ದೇವರಿಗೋಸ್ಕರವಾದರೂ ಈ ಹತ್ಯಾಕಾಂಡ ನಿಲ್ಲಿಸಿ ! – ಪೋಪ್ ಫ್ರಾನ್ಸಿಸ್

ರಷ್ಯಾವು ಉಕ್ರೇನ್ ಮೇಲೆ ನಡೆಸಿದ ದಾಳಿಯ ನಂತರ ಪೋಪ ಇವರಿಂದ ಭಾವನಾತ್ಮಕ ಆಕ್ರೋಶ !

ಪೋಪ್ ಫ್ರಾನ್ಸಿಸ್

ರೋಮ – ಪೋಪ್ ಫ್ರಾನ್ಸಿಸ್ ಇವರು ಮತ್ತೊಮ್ಮೆ ರಷ್ಯಾವು ಉಕ್ರೇನ್ ಮೇಲೆ ನಡೆದಿರುವ ದಾಳಿಯನ್ನು ನಿಷೇಧಿಸಿದ್ದಾರೆ. `ಮಕ್ಕಳ ಆಸ್ಪತ್ರೆಯ ಮೇಲೆ ಮತ್ತು ಜನಸಾಮಾನ್ಯ ಸ್ಥಳಗಳಲ್ಲಿ ಬಾಂಬ್ ಎಸೆಯುವುದು ಇದು ಪೈಶಾಚಿಕ ಕೃತ್ಯವಾಗಿದೆ. ದೇವರಿಗಾಗಿಯಾದರೂ ಈ ಹತ್ಯಾಕಾಂಡವನ್ನು ನಿಲ್ಲಿಸಿ’, ಎಂದು ರಷ್ಯಾದ ವಿರುದ್ಧ ಫ್ರಾನ್ಸಿಸ್ ಇವರು ಭಾವನಾತ್ಮಕ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ರಷ್ಯಾ ಮತ್ತು ಉಕ್ರೇನ್ ಇವರ ಸೈನ್ಯದಲ್ಲಿ ಸತತ 18 ನೇ ದಿನಗಳಿಂದ ಘರ್ಷಣೆ ನಡೆಯುತ್ತಿರುವಾಗ ಅವರು ಹೇಗೆ ಹೇಳಿಕೆ ನೀಡಿದ್ದಾರೆ. ಪೋಪ್ ತಮ್ಮ ಮಾತನ್ನು ಮುಂದುವರೆಸುತ್ತಾ, “ಉಕ್ರೇನ್‍ನಲ್ಲಿನ ನಗರಗಳು ಸ್ಮಶಾನ ಭೂಮಿಯ ರೂಪಗೊಳ್ಳುವ ಅಪಾಯವಿದೆ.” ರಷ್ಯಾಗೆ ಉಕ್ರೇನಿನ ಮೇಲಿನ ದಾಳಿ ತಕ್ಷಣವೇ ನಿಲ್ಲಿಸಬೇಕೆಂಬ ಆವಾಹನೆ ಪೋಪ್ ಇವರು ಸತತ ಎರಡನೆಯ ಬಾರಿ ಮಾಡುತ್ತಿದ್ದಾರೆ. ಅವರು ಈ ದಾಳಿಯನ್ನು `ಶಸ್ತ್ರಾಸ್ತ್ರ ಸಹಿತ ಆಕ್ರಮಣ’ವೆಂದು ಸಂಬೋಧಿಸಿದ್ದಾರೆ. `ಉಕ್ರೇನಿನಲ್ಲಿ ರಕ್ತ ಮತ್ತು ಕಣ್ಣೀರಿನ ನದಿಗಳು ಹರಿಯುತ್ತಿವೆ. ಇದು ಕೇವಲ ಸೈನ್ಯ ಕಾರ್ಯಾಚರಣೆಯಲ್ಲದೇ, ಇದು ಒಂದು ಯುದ್ಧವಾಗಿದೆ, ಅದು ನಮ್ಮನ್ನು ಸಾವು, ವಿನಾಶ ಮತ್ತು ದುಃಖದ ದಿಕ್ಕಿನತ್ತ ಕೊಂಡೊಯ್ಯುತ್ತಿದೆ’, ಎಂದು ಅವರು ಹೇಳುತ್ತಿದ್ದರು.