ರಷ್ಯಾ ಬಳಿ ಕೇವಲ 10 ದಿನಗಳು ಸಾಕಾಗುವಷ್ಟು ಮಾತ್ರ ಮದ್ದುಗುಂಡು ಉಳಿದಿದೆ ! – ಅಮೇರಿಕೆಯ ಮಾಜಿ ಸೇನಾ ಮುಖ್ಯಸ್ಥರ ಹೇಳಿಕೆ

ವಾಷಿಂಗ್ಟನ್(ರಷ್ಯಾ) – ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧಕ್ಕೆ 20 ದಿನಗಳು ಕಳೆದರೂ ಇನ್ನೂ ನಿಂತಿಲ್ಲ. ಈ ಹಿನ್ನೆಲೆಯಲ್ಲಿ `ರಷ್ಯಾದ ಬಳಿ ಕೇವಲ 10 ದಿನಗಳ ಮಾತ್ರ ಉಳಿದಿವೆ. ಈ 10 ದಿನಗಳಲ್ಲಿ ಉಕ್ರೇನ್ ಸಂಘರ್ಷವನ್ನು ಎದುರಿಸಿದರೆ ರಷ್ಯಾ ತಾನಾಗಿಯೇ ಇಕ್ಕಟ್ಟಿಗೆ ಸಿಲುಕುತ್ತದೆ, ಎಂದು ಅಮೇರಿಕಾದ ಮಾಜಿ ಸೇನಾ ಮುಖ್ಯಸ್ಥ ಬೆನ್ ಹೊಜೆಸ್ ಇವರು ಹೇಳಿದ್ದಾರೆ.

ಬೆನ್ ಹೊಜೆಸ್ ಅವರು, ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವು ತ್ವರಿತ ಸೈನ್ಯ ಕಾರ್ಯಾಚರಣೆಯಾಗಿತ್ತು. ರಷ್ಯಾಗೆ ಕೆಲವೇ ಗಂಟೆಗಳಲ್ಲಿ ಉಕ್ರೇನ್ ವಶಪಡಿಸಿಕೊಳ್ಳಲು ಬಯಸಿತ್ತು; ಆದರೆ ಉಕ್ರೆನ್‍ನ ಸ್ಯೆನ್ಯದ ಬಲವಾದ ಪ್ರತಿರೋಧದಿಂದಾಗಿ, ಇದು ಯುದ್ಧವಾಗಿ ಪರಿಣಮಿಸಿತು. ಯುದ್ಧವನ್ನು ಮುಂದುವರಿಸಲು ರಷ್ಯಾದ ಬಳಿ ಸಾಕಷ್ಟು ಮದ್ದುಗುಂಡುಗಳಿಲ್ಲ. ಅದರ ಶೇಖರಣೆ ಮುಗಿಯುತ್ತಾ ಬಂದಿದೆ. ಇಷ್ಟು ಬೇಗನೆ ಹೊಸ ಮದ್ದುಗುಂಡುಗಳನ್ನು ತಯಾರಿಸುವದಾಗಲಿ ಅಥವಾ ಲಭ್ಯವಾಗುವಂತೆ ಮಾಡುವದಾಗಲಿ ಯಾವುದೇ ಸಾಧ್ಯತೆ ಇಲ್ಲ. ಮುಂದಿನ 10 ದಿನಗಳಲ್ಲಿ ಈ ಮದ್ದುಗುಂಡುಗಳು ಮುಗಿಯುತ್ತವೆ ಮತ್ತು ರಷ್ಯಾ ಯುದ್ಧ ಮಾಡುವ ಸ್ಥಿತಿಯಲ್ಲಿರುವದಿಲ್ಲ. ಮತ್ತೊಂದೆಡೆ, ಐರೋಪ್ಯ ರಾಷ್ಟ್ರಗಳು ಮತ್ತು ಅಮೇರಿಕಾವು ಉಕ್ರೇನ್‍ಗೆ ಶಸ್ತ್ರಾಸ್ತ್ರಗಳನ್ನು ಪೂರೈಸಲು ಪ್ರಾರಂಭಿಸಿವೆ. ಇದರಿಂದ ಉಕ್ರೇನ್‍ನ ಸೇನೆಯು ತನ್ನ ಯುದ್ಧವನ್ನು ಮುಂದುವರೆಸಲಿದೆ. ಅಮೇರಿಕಾವು ಇದಕ್ಕಾಗಿ ಉಕ್ರೇನ್‍ಗೆ ಹಣದ ವ್ಯವಸ್ಥೆಯನ್ನು ಮಾಡಿದೆ. ಈ ನಿಧಿಯಿಂದಾಗಿ, ಉಕ್ರೇನ್ ಪ್ರತ್ತೇಕ ದೇಶದಿಂದ ಮಾರಕ ಶಸ್ತ್ರಾಸ್ತ್ರಗಳನ್ನು ಖರಿದಿಸಲು ಸಾಧ್ಯವಾಗುತ್ತದೆ.

ನಾವು ಚೀನಾದ ಬಳಿ ಸಹಾಯ ಕೇಳಲಿಲ್ಲ ! – ರಷ್ಯಾದ ಸ್ಪಷ್ಟಿಕರಣ

ರಷ್ಯಾ ಚೀನಾದ ಬಳಿ ಸೈನ್ಯದ ನೆರವು ಕೋರಿದೆ ಎಂದು ವಾರ್ತೆ ಪ್ರಸಾರವಾಗಿತ್ತು. ಅದಕ್ಕೆ ರಷ್ಯಾ ಸ್ಪಷ್ಟೀಕರಣ ನೀಡುತ್ತಾ `ನಾವು ಚೀನಾದ ಬಳಿ ಸಹಾಯವನ್ನು ಕೇಳಿಲ್ಲ’, ಎಂದು ಹೇಳಿದೆ, ಇದು ಅಮೇರಿಕಾದ ಅಪಪ್ರಚಾರವಾಗಿದೆ, ಎಂದು ರಷ್ಯಾ ಹೇಳಿದೆ. ಅಮೆರಿಕಾವು ಮೊದಲೆ ಸ್ಪಷ್ಟ ಮಾಡಿದ್ದೆನಂದರೆ, ಚೀನಾವು ರಷ್ಯಾಗೆ ಸಹಾಯ ಮಾಡಿದರೆ, ಚೀನಾ ವಿರುದ್ಧ ಅಮೆರಿಕೆಯು ಕಠಿಣ ಕ್ರಮ ಕ್ಯಗೊಳ್ಳಲಿದೆ ಎಂದು ಹೇಳಿದೆ.