ಇಸ್ಲಾಮಿ ಗುಂಪುಗಳಿಂದ ಕಾಶ್ಮೀರಿ ಹಿಂದೂಗಳ ನರಸಂಹಾರ ! – ಅಮೇರಿಕಾದ ರ್ಹೊಡ್ ಐಲ್ಯಾಂಡ್ ಸಂಸದರ ದೃಡ ನಿಲುವು

  • ಕಾಶ್ಮೀರಿ ಹಿಂದೂಗಳ ನರಸಿಂಹಾರದ ಘಟನೆಗೆ ಒಪ್ಪಿಗೆ

  • ಕಾಶ್ಮೀರ್ ಹಿಂದೂಗಳ ಪರವಾಗಿ ಠರಾವಿಗೆ ಅನುಮೋದನೆ

  • ‘ದ ಕಶ್ಮೀರ್ ಫೈಲ್ಸ್’ನ ಅಭಿನಂದಿಸಿದರು

  • ಈ ರೀತಿ ನಿಲುವನ್ನು ಭಾರತೀಯ ಸಂಸತ್ತಿನಲ್ಲಿ ತೆಗೆದುಕೊಳ್ಳಬೇಕು, ಎಂದು ಹಿಂದೂಗಳ ಅಪೇಕ್ಷೆಯಾಗಿದೆ ! 
  • ಭಾರತದಲ್ಲಿನ ಕಾಂಗ್ರೆಸ್ ಪಕ್ಷ ಕಾಶ್ಮೀರಿ ಹಿಂದೂಗಳ ನರಸಂಹಾರದ ಸತ್ಯವನ್ನು ಮುಚ್ಚಿ ಹಾಕಿತ್ತು, ಆದರೆ ಅಮೇರಿಕಾದಲ್ಲಿನ ಒಂದು ರಾಜ್ಯದ ಸಂಸದ ಕಾಶ್ಮೀರಿ ಹಿಂದೂಗಳ ಪರವಾಗಿ ದೃಢ ನಿಂತಿದೆ. ಇದು ಕಾಂಗ್ರೆಸ್ಸಿಗೆ ನಾಚಿಕೆಗೇಡು ! 
  • ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಒಬ್ಬ ರಾಜಕಾರಣಿಯೂ ಇಂದಿಗೂ ಸಹ ಈ ಘಟನೆಯ ವಿಚಾರಣೆ ನಡೆಸಲು ಒತ್ತಾಯಿಸುತ್ತಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಆದ್ದರಿಂದ ಹಿಂದೂಗಳೇ ಇನ್ನು ಮುಂದೆ ಕಾಶ್ಮೀರಿ ಹಿಂದೂಗಳಿಗೆ ನ್ಯಾಯ ಕೊಡಿಸುವುದರಲ್ಲಿ ಮುಂದಾಳತ್ವ ವಹಿಸಬೇಕು !

ನವದೆಹಲಿ – ಕಾಶ್ಮೀರ ಕಣಿವೆಯಲ್ಲಿ ೧೯೯೦ ರ ದಶಕದಲ್ಲಿ ನಡೆದಿದ್ದ ಕಾಶ್ಮೀರಿ ಹಿಂದೂಗಳ ನರಸಂಹಾರ ಆಧಾರಿತ ‘ದ ಕಶ್ಮೀರಿ ಫೈಲ್ಸ್’ ಈ ಚಲನಚಿತ್ರದ ಪ್ರಭಾವ ಕೇವಲ ಭಾರತದಲ್ಲಿ ಅಷ್ಟೇ ಅಲ್ಲದೆ, ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತಿದೆ. ಅಮೇರಿಕಾದ ರ್ಹೊಡ ಐಲ್ಯಾಂಡ್ ಸಂಸತ್ತಿನಲ್ಲಿ ಕಾಶ್ಮೀರಿ ಹಿಂದೂಗಳ ಪರವಾಗಿ ಠರಾವನ್ನು ಅನುಮೋದಿಸಿದೆ. ಇಸ್ಲಾಮಿ ಗುಂಪುಗಳಿಂದ ಕಾಶ್ಮೀರಿ ಹಿಂದೂಗಳ ನರಸಂಹಾರ ಮಾಡಿರುವ ಘಟನೆಗೆ ಅವರು ಒಪ್ಪಿಗೆಯನ್ನೂ ನೀಡಿದ್ದಾರೆ. ಕಾಶ್ಮೀರಿ ಹಿಂದೂಗಳ ಮೇಲಿನ ದೌರ್ಜನ್ಯ ಎಲ್ಲರೆದುರು ತರುವ ‘ದ ಕಶ್ಮೀರ್ ಫೈಲ್ಸ್’ ನ ಈ ಸಂಸತ್ತಿನಲ್ಲಿ ಅಭಿನಂದಿಸಿದ್ದಾರೆ, ಎಂದು ‘ದ ಕಶ್ಮೀರಿ ಫೈಲ್ಸ್’ನ ನಿರ್ದೇಶಕ ವಿವೇಕ ಅಗ್ನಿಹೋತ್ರಿ ಇವರು ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಈ ಸಂಧರ್ಭದಲ್ಲಿ ‘ಗ್ಲೋಬಲ್ ಕಾಶ್ಮೀರಿ ಪಂಡಿತ ಡೈಯಸ್ಪೊರಾ’ದ ಅಧ್ಯಕ್ಷ ಡಾ. ಸುರಿಂದರ್ ಕೌಲ ಉಪಸ್ಥಿತರಿದ್ದರು.

ಅಮೇರಿಕಾದ ಒಂದು ಅಭಿವೃದ್ಧಿಹೊಂದಿದ ರಾಜ್ಯವಾಗಿರುವ ರ್ಹೊಡ ಐಲ್ಯಾಂಡ್‌ವು, ‘೧೯೯೦ ರ ದಶಕದಲ್ಲಿ ಇಸ್ಲಾಮಿ ಗುಂಪಿನಿಂದ ನಡೆಸಿರುವ ೫ ಲಕ್ಷ ಕಾಶ್ಮೀರಿ ಹಿಂದೂಗಳ ನರಸಂಹಾರದ ಚಿತ್ರಣವು ಈ ಚಲನಚಿತ್ರದಲ್ಲಿ ಮಾಡಲಾಗಿದೆ. ಈ ಮೂಲಕ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆ ಮತ್ತು ಕಟ್ಟರವಾದಿಗಳ ವಿಷಯದ ಮಾಹಿತಿ ಇದರಲ್ಲಿ ಎತ್ತಿ ತೋರಿಸಲಾಗಿದೆ. ಕಾಶ್ಮೀರಿ ಹಿಂದೂಗಳು ನಿರಾಶ್ರಿತರಂತೆ ಜೀವನ ಕಳೆಯಲು ಅನಿವಾರ್ಯಗೊಳಿಸಲಾಗಿದೆ. ಈ ಸಮಯದಲ್ಲಿ ಸಂಸತ್ತಿನಲ್ಲಿ ‘ದ ಕಶ್ಮೀರಿ ಫೈಲ್ಸ್’ನ ನಿರ್ದೇಶಕ ವಿವೇಕ ಅಗ್ನಿಹೋತ್ರಿ ಇವರನ್ನು ಅಭಿನಂದಿಸಿದರು.