ಸ್ವಾರ್ಥ ಸಾಧಿಸಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಇವರಿಂದ ಭಾರತದ ಪ್ರಶಂಸೆ !

ಭಾರತ ಯಾವಾಗಲೂ ಸ್ವತಂತ್ರ ವಿದೇಶಾಂಗ ನೀತಿಯನ್ನು ಕಾಯ್ದುಕೊಂಡಿದೆ !

ಇಮ್ರಾನ್ ಖಾನ್ ಭಾರತವನ್ನು ಮನಃಪೂರ್ವಕವಾಗಿ ಹೊಗಳುತ್ತಿದ್ದಾರೆ ಎಂದು ಯಾರೂ ಭಾವಿಸಬಾರದು. ಪಾಕಿಸ್ತಾನದ ದಿವಾಳಿಯ ಅಂಚಿನಲ್ಲಿದ್ದು, ಅದರಿಂದ ಹೊರಬರಲು ಭಾರತದೊಂದಿಗೆ ವ್ಯಾಪಾರ ಮಾಡಲು ಬಯಸುತ್ತಿದೆ. ಅದಕ್ಕಾಗಿಯೇ ಖಾನ್ ಭಾರತದೊಂದಿಗೆ ಪಿಸುಮಾತನಾಡಲು ಪ್ರಯತ್ನಿಸುತ್ತಿದ್ದಾರೆ !- ಸಂಪಾದಕರು 

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್

ಇಸ್ಲಾಮಾಬಾದ್ (ಪಾಕಿಸ್ತಾನ) – `ಕ್ವಾಡ್’ ದೇಶಗಳ ಸಂಘಟನೆಯ ಸದಸ್ಯವಾಗಿದ್ದ ಭಾರತವು ಅಮೇರಿಕಾದ ನಿರ್ಬಂಧಗಳಿಗೆ ಹೆದರದೆ ರಷ್ಯಾದಿಂದ ಕಚ್ಚಾತೈಲವನ್ನು ಆಮದು ಮಾಡಿಕೊಂಡಿದೆ. ಭಾರತ ಯಾವಾಗಲೂ ಸ್ವತಂತ್ರ ವಿದೇಶಾಂಗ ನೀತಿಯನ್ನು ಕಾಯ್ದುಕೊಂಡು ಬಂದಿದೆ. ಭಾರತದ ವಿದೇಶಾಂಗ ನೀತಿಯು ಪಾಕಿಸ್ತಾನಕ್ಕಿಂತ ಉತ್ತಮವಾಗಿದೆ, ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭಾರತವನ್ನು ಪ್ರಶಂಸಿಸುತ್ತಾ ಹೇಳಿದ್ದಾರೆ. ಅವರು ಖೈಬರ್ ಪಖ್ತೂಂಖ್ವಾ ಪ್ರಾಂತ್ಯದಲ್ಲಿ ಜರುಗಿದ ಸಾರ್ವಜಿನಿಕ ಸಭೆಯಲ್ಲಿ ಮಾತನಾಡುತ್ತಿದ್ದರು.