ವಿಶ್ವದಲ್ಲಿಯ ೧೪೬ ಎಲ್ಲಕ್ಕಿಂತ ಸಂತೋಷವಾಗಿರುವ ದೇಶಗಳ ಪಟ್ಟಿಯಲ್ಲಿ ಭಾರತ ೧೩೬ ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನವು ೧೨೧ ನೇ ಸ್ಥಾನದಲ್ಲಿದೆ !

ವಿಶ್ವ ಸಂಸ್ಥೆಯ ವಿಚಿತ್ರ ವಿಕ್ಷಣೆ !

ಇದರಿಂದ, ಈ ಪಟ್ಟಿಯ ಮೇಲೆ ಎಷ್ಟು ನಂಬಿಕೆ ಇಡಬಹುದು, ಇದರ ವಿಚಾರ ಮಾಡುವುದು ಅವಶ್ಯಕವಾಗಿದೆ ! ಪಾಶ್ಚಿಮಾತ್ಯ ರಾಷ್ಟ್ರಗಳ ಪ್ರಭಾವಕ್ಕೆ ಒಳಗಾಗಿರುವ ವಿಶ್ವಸಂಸ್ಥೆಯಿಂದ ನಿರ್ಮಿಸಲಾಗುವ ಇಂತಹ ಪಟ್ಟಿಗಳ ಮೂಲಕ ಭಾರತವನ್ನು ಸದಾ ಕೀಳಾಗಿ ಕಾಣಲು ಪ್ರಯತ್ನಿಸುತ್ತಿರುವುದು, ಗಮನಕ್ಕೆ ಬರುತ್ತದೆ ! – ಸಂಪಾದಕರು

ಸಾಂಧರ್ಭಿಕ ಚಿತ್ರ

ನ್ಯೂಯಾರ್ಕ್(ಅಮೇರಿಕಾ) – ವಿಶ್ವಸಂಸ್ಥೆಯಿಂದ ಪ್ರತಿವರ್ಷ ವಿಶ್ವದ ಅತ್ಯಂತ ಸಮತೋಷವಾಗಿರುವ ದೇಶಗಳನ್ನು ಪಟ್ಟಿ ಘೋಷಿಸುತ್ತದೆ. ಇದರಲ್ಲಿ ಸತತ ಐದನೇ ವರ್ಷವೂ ಫಿನ್‌ಲ್ಯಾಂಡ್ ವಿಶ್ವದ ಅತ್ಯಂತ ಸಂತೋಷವುಳ್ಳ ದೇಶ ಎಂಬ ಗೌರವಕ್ಕೆ ಪಾತ್ರವಾಗಿದೆ. ಫಿನ್‌ಲ್ಯಾಂಡ್ ನಂತರ ಡೆನ್ಮಾರ್ಕ್, ಐಸ್‌ಲ್ಯಾಂಡ್, ಸ್ವಿಟ್ಜರ್‌ಲ್ಯಾಂಡ್, ನೆದರ್‌ಲ್ಯಾಂಡ್, ಲಗ್ಝೆಂಬರ್ಗ್, ಸ್ವೀಡನ್, ನಾರ್ವೆ, ಇಸ್ರೇಲ್ ಮತ್ತು ನ್ಯೂಜಿಲೆಂಡ್ ಈ ೯ ದೇಶಗಳು ಸ್ಥಾನ ಪಡೆಯುತ್ತವೆ. ಈ ಪಟ್ಟಿಯಲ್ಲಿ ಅಪಘಾನಿಸ್ತಾನ ಕೊನೆಯ ಸ್ಥಾನದಲ್ಲಿ ಅಂದರೆ ೧೪೬ ನೇ ಸ್ಥಾನದಲ್ಲಿದೆ. ವಿಶೇಷವೆಂದರೆ ಭಾರತವು ಈ ಸೂಚಿಯಲ್ಲಿ ೧೩೬ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನವು ೧೨೧ನೇ ಸ್ಥಾನದಲ್ಲಿದೆ. ೨೦೨೨ ರ ಪಟ್ಟಿ ತಯಾರಿಸುವಾಗ ಒಟ್ಟು ೧೪೬ ದೇಶಗಳ ಮೌಲ್ಯಮಾಪನ ಮಾಡಲಾಗಿದೆ. ಇದರಲ್ಲಿ ರಷ್ಯಾ ೮೦ನೇ ಸ್ಥಾನದಲ್ಲಿದೆ ಮತ್ತು ಉಕ್ರೇನ್ ೯೮ನೇ ಸ್ಥಾನದಲ್ಲಿದೆ.

ಇದನ್ನು ಪಟ್ಟಿಯನ್ನು ಸಿದ್ಧ ಪಡಿಸಲು ವಿಸ್ವಸಂಸ್ಥೆಯ ಸಮೂಹದಿಂದ ವಿಶೇಷ ವಿಧಾನವನ್ನು ಆಳವಡಿಸಿಕೊಳ್ಳುತ್ತದೆ. ಭ್ರಷ್ಠಾಚಾರದ ಬಗ್ಗೆ ನಾಗರಿಕರ ಅಭಿಪ್ರಾಯಗಳು, ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಮಾಡುವ ಸ್ವಾತಂತ್ರ್ಯ, ದೀರ್ಘಾಯುಷ್ಯ, ಸಾಮಾಜಿಕ ಬೆಂಬಲ, ಜಿಡಿಪಿ(ಒಟ್ಟು ದೇಶದ ಉತ್ಪನ್ನ), ವಾಸಸ್ಥಳದ ಬಗ್ಗೆ ತೃಪ್ತಿ, ಹೀಗೆ ಕೆಲವು ವಿಷಯಗಳ ಬಗ್ಗೆ ಮೌಲ್ಯಮಾಪನ ಮಾಡಿ ಪಟ್ಟಿಯನ್ನು ನಿರ್ಮಿಸಲಾಗುತ್ತದೆ.