್

ಬಾಂಗ್ಲಾದೇಶದಲ್ಲಿನ ಪ್ರಸಿದ್ಧ ಲೇಖಕಿ ಮತ್ತು ಪ್ರಸ್ತುತ ಮತಾಂಧರ ಭಯದಿಂದ ವಿದೇಶದಲ್ಲಿ ವಾಸಿಸುತ್ತಿರುವ ತಸ್ಲಿಮಾ ನಸ್ರೀನ್ ಇವರು ‘ದ ಕಶ್ಮೀರಿ ಫೈಲ್ಸ್’ ಈ ಚಲನಚಿತ್ರದ ಕುರಿತು ಟಿಪ್ಪಣಿ ಮಾಡಿದ್ದಾರೆ. ಚಲನಚಿತ್ರ ನೋಡಿ ಅವರು ಟ್ವೀಟ್ ಮಾಡಿದ್ದಾರೆ

ಹೋಳಿಯ ಮೊದಲನೇ ದಿನದ ಸಂಜೆಯಂದು ಬಾಂಗ್ಲಾದೇಶದಲ್ಲಿ ೨೦೦ಕ್ಕೂ ಹೆಚ್ಚಿನ ಮತಾಂಧರಿಂದ ಇಸ್ಕಾನ ದೇವಸ್ಥಾನ ಧ್ವಂಸ

ಭಾರತದಲ್ಲಿಯೂ ಮತಾಂಧರು ಹಿಂದೂಗಳ ಮೇಲೆ ಆಕ್ರಮಣ ಮಾಡಿದಾಗ ಪೊಲೀಸರು ನಿಷ್ಕ್ರೀಯರಾಗಿರುತ್ತಾರೆ, ಅಲ್ಲಿ ಮಸಲ್ಮಾನರು ಬಹುಸಂಖ್ಯಾತ ಬಾಂಗ್ಲಾದೇಶದಲ್ಲಿನ ಪೊಲೀಸರು ನಿಷ್ಕ್ರೀಯರಾಗಿದ್ದರೆ ಅದರಲ್ಲಿ ಆಶ್ಚರ್ಯವೇನಿದೆ ?

ರಷ್ಯಾ ಬಳಿ ಕೇವಲ 10 ದಿನಗಳು ಸಾಕಾಗುವಷ್ಟು ಮಾತ್ರ ಮದ್ದುಗುಂಡು ಉಳಿದಿದೆ ! – ಅಮೇರಿಕೆಯ ಮಾಜಿ ಸೇನಾ ಮುಖ್ಯಸ್ಥರ ಹೇಳಿಕೆ

ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧಕ್ಕೆ 20 ದಿನಗಳು ಕಳೆದರೂ ಇನ್ನೂ ನಿಂತಿಲ್ಲ. ಈ ಹಿನ್ನೆಲೆಯಲ್ಲಿ `ರಷ್ಯಾದ ಬಳಿ ಕೇವಲ 10 ದಿನಗಳ ಮಾತ್ರ ಉಳಿದಿವೆ. ಈ 10 ದಿನಗಳಲ್ಲಿ ಉಕ್ರೇನ್ ಸಂಘರ್ಷವನ್ನು ಎದುರಿಸಿದರೆ ರಷ್ಯಾ ತಾನಾಗಿಯೇ ಇಕ್ಕಟ್ಟಿಗೆ ಸಿಲುಕುತ್ತದೆ, ಎಂದು ಅಮೇರಿಕಾದ ಮಾಜಿ ಸೇನಾ ಮುಖ್ಯಸ್ಥ ಬೆನ್ ಹೊಜೆಸ್ ಇವರು ಹೇಳಿದ್ದಾರೆ.

ರಷ್ಯಾದಿಂದ ಯುದ್ಧದ 20ನೇ ದಿನದಂದು ಸಹ ಉಕ್ರೇನಿನ ಮೇಲೆ ದಾಳಿ ಮುಂದುವರಿಕೆ !

ರಷ್ಯಾದಿಂದ ಇಲ್ಲಿಯ ನಿವಾಸಿ ಕಟ್ಟಡಗಳ ಮೇಲೆ ಮತ್ತು ಮೆಟ್ರೋ ನಿಲ್ದಾಣಗಳ ಮೇಲೆ ಮಾರ್ಚ್ 15 ರಂದು ಬೆಳಿಗ್ಗೆ ವೈಮಾನಿಕ ದಾಳಿ ಮಾಡಲಾಯಿತು. ಒಂದು ಕಟ್ಟಡದ ಮೇಲೆ ನಡೆದ ದಾಳಿಯಲ್ಲಿ 2 ಜನರು ಸಾವನ್ನಪ್ಪಿರುವ ಬಗ್ಗೆ `ಬಿಬಿಸಿ’ಯು ಸುದ್ಧಿ ನೀಡಿದೆ.

ಇಸ್ಲಾಮಿ ಗುಂಪುಗಳಿಂದ ಕಾಶ್ಮೀರಿ ಹಿಂದೂಗಳ ನರಸಂಹಾರ ! – ಅಮೇರಿಕಾದ ರ್ಹೊಡ್ ಐಲ್ಯಾಂಡ್ ಸಂಸದರ ದೃಡ ನಿಲುವು

ಕಾಶ್ಮೀರ ಕಣಿವೆಯಲ್ಲಿ ೧೯೯೦ ರ ದಶಕದಲ್ಲಿ ನಡೆದಿದ್ದ ಕಾಶ್ಮೀರಿ ಹಿಂದೂಗಳ ನರಸಂಹಾರ ಆಧಾರಿತ ‘ದ ಕಶ್ಮೀರಿ ಫೈಲ್ಸ್’ ಈ ಚಲನಚಿತ್ರದ ಪ್ರಭಾವ ಕೇವಲ ಭಾರತದಲ್ಲಿ ಅಷ್ಟೇ ಅಲ್ಲದೆ, ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತಿದೆ. ಅಮೇರಿಕಾದ ರ್ಹೊಡ ಐಲ್ಯಾಂಡ್ ಸಂಸತ್ತಿನಲ್ಲಿ ಕಾಶ್ಮೀರಿ ಹಿಂದೂಗಳ ಪರವಾಗಿ ಠರಾವನ್ನು ಅನುಮೋದಿಸಿದೆ.

ದೇವರಿಗೋಸ್ಕರವಾದರೂ ಈ ಹತ್ಯಾಕಾಂಡ ನಿಲ್ಲಿಸಿ ! – ಪೋಪ್ ಫ್ರಾನ್ಸಿಸ್

ರಷ್ಯಾವು ಉಕ್ರೇನ್ ಮೇಲೆ ನಡೆಸಿದ ದಾಳಿಯ ನಂತರ ಪೋಪ ಇವರಿಂದ ಭಾವನಾತ್ಮಕ ಆಕ್ರೋಶ !

ಕೆನಡಾದಲ್ಲಿ ನಡೆದ ವಾಹನದ ಅಪಘಾತದಲ್ಲಿ 5 ಭಾರತೀಯ ವಿದ್ಯಾರ್ಥಿಗಳ ಸಾವು

ಭಾರತದ ವಿದೇಶಾಂಗ ಸಚಿವ ಎಸ್. ಜಯಶಂಕರ ಇವರು ಟ್ವೀಟ್ ಮೂಲಕ ಈ ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ನೀಡಿದ್ದಾರೆ ಹಾಗೂ `ಭಾರತೀಯ ರಾಯಭಾರಿ ಕಡೆಯಿಂದ ಮೃತಪಟ್ಟವರ ಹತ್ತಿರದ ವ್ಯಕ್ತಿಗಳಿಗೆ ಅಗತ್ಯವಿರುವ ಎಲ್ಲಾ ಸಹಾಯ ನೀಡಲಾಗುವುದು’, ಎಂದು ಆಶ್ವಾಸನೆ ನೀಡಿದ್ದಾರೆ.