ಹೋಳಿಯ ಮೊದಲನೇ ದಿನದ ಸಂಜೆಯಂದು ಬಾಂಗ್ಲಾದೇಶದಲ್ಲಿ ೨೦೦ಕ್ಕೂ ಹೆಚ್ಚಿನ ಮತಾಂಧರಿಂದ ಇಸ್ಕಾನ ದೇವಸ್ಥಾನ ಧ್ವಂಸ

ಪೊಲೀಸರಿಗೆ ಘಟನೆಯ ಬಗ್ಗೆ ತಿಳಿಸಿದ್ದರೂ ಪೊಲೀಸರು ನಿಷ್ಕ್ರೀಯರಾಗಿದ್ದರು !

ಬಾಂಗ್ಲಾದೇಶ, ಪಾಕಿಸ್ತಾನ ಇತ್ಯಾದಿ ಇಸ್ಲಾಮಿ ದೇಶಗಳಲ್ಲಿ ಹಿಂದೂಗಳ ಸ್ಥಿತಿಯು ನಿನ್ನೆ, ಇಂದು ಹಾಗೂ ನಾಳೆಯೂ ಇರಲಿದೆ. ಈ ಸ್ಥಿತಿಯನ್ನು ಬದಲಾಯಿಸಲು ಅಲ್ಲಿನ ಹಿಂದೂಗಳಿಗೆ ಸಾಧ್ಯವಿಲ್ಲ. ಅದಕ್ಕಾಗಿ ಭಾರತವು ಮುಂದಾಳತ್ವವನ್ನು ವಹಿಸುವುದು ಆವಶ್ಯಕವಾಗಿದೆ. ಹಿಂದೂ ರಾಷ್ಟ್ರದ ಸ್ಥಾಪನೆಯಾದಾಗಲೇ ಇದು ಸಾಧ್ಯವಿದೆ, ಇದು ಸತ್ಯವೇ ಆಗಿದೆ !

ಭಾರತದಲ್ಲಿಯೂ ಮತಾಂಧರು ಹಿಂದೂಗಳ ಮೇಲೆ ಆಕ್ರಮಣ ಮಾಡಿದಾಗ ಪೊಲೀಸರು ನಿಷ್ಕ್ರೀಯರಾಗಿರುತ್ತಾರೆ, ಅಲ್ಲಿ ಮಸಲ್ಮಾನರು ಬಹುಸಂಖ್ಯಾತ ಬಾಂಗ್ಲಾದೇಶದಲ್ಲಿನ ಪೊಲೀಸರು ನಿಷ್ಕ್ರೀಯರಾಗಿದ್ದರೆ ಅದರಲ್ಲಿ ಆಶ್ಚರ್ಯವೇನಿದೆ ?

ಢಾಕಾ (ಬಾಂಗ್ಲಾದೇಶ) – ಹೋಳಿಯ ಮೊದಲನೇ ದಿನ ಸಂಜೆ ಇಲ್ಲಿನ ‘೨೨೨ ಲಾಲ ಮೋಹನ ಸಾಹಾ ಮಾರ್ಗ’ದಲ್ಲಿನ ಇಸ್ಕಾನಿನ ರಾಧಾಕಾಂತ ದೇವಸ್ಥಾನದ ಮೇಲೆ ೨೦೦ಕ್ಕೂ ಹೆಚ್ಚು ಮತಾಂಧರು ‘ಅಲ್ಲಾ ಹು ಅಕ್ಬರ; (ಅಕಬರನು ಮಹಾನನಿದ್ದಾನೆ) ಮತ್ತು ‘ನಾರಾ- ಎ- ತಕದೀರ’ (ಅಲ್ಲಾ ಎಲ್ಲಕ್ಕಿಂತ ದೊಡ್ಡವನು) ಎಂಬ ಘೋಷಣೆಗಳನ್ನು ನೀಡುತ್ತ ಆಕ್ರಮಣಗಳನ್ನು ಮಾಡಿ ಧ್ವಂಸ ಮಾಡಿದರು. ಅದರೊಂದಿಗೆ ದೇವಸ್ಥಾನದ ಬೆಲೆಬಾಳುವ ವಸ್ತುಗಳನ್ನೂ ದೋಚಲಾಗಿದೆ. ಈ ಆಕ್ರಮಣದಲ್ಲಿ ಅನೇಕ ಹಿಂದೂಗಳು ಗಾಯಗೊಂಡಿದ್ದಾರೆ. ಇದರಲ್ಲಿ ಸುಮಂತ್ರ ಚಂದ್ರ ಶ್ರವಣ, ನಿಹಾರ ಹಲದರ, ರಾಜೀವ ಭದ್ರ ಮುಂತಾದವರೂ ಸೇರಿದ್ದರು. ಈ ಘಟನೆಯು ಮಾರ್ಚ ೧೭ರ ಸಂಜೆ ೭ ಗಂಟೆಗೆ ನಡೆದಿದೆ. ಮತಾಂಧರ ಗುಂಪಿನ ನೇತೃತ್ವವನ್ನು ವಹಿಸಿದ್ದ ಹಾಜೀ ಶಫೀಉಲ್ಲಾ ವಹಿಸಿದ್ದನು ಎಂಬುದನ್ನು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇಲ್ಲ ಸದ್ಯ ಒತ್ತಡದ ಸ್ಥಿತಿಯಿದೆ. ಇದರಿಂದಾಗಿ ದೇವಸ್ಥಾನದ ಪರಿಸರದಲ್ಲಿ ಪೊಲೀಸರ ಬಂದೋಬಸ್ತು ಇಡಲಾಗಿದೆ. ದರ್ಶನಕ್ಕಾಗಿ ಬಂದಂತಹ ಭಾವಿಕರೂ ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಆದರೆ ಪೊಲೀಸರು ಯಾವುದೇ ಕಾರ್ಯಾಚರಣೆಯನ್ನು ಮಾಡಲಿಲ್ಲ,ಎಂದು ಅವರು ಹೇಳಿದರು.

