ಉಕ್ರೇನನಲ್ಲಿರುವ ಯುರೋಪನ ಎಲ್ಲಕ್ಕಿಂತ ದೊಡ್ಡ ಸ್ಟೀಲ್ ಯೋಜನೆಯನ್ನು ರಷ್ಯಾದ ಆಕ್ರಮಣದಿಂದ ಧ್ವಂಸ !

ಕೀವ (ಉಕ್ರೇನ) – ಉಕ್ರೇನನ ಮಾರಿಯುಪೋಲನಲ್ಲಿರುವ ಯುರೋಪಿನ ಎಲ್ಲಕ್ಕಿಂತ ದೊಡ್ಡ ಸ್ಟೀಲ್ ಯೋಜನೆಯನ್ನು ವಶಪಡಿಸಿಕೊಳ್ಳುವುದಕ್ಕಾಗಿ ರಷ್ಯಾದ ಸೈನ್ಯವು ಪ್ರಯತ್ನಿಸುತ್ತಿದೆ. ರಷ್ಯಾದ ಸೈನ್ಯದ ಆಕ್ರಮಣದಲ್ಲಿ ಈ ಯೋಜನೆ ಸಂಪೂರ್ಣವಾಗಿ ಧ್ವಂಸವಾಗಿದೆ. ಉಕ್ರೇನನ ಶಾಸಕ ಲೆಸ್ಯಾ ವಾಸಿಲೆಂಕೋರವರು ಈ ಬಗ್ಗೆ ಟ್ವೀಟ್ ಮಾಡಿ, ಈ ಯೋಜನೆ ಧ್ವಂಸ ಆಗುವುದು ಇದು ಉಕ್ರೇನಗೆ ದೊಡ್ಡ ಆರ್ಥಿಕ ಹಾನಿಯಾಗಿದೆ. ಹಾಗೆಯೇ ಪರಿಸರದ ದೊಡ್ಡ ಹಾನಿಯಾಗಿದೆ ಎಂದು ಹೇಳಿದೆ.