ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನದ ಸಹಚರನಿಂದ ಭಾರತೀಯ ಹಿಂದೂ ಪ್ರಜೆಯ ಹತ್ಯೆ

ರಿಯಾಧ (ಸೌದಿ ಅರೇಬಿಯಾ) – ಉತ್ತರಪ್ರದೇಶದ ಜಂಗ ಬಹದ್ದೂರ ಯಾದವ ಕೆಲಸದ ನಿಮಿತ್ತ ಸೌದಿ ಅರೇಬಿಯಾಕ್ಕೆ ತೆರಳಿದಾಗ ಅಲ್ಲಿ ಪಾಕಿಸ್ತಾನಿ ಸಹೋದ್ಯೋಗಿಯು ಹತ್ಯೆ ಮಾಡಿದನು. ಈ ಹತ್ಯೆ ಏಕೆ ಮತ್ತು ಹೇಗೆ ಮಾಡಲಾಯಿತು ಎಂಬುದರ ವಿಸ್ತಾರ ವಿವರ ತಿಳಿದು ಬಂದಿಲ್ಲ. ೨೦೧೭ ರಲ್ಲಿ ಜಂಗ ಬಹಾದ್ದೂರ ಸೌದಿ ಅರೇಬಿಯಾಕ್ಕೆ ಹೋಗಿದ್ದನು. ಅಲ್ಲಿ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಜಂಗ ಬಹಾದ್ದೂರನ ಶವವನ್ನು ಭಾರತಕ್ಕೆ ತರಲು ಸಹಾಯ ಮಾಡಲು ಮತ್ತು ಅರೋಪಿಗಳಿಗೆ ಶಿಕ್ಷೆಯಾಗುವಂತೆ ಪ್ರಯತ್ನಿಸಲು ಅವನ ಕುಟುಂಬವು ಭಾರತ ಸರಕಾರವನ್ನು ವಿನಂತಿಸಿದೆ.