ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನದ ಸಹಚರನಿಂದ ಭಾರತೀಯ ಹಿಂದೂ ಪ್ರಜೆಯ ಹತ್ಯೆ

ಉತ್ತರಪ್ರದೇಶದ ಜಂಗ ಬಹದ್ದೂರ ಯಾದವ ಕೆಲಸದ ನಿಮಿತ್ತ ಸೌದಿ ಅರೇಬಿಯಾಕ್ಕೆ ತೆರಳಿದಾಗ ಅಲ್ಲಿ ಪಾಕಿಸ್ತಾನಿ ಸಹೋದ್ಯೋಗಿಯು ಹತ್ಯೆ ಮಾಡಿದನು. ಈ ಹತ್ಯೆ ಏಕೆ ಮತ್ತು ಹೇಗೆ ಮಾಡಲಾಯಿತು ಎಂಬುದರ ವಿಸ್ತಾರ ವಿವರ ತಿಳಿದು ಬಂದಿಲ್ಲ.

ಶ್ರೀಲಂಕಾದ ರಾಷ್ಟ್ರಪತಿ ಗೊಟಾಬಾಯ ರಾಜಪಕ್ಷೆ ಜುಲೈ ೧೩ ರಂದು ರಾಜೀನಾಮೆ ನೀಡಲಿದ್ದಾರೆ !

ಶ್ರೀಲಂಕಾದ ರಾಷ್ಟ್ರಪತಿ ಗೊಟಾಬಾಯ ರಾಜಪಕ್ಷೆ ಅವರ ನಿವಾಸದ ಮೇಲೆ ಪ್ರತಿಭಟನಾಕಾರರು ನಿಯಂತ್ರಣ ಪಡೆದ ನಂತರ ಅಲ್ಲಿ ದೊಡ್ಡ ಮೊತ್ತದ ಹಣ ದೊರೆತಿದೆ. ಮತ್ತೊಂದೆಡೆ, ಜುಲೈ ೧೩ ರಂದು ರಾಜಪಕ್ಷೆ ರಾಜೀನಾಮೆ ಘೋಷಿಸಿದ್ದಾರೆ. ಅವರು ಪ್ರಸ್ತುತ ನೌಕಾಪಡೆಯ ಒಂದು ಹಡಗಿನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಆಬೆ ಶಿಂಜೋ ಇವರು ಒಂದು ಧಾರ್ಮಿಕ ಸಂಘಟನೆಯ ಜೊತೆಗೆ ಸಂಬಂಧ ಹೊಂದಿದ್ದರಿಂದ ಹತ್ಯೆ ಮಾಡಲಾಯಿತು

ಕೊಲೆಗಾರನು ಆ ಧಾರ್ಮಿಕ ಸಂಘಟನೆಯನ್ನು ದ್ವೇಷಿಸುತ್ತಿದ್ದ !

ಬಾಂಗ್ಲಾ ದೇಶದ ಮುಸಲ್ಮಾನರು ಹಿಂದೂ ಕುಟುಂಬದವರ ಭೂಮಿ ಕಬಳಿಸಿದ್ದಾರೆ

ಬಾಂಗ್ಲಾ ದೇಶದಲ್ಲಿ ಮಾಗುರಾದಲ್ಲಿ ಒಂದು ಹಿಂದೂ ಕುಟುಂಬದ ಭೂಮಿಯ ಮೇಲೆ ಮುಸಲ್ಮಾನರು ಅತಿಕ್ರಮಣ ನಡೆಸಿ ಅದನ್ನು ಕಬಳಿಸಿದ್ದಾರೆ. ಈ ಹಿಂದೂ ಕುಟುಂಬ ಕಳೆದ ೨೬ ವರ್ಷದಿಂದ ಅಲ್ಲಿ ವಾಸವಾಗಿದ್ದರು. ಏಕುತುಂಬದ ಮಹಿಳೆ ಆತಂಕವಾದಿಗಳು ಅವರ ಮನೆಯ ಮೇಲೆ ದಾಳಿ ನಡೆಸಿದ ಮಾಹಿತಿ ನೀಡಿದರು.

ಪಾಕಿಸ್ತಾನದಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯ ಅಪಹರಣ

ಪಾಕಿಸ್ತಾನದ ಸಿಂಧಪ್ರಾಂತದಲ್ಲಿ ಪಿಸ್ತೂಲಿನ ಭಯ ತೋರಿಸಿ ೧೬ ವರ್ಷದ ಓರ್ವ ಅಪ್ರಾಪ್ತ ಹಿಂದೂ ಹುಡುಗಿಯ ಅಪಹರಣ ಮಾಡಲಾಗಿದೆ. ಸಂತ್ರಸ್ತ ಹುಡುಗಿಗೆ ತಕ್ಷಣವೇ ಬಿಡುಗಡೆ ಮಾಡದೇ ಇದ್ದಲ್ಲಿ ಆಕೆಯನ್ನು ಬಲವಂತವಾಗಿ ಮತಾಂತರ ಮಾಡಿ ಅಪಹರಣ ಮಾಡಿದವನ ಜೋತೆ ನಿಕಾಹ ಮಾಡಲಾಗುವುದು

ಶ್ರೀಲಂಕಾ ಅಧ್ಯಕ್ಷ ಗೋಟಾಬಾಯಾ ರಾಜಪಕ್ಷೆ ಅವರ ನಿವಾಸದಿಂದ ಪರಾರಿ!

ಶ್ರೀಲಂಕಾದ ನಾಗರಿಕರು ಅಪಾರ ಸಂಖ್ಯೆಯಲ್ಲಿ ರಾಷ್ಟ್ರಾಧ್ಯಕ್ಷರ ನಿವಾಸದತ್ತ ಮೆರವಣಿಗೆ ನಡೆಸಿದ ನಂತರ ಅಧ್ಯಕ್ಷ ಗೋಟಾಬಾಯಾ ರಾಜಪಕ್ಷೆ ಅವರು ತಮ್ಮ ನಿವಾಸದಿಂದ ಪಲಾಯನಗೈದರು. ರಾಜಪಕ್ಷೆ ರಾಜೀನಾಮೆಗೆ ನಾಗರಿಕರು ಒತ್ತಾಯಿಸಿದ್ದಾರೆ. ಮೂಲಗಳ ಪ್ರಕಾರ ರಾಜಪಕ್ಷೆಯವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಚೀನ ಸಂಸ್ಥೆಯಾದ ‘ವೀವೋ’ ಕರವನ್ನು ಕಟ್ಟದೇ ಚೀನಾದಲ್ಲಿ ಕಾನೂನು ಬಾಹಿರವಾಗಿ ೬೨ ಸಾವಿರದ ೭೪೬ ಕೋಟಿ ರೂಪಾಯಿಗಳನ್ನು ಕಳುಹಿಸಿದೆ !

ಚೀನಾದ ಸಂಚಾರವಾಣಿ ಸಂಸ್ಥೆಯಾದ ‘ವೀವೋ’ ಕರವನ್ನು ತೆರದೇ ಕಾನೂನುಬಾಹಿರವಾಗಿ ೬೨ ಸಾವಿರದ ೭೪೬ ಕೋಟಿ ರೂಪಾಯಿಗಳನ್ನು ಚೀನಾಗೆ ಕಳುಹಿಸಿರುವ ಮಾಹಿತಿಯು ಬೆಳಕಿಗೆ ಬಂದಿದೆ. ಜ್ಯಾರಿ ನಿರ್ದೇಶನಾಲಯವು (ಇಡಿಯು) ಈ ಮಾಹಿತಿಯನ್ನು ನೀಡಿದೆ.

ನಮ್ಮ ವಿರುದ್ಧ ಯುದ್ಧ ಮಾಡುವುದಕ್ಕಾಗಿ ನೇರ ಯುದ್ಧ ಭೂಮಿಗೆ ಇಳಿಯರಿ ! – ಪಾಶ್ಚಾತ್ಯ ದೇಶಗಳಿಗೆ ಪುತಿನ್ ಸವಾಲು

ಮ್ಮ ವಿರುದ್ಧ ಯುದ್ಧ ಮಾಡುವುದಕ್ಕಾಗಿ ನೇರವಾಗಿ ಯುದ್ಧ ಭೂಮಿಗೆ ಇಳಿಯರಿ, ಎಂದು ರಷ್ಯಾ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್ ಪಾಶ್ಚಾತ್ಯ ದೇಶಗಳಿಗೆ ಸವಾಲು ಹಾಕಿದ್ದಾರೆ. ಕಳೆದ ೪ ತಿಂಗಳುಗಳಿಂದ ರಷ್ಯಾ ಯುಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ.

ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ!

ಸಂಚಾರಿವಾಣಿಯ ಜನಕ ಮಾರ್ಟಿನ ಕೂಪರ ಅವರು ಸಂಚಾರಿವಾಣಿ (ಮೊಬೈಲ್) ಬಳಕೆಯನ್ನು ಕಡಿಮೆ ಮಾಡಲು ಜನರಿಗೆ ಕರೆ ನೀಡಿದ್ದಾರೆ. ಕೂಪರ ಸ್ವತಃ ದಿನದ ಶೇ. ೫ ಸಮಯ ಮಾತ್ರ ಮೊಬೈಲ್ ಬಳಸುತ್ತಾನೆ. ಹಗಲು ರಾತ್ರಿ ಮೊಬೈಲ ಬಳಸುವವರ ಬಗ್ಗೆ ಕೇಳಿದಾಗ ಕೂಪರ “ಅಂತಹವರು ಮೊಬೈಲ ಆಫ ಮಾಡಿ ಸ್ವಲ್ಪ ಜೀವನವನ್ನು ಅನುಭವಿಸಬೇಕು” ಎಂದರು.