ಕಾಶ್ಮೀರಿ ಹಿಂದುಗಳಿಗೆ ಕಾಶ್ಮೀರದಲ್ಲಿ ವಾಸಿಸುವ ಪೂರ್ಣ ಅಧಿಕಾರ ಸಿಗಬೇಕು ! – ಲೇಖಕಿ ತಸ್ಲೀಮಾ ನಸ್ರೀನ್

ನವದೆಹಲಿ – ಬಾಂಗ್ಲಾದೇಶದಲ್ಲಿನ ಪ್ರಸಿದ್ಧ ಲೇಖಕಿ ಮತ್ತು ಪ್ರಸ್ತುತ ಮತಾಂಧರ ಭಯದಿಂದ ವಿದೇಶದಲ್ಲಿ ವಾಸಿಸುತ್ತಿರುವ ತಸ್ಲಿಮಾ ನಸ್ರೀನ್ ಇವರು ‘ದ ಕಶ್ಮೀರಿ ಫೈಲ್ಸ್’ ಈ ಚಲನಚಿತ್ರದ ಕುರಿತು ಟಿಪ್ಪಣಿ ಮಾಡಿದ್ದಾರೆ. ಚಲನಚಿತ್ರ ನೋಡಿ ಅವರು ಟ್ವೀಟ್ ಮಾಡಿ, ಚಲನಚಿತ್ರದಲ್ಲಿ ತೋರಿಸಿರುವ ಘಟನೆಗಳು ಶೇ. ೧೦೦ ರಷ್ಟು ಸತ್ಯವಾಗಿವೆ, ಅದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ ಮತ್ತು ಯಾವುದೇ ಅರ್ಧಸತ್ಯ ಇಲ್ಲದಿದ್ದರೆ ಕಶ್ಮೀರಿ ಪಂಡಿತರಿಗೆ ಇದು ಬಹಳ ದುಃಖದ ವಿಷಯವಾಗಿದೆ. ಅವರಿಗೆ ಕಾಶ್ಮೀರದಲ್ಲಿ ವಾಸಿಸುವ ಪೂರ್ಣ ಅಧಿಕಾರ ಇದ್ದೂ ಅವರಿಗೆ ಅದು ಸಿಗಬೇಕು.
ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಬಾಂಗ್ಲಾದೇಶದಲ್ಲಿ ನಡೆದಿರುವ ಬಂಗಾಲಿ ಹಿಂದೂಗಳ ನರಸಂಹಾರದ ಮೇಲೆ ಬೆಳಕು ಚೆಲ್ಲುವ ಚಲನಚಿತ್ರ ಇಲ್ಲಿಯವರೆಗೆ ಯಾರು ಏಕೆ ನಿರ್ಮಾಣ ಮಾಡಿಲ್ಲ ? ನನಗೆ ಇದು ತಿಳಿಯುತ್ತಿಲ್ಲ ಎಂದು ಹೇಳಿದರು. (ಕಾಶ್ಮೀರಿ ಹಿಂದೂಗಳ ಮೇಲೆ ನಡೆದಿರುವ ಭೀಕರ ದೌರ್ಜನ್ಯದ ವಿಷಯವಾಗಿ ಸಂದೇಹ ವ್ಯಕ್ತಪಡಿಸಿರುವ ತಸ್ಲೀಮಾ ನಸ್ರೀನ್ ಇವರು ಮೊದಲು ಸಂಪೂರ್ಣ ಇತಿಹಾಸ ತಿಳಿದುಕೊಂಡು ಅಭಿಪ್ರಾಯ ವ್ಯಕ್ತ ಪಡಿಸಬೇಕು. ಕಾಶ್ಮೀರಿ ಹಿಂದುಗಳ ಮೇಲೆ ನಡೆದಿರುವ ದೌರ್ಜನ್ಯದ ಬಗ್ಗೆ ಸಂದೇಹ ವ್ಯಕ್ತಪಡಿಸುವುದು ಅಂದರೆ ಅವರ ಗಾಯದ ಮೇಲೆ ಬರೆ ಎಳೆದಂತೆ ಆಗುವುದು ! – ಸಂಪಾದಕರು)