ರಷ್ಯಾದಿಂದ ಯುದ್ಧದ 20ನೇ ದಿನದಂದು ಸಹ ಉಕ್ರೇನಿನ ಮೇಲೆ ದಾಳಿ ಮುಂದುವರಿಕೆ !

ಕಿವ (ಉಕ್ರೇನ್) – ರಷ್ಯಾದಿಂದ ಇಲ್ಲಿಯ ನಿವಾಸಿ ಕಟ್ಟಡಗಳ ಮೇಲೆ ಮತ್ತು ಮೆಟ್ರೋ ನಿಲ್ದಾಣಗಳ ಮೇಲೆ ಮಾರ್ಚ್ 15 ರಂದು ಬೆಳಿಗ್ಗೆ ವೈಮಾನಿಕ ದಾಳಿ ಮಾಡಲಾಯಿತು. ಒಂದು ಕಟ್ಟಡದ ಮೇಲೆ ನಡೆದ ದಾಳಿಯಲ್ಲಿ 2 ಜನರು ಸಾವನ್ನಪ್ಪಿರುವ ಬಗ್ಗೆ `ಬಿಬಿಸಿ’ಯು ಸುದ್ಧಿ ನೀಡಿದೆ. ರಷ್ಯನ್ ಮತ್ತು ಉಕ್ರೇನಿಯನ್ ಪ್ರತಿನಿಧಿಗಳ ನಡುವೆ ಮತ್ತೆ ಸಂವಾದ ನಡೆಯಬೇಕು.

1. ಉಕ್ರೇನ್‍ನ ರಾಷ್ಟ್ರಾಧ್ಯಕ್ಷ ವ್ಲೋದಿಮಿರ್ ಝೇಲೆಂಕ್ಸಿ ಇವರು ಉಭಯ ದೇಶಗಳ ಚರ್ಚೆಯ ಕುರಿತು `ಸಕಾರಾತ್ಮಕ ಇರುವುದು’, ಎಂದು ಹೇಳಿರುವ ವಿಡಿಯೋ ಪ್ರಸಾರ ಮಾಡಿದೆ.

2. ಇಲ್ಲಿ ಪೋಲಂಡ್, ಜೆಕ್ ರಿಪಬ್ಲಿಕ್, ಮತ್ತು ಸ್ಲೋವೇನಿಯಾ ಈ ಐರೋಪ್ಯ ದೇಶಗಳ ಪ್ರಧಾನಿ ಕಿವಗೆ ಬಂದು ಝೆಲಂಕ್ಸಿ ಇವರನ್ನು ಭೇಟಿ ಮಾಡಲಿದ್ದಾರೆ.

3.ಕಿವನ ಮಹಾಪೌರ ವಿಟಾಲಿ ಕ್ಲಿಟ್‍ಸ್ಕೊ ಇವರು ನಗರಗಳಲ್ಲಿ 35 ಗಂಟೆಗಳಿಗಾಗಿ ಸಂಚಾರ ನಿಷೇಧ ಜಾರಿ ಮಾಡಿರುವುದರಿಂದ `ಪ್ರಸ್ತುತ ಕಾಲದಲ್ಲಿ ಈ ನಗರಕ್ಕೆ ಹೋಗುವುದು ಕಠಿಣ ಮತ್ತು ಭಯಾನಕವಾಗಿದೆ. ನಾನು ಎಲ್ಲಾ ಕಿವ ನಿವಾಸಿಗಳಿಗೆ ಮನೆಯಲ್ಲೇ ಉಳಿಯಿರಿ’, ಎಂದು ಕರೆ ನೀಡಿದ್ದಾರೆ.

4. ಇನ್ನೊಂದೆಡೆ ರಷ್ಯನ್ ಸೈನ್ಯ ಮುಂದೆ ಸಾಗಲು ಸಾಧ್ಯವಾಗಿಲ್ಲ, ಎಂದು ಅಮೇರಿಕಾದ ಒಬ್ಬ ಹಿರಿಯ ರಕ್ಷಣಾಧಿಕಾರಿ ಹೇಳಿಕೆ ನೀಡಿದ್ದಾರೆ. ಯುರೋಪಿಯನ್ ಯೂನಿಯನ್ ರಷ್ಯಾ ಮೇಲೆ ಹೆಚ್ಚು ಕಠಿಣ ನಿಷೇಧ ಹೇರುವ ಮೂಲಕ ಅಧಿಕ ಹಣದುಬ್ಬರ ಇರುವ ಐಷಾರಾಮಿ ವಿವಿಧ ವಸ್ತುಗಳ ನಿರ್ಯಾತ ಮೇಲೆ ಹೆಚ್ಚುವರಿ ತೆರೆಗೆ ಹಾಗೂ ಉರ್ಜಾ ಕ್ಷೇತ್ರದಲ್ಲಿ ಹಣ ತೊಡಗಿಸುವವರಿಗೆ ಲಗಾಮು ಹಾಕಬೇಕು ಎಂದು ಹೇಳಿದೆ.

5. ರಷ್ಯಾದ ಒಂದು ವಾರ್ತಾವಾಹಿನಿಯ ನಿರೂಪಕರು ವಾರ್ತೆ ನೀಡುತ್ತಿರುವಾಗ ಮರಿನಾ ಓವಸ್ಯಾನಿಕೋವಾ ಈ ಸಂಪಾದಕರ ಸಮಿತಿಯ ಒಬ್ಬ ಮಹಿಳೆಯು ರಷ್ಯಾದ ಮೇಲೆ ನಿರ್ಬಂಧ ಹೇರುವ ಲೇಖನವನ್ನು ಬರೆದಿರುವ ಫಲಕ ಕೈಯಲ್ಲಿ ಹಿಡಿದು ಕ್ಯಾಮೆರಾದ ಮುಂದೆ ನಿಂತಿದ್ದರು. ಫಲಕದ ಮೇಲೆ `ಯುದ್ಧ ಬೇಡ, ಯುದ್ಧ ನಿಲ್ಲಿಸಿ, ಅದರ ಪ್ರಚಾರದ ಮೇಲೆ ವಿಶ್ವಾಸವನ್ನಿಡದಿರಿ, ಅವರು(ವಾರ್ತಾವಾಹಿನಿ) ಇಲ್ಲಿ ಸುಳ್ಳು ಹೇಳುತ್ತಿದ್ದಾರೆ.’, ಎಂದು ಬರೆದಿತ್ತು. ಸಂಬಂಧ ಪಟ್ಟ ಮಹಿಳೆಗೆ ಬಂಧಿಸಲಾಗಿದೆ. ವ್ಲಾದಿಮೀರ ಪುತಿನ್ ಇವರ ವಕ್ತಾರ ದಿಮಿತ್ರಿ ಪೇಸ್ಕೊವಾ ಇವರು ಮಹಿಳೆಯ ಈ ಕೃತ್ಯಕ್ಕೆ ‘ಗೂಂಡಾಗಿರಿ’ ಎಂದು ಹೇಳಿದ್ದಾರೆ.