ಪೊಲೀಸರು ಹಿಂದೂಗಳನ್ನೇ ಥಳಿಸಿದರು !

ಈ ಬಗ್ಗೆ ಆಕ್ರಮಣದಲ್ಲಿ ಗಾಯಗೊಂಡ ನಿಹಾಲ ಹಲದರರವರು ‘ಈ ಆಕ್ರಮಣದ ಮುಖ್ಯ ಸೂತ್ರಧಾರ ಮಹಮ್ಮದ ಇಸರಾಫ ಸೂಫಿ (೩೯ ವರ್ಷ) ಮತ್ತು ಹಾಜೀಸಫೀಊಲ್ಲಾಹ (೬೨ವರ್ಷ)ಆಗಿದ್ದಾರೆ. ಮತಾಂಧರ ಕೈಯಲ್ಲಿ ಲಾಠಿ, ಕಬ್ಬಿಣದ ಸರಳುಗಳು ಹಾಗೂ ಇತರ ಶಸ್ತ್ರಗಳಿದ್ದವು. ಆಕ್ರಮಣದ ನಂತರ ಭಾವಿಕರು ದೇವಸ್ಥಾನದ ಮುಖ್ಯದ್ವಾರವನ್ನು ಮುಚ್ಚಲು ಪ್ರಯತ್ನಿಸಿದರು. ಅವರು ಪೊಲೀಸರನ್ನು ಕರೆದರು; ಆದರೆ ಪೊಲೀಸರು ಬಂದನಂತರ ನಿಹಾಲ ಹಲದರರವರನ್ನೇ ಹೊಡೆದರು ಹಾಗೂ ಅವರ ಮೊಬೈಲನ್ನು ಜಪ್ತು ಮಾಡಿದರು. ಈ ಆಕ್ರಮಣದ ಮೂಲಕ ೫ ಲಕ್ಷ ರೂಪಾಯಿಗಳನ್ನು ದೋಚಿದರು.

ಇಸ್ಕಾನ ಇಂಡಿಯಾ ಈ ಘಟನೆಯನ್ನು ನಿಷೇಧಿಸಿದೆ !

‘ಇಸ್ಕಾನ ಇಂಡಿಯಾ’ದ ಉಪಾಧ್ಯಕ್ಷರಾದ ರಾಧಾರಮಣ ದಾಸರು ಟ್ವೀಟ್‌ ಮಾಡಿ ಈ ಘಟನೆಯನ್ನು ನಿಷೇಧಿಸಿದ್ದಾರೆ. ಅವರು ‘ಡೋಲ ಯಾತ್ರೆ ಮತ್ತು ಹೋಳಿ ಉತ್ಸವದ ಮೊದಲನೇ ಸಂಜೆಯ ಈ ಅತ್ಯಂತ ದುರದೃಷ್ಟಕರ ಘಟನೆಯಾಗಿದೆ. ಕೆಲವು ದಿನಗಳ ಹಿಂದೆಯೇ ಸಂಯುಕ್ತ ರಾಷ್ಟ್ರಗಳು ಮಾರ್ಚ ೧೫ನ್ನು ‘ಇಸ್ಲಾಮೋಫೋಬಿಯಾ’ದೊಂದಿಗೆ (ಇಸ್ಲಾಮದ್ವೇಷದೋಂದಿಗೆ) ಹೋರಾಡಲು“ಅಂತರಾಷ್ಟ್ರೀಯ ದಿನ’ ಎಂದು ಘೋಷಿಸಲು ಸಮ್ಮತಿಸಿದೆ. ನಮಗೆ ಸಾವಿರಾರು ಅಸಹಾಯಕ ಬಾಂಗ್ಲಾದೇಶಿ ಮತ್ತು ಪಾಕಿಸ್ತಾನಿ ಅಲ್ಪಸಂಖ್ಯಾತರ ದುಃಖದ ಬಗ್ಗೆ ಇದೇ ಸಂಯುಕ್ತರಾಷ್ಟ್ರವು ಮೂಕವಾಗಿರುವುದನ್ನು ನೋಡಿದಾಗ ಆಶ್ಚರ್ಯವೆನಿಸುತ್ತದೆ.. ಇದರಿಂದ ಅನೇಕ ಹಿಂದೂ ಅಲ್ಪಸಂಖ್ಯಾತರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ, ಸಂಪತ್ತುಕಳೆದ ಕೊಂಡಿದ್ದಾರೆ, ಹಿಂದೂ ಮಹಿಳೆಯರ ಮೇಲೆ ಬಲಾತ್ಕಾರವಾಗಿದೆ ಆದರೆ ಸಂಯುಕ್ತರಾಷ್ಟ್ರರಗಳು ‘ಇಸ್ಲಾಮೋಫೋಬಿಯಾ’ದ ಬಗ್ಗೆವಿಚಾರ ಮಾಡುತ್ತಿವೆ. ’ಎಂದು ಹೇಳಿದ್ದಾರೆ.

ಬಾಂಗ್ಲಾದೇಶದಲ್ಲಿ ಈ ಹಿಂದೆಯೂ ಮಂದಿರಗಳು ಹಾಗೂ ಹಿಂದೂಗಳ ಮೇಲಾಗಿದೆ ಆಕ್ರಮಣಗಳು !

ಈ ಮೊದಲೂ ಮತಾಂಧರಿಂದ ಬಾಂಗ್ಲಾದೇಶದಲ್ಲಿ ದೇವಸ್ಥಾನಗಳನ್ನು ಗುರಿಯಾಗಿಸಲಾಗಿದೆ. ಕಳೆದ ವರ್ಷ ಅಕ್ಟೋಬರ ತಿಂಗಳಿನಲ್ಲಿ ನವರಾತ್ರೋತ್ಸವದ ಸಮಯದಲ್ಲಿ ದೇಶದಾದ್ಯಂತ ಹಿಂದೂಗಳ ಮೇಲೆ ಹಾಗೂ ದೇವಸ್ಥಾನಗಳ ಮೇಲೆ ಆಕ್ರಮಣಗಳಾಗಿದ್ದವು. ಚೌಮುನಿಯಲ್ಲಿನ ಇಸ್ಕಾನಿನ ಶ್ರೀ ಶ್ರೀ ರಾಧಾಕೃಷ್ಣ ಗೌರಾ ನಿತ್ಯಾನಂದ ದೇವಸ್ಥಾನದ ಮೇಲೆಯೂ ಮತಾಂಧರು ಆಕ್ರಮಣ ಮಾಡಿ ಅದನ್ನು ಧ್ವಂಸ ಮಾಡಿದ್ದರು. ಇದರಲ್ಲಿ ೫೦ಕ್ಕೂ ಹೆಚ್ಚಿನ ಜನರ ಮೃತ್ಯುವಾಗಿರುವ ಮಾಹಿತಿಯು ಬೆಳಕಿಗೆ ಬಂದಿದೆ. ಇದರೊಂದಿಗೆ ಇತರ ಅನೇಕ ನಗರಗಳಲ್ಲಿ ದೇವಸ್ಥಾನಗಳ ಮೇಲೆಯೂ ಆಕ್ರಮಣಗಳಾಗಿದ್ದವು